For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಪಾಶುಪತಾಸ್ತ್ರ'ದ ಹಿಂದೆ ರಾಜಕೀಯ.!

  |
  ದರ್ಶನ್ 'ಪಾಶುಪತಾಸ್ತ್ರ'ದ ಹಿಂದೆ ರಾಜಕೀಯ.! | FILMIBEAT KANNADA

  ಕಳೆದ ವರ್ಷ ದರ್ಶನ್ ಸಿನಿಮಾ ಇಲ್ಲದೇ ನಿರಾಸೆಯಾಗಿದ್ದ ಅಭಿಮಾನಿಗಳು ಈ ವರ್ಷ ದರ್ಶನ್ ಉತ್ಸವ ಮಾಡಬಹುದು. ಯಜಮಾನ, ಕುರುಕ್ಷೇತ್ರ, ಒಡೆಯ ಚಿತ್ರಗಳು ಬ್ಯಾಕ್ ಟು ಬ್ಯಾಕ್ ರೆಡಿಯಾಗ್ತಿವೆ. ಇದರ ಜೊತೆಗೆ ಮತ್ತಷ್ಟು ಹೊಸ ಹೊಸ ಸಿನಿಮಾಗಳು ಆರಂಭವಾಗ್ತಿದೆ.

  ತರುಣ್ ಸುಧೀರ್ ಮತ್ತು ಉಮಾಪತಿ ಜೋಡಿಯ ರಾಬರ್ಟ್ ಸಿನಿಮಾ ಈಗಾಗಲೇ ಸೆಟ್ಟೇರಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಸಿನಿಮಾ ದರ್ಶನ್ ಹುಟ್ಟುಹಬ್ಬಕ್ಕೆ ಆರಂಭವಾಗುವ ಸಾಧ್ಯತೆ ಇದೆ.

  ದುರ್ಯೋಧನನ ಹುಟ್ಟುಹಬ್ಬಕ್ಕೆ ನಾಗೇಂದ್ರ ಪ್ರಸಾದ್ ವಿಶೇಷ ಉಡುಗೊರೆ

  ಹೀಗಿರುವಾಗ, ಇನ್ನೊಂದು ಮೆಗಾಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹೊಸಬರ ತಂಡಕ್ಕೆ ದರ್ಶನ್ ಕಾಲ್ ಶೀಟ್ ಕೊಟ್ಟಿದ್ದು, ಆ ಚಿತ್ರಕ್ಕೆ 'ಪಾಶುಪತಾಸ್ತ್ರ' ಎಂದು ಟೈಟಲ್ ಇಡಲಾಗಿದೆಯಂತೆ. ವಿಶೇಷ ಅಂದ್ರೆ, ಈ ಚಿತ್ರದ ಹಿಂದೆ ರಾಜಕೀಯವಿದೆ ಎನ್ನಲಾಗುತ್ತಿದೆ. ಏನಿದು ಪೊಲಿಟಿಕಲ್ ಕಥೆ? ಮುಂದೆ ಓದಿ.....

  ಪಾಶುಪತಾಸ್ತ್ರ ಯಾವ ರೀತಿ ಸಿನಿಮಾ

  ಪಾಶುಪತಾಸ್ತ್ರ ಯಾವ ರೀತಿ ಸಿನಿಮಾ

  'ಪಾಶುಪತಾಸ್ತ್ರ' ಎಂದು ಟೈಟಲ್ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಇರಬಹುದು ಎಂಬ ಅನುಮಾನ ಬರುತ್ತೆ. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ, ಮದಕರಿ ನಾಯಕ ಅಂತಹ ಸಿನಿಮಾ ಮಾಡ್ತಿರುವ ದರ್ಶನ್ 'ಪಾಶುಪತಾಸ್ತ್ರ' ಎಂಬ ಇನ್ನೊಂದು ಪೌರಾಣಿಕ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರಬಹುದು ಎಂಬ ನಿರೀಕ್ಷೆ ಮೂಡಿದೆ. ಆದ್ರೆ, ಇದು ಪೌರಾಣಿಕ ಸಿನಿಮಾ ಅಲ್ಲ, ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಅಂತೆ.

  ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

  ರಾಜಕೀಯ ಮತ್ತು ದರ್ಶನ್

  ರಾಜಕೀಯ ಮತ್ತು ದರ್ಶನ್

  ಈ ನಡುವೆ ಚಾಲೆಂಜಿಂಗ್ ಸ್ಟಾರ್ ರಾಜಕೀಯಕ್ಕೆ ಬರ್ತಾರೆ ಎಂಬ ಅಂತೆ ಕಂತೆಗಳು ಸಿಕ್ಕಾಪಟ್ಟೆ ಹರಿದಾಡಿದೆ. ಹೀಗಿರುವಾಗಲೇ ಪೊಲಿಟಿಕಲ್ ಥ್ರಿಲ್ಲರ್ ಚಿತ್ರಕ್ಕೆ ದಾಸ ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ, ಇದು ಕಂಪ್ಲಿಟ್ ರಾಜಕೀಯದ ಸುತ್ತ ನಡೆಯುತ್ತಾ ಅಥವಾ ದರ್ಶನ್ ಅವರೇ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

  ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋ ಇದೆಯಂತೆ.!

  ಸಿಎಂ ಆಗ್ತಾರಾ ದರ್ಶನ್.!

  ಸಿಎಂ ಆಗ್ತಾರಾ ದರ್ಶನ್.!

  ಹಾಗ್ನೋಡಿದ್ರೆ, ಇಂದಿನ ಯುವ ನಟರು ರಾಜಕೀಯ ಕುರಿತು ಸಿನಿಮಾ ಮಾಡಿ, ಅದರಲ್ಲಿ ಮುಖ್ಯಮಂತ್ರಿ ಪಾತ್ರವನ್ನ ನಿಭಾಯಿಸುತ್ತಿರುವ ಉದಾಹರಣೆಗಳಿವೆ. ತೆಲುಗಿನಲ್ಲಿ ಮಹೇಶ್ ಬಾಬು ಭರತ್ ಅನೆ ನೇನು ಚಿತ್ರದಲ್ಲಿ ಸಿಎಂ ಆಗಿದ್ದರು. ವಿಜಯ ದೇವರಕೊಂಡ ನೋಟ ಚಿತ್ರದಲ್ಲಿ ಸಿಎಂ ಆಗಿದ್ದರು. ತಮಿಳಿನ ಸರ್ಕಾರ್ ಚಿತ್ರದಲ್ಲಿ ವಿಜಯ್ ಅದೇ ಪ್ಯಾಟ್ರನ್ ಸಿನಿಮಾ ಮಾಡಿದ್ದರು. ಬಹುಶಃ ನಮ್ಮಲ್ಲೂ ಈ ರೀತಿ ಸಿನಿಮಾ ಮಾಡಲು ಯೋಚನೆ ಮಾಡಿರಬಹುದು.

  'ಕುರುಕ್ಷೇತ್ರ'ದ ಬಗ್ಗೆ 'ಅದೊಂದು' ಬಿಟ್ಟು ಎಲ್ಲ ಹೇಳಿದ್ರು ನಿರ್ಮಾಪಕ ಮುನಿರತ್ನ

  ಸಂಪೂರ್ಣ ಹೊಸ ತಂಡ

  ಸಂಪೂರ್ಣ ಹೊಸ ತಂಡ

  ಅಂದ್ಹಾಗೆ, ಪಾಶು ಪತಾಸ್ತ್ರ ಸಿನಿಮಾ ಮಾಡ್ತಿರುವುದು ಯಾರು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಇಬ್ಬರು ಹೊಸಬರೇ ಮತ್ತು ಇಬ್ಬರು ಸಹೋದರರಂತೆ. ಕಂಪ್ಲೀಟ್ ಹೊಸ ತಂಡದ ಜೊತೆ ಡಿ ಬಾಸ್ ಕೆಲಸ ಮಾಡಲಿದ್ದಾರಂತೆ. ದರ್ಶನ್ ಬರ್ತಡೇ ಪ್ರಯುಕ್ತ ಈ ಸಿನಿಮಾಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ ನಲ್ಲಿ ಶೂಟಿಂಗ್ ಮಾಡಬಹುದಂತೆ.

  'ಪದ್ಮಾವತಿ' ಸಾಮ್ರಾಟ್ ಜೀವನದಲ್ಲಿ 'ಡಿ-ಬಾಸ್' ಟರ್ನಿಂಗ್ ಪಾಯಿಂಟ್.!

  English summary
  Challenging star darshan will be doing pashupatastra movie with newcomers. this project going to be announced on darshan birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X