For Quick Alerts
  ALLOW NOTIFICATIONS  
  For Daily Alerts

  ವಿವಾದದ ಬಳಿಕ ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಔಟ್?!

  |

  ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ವಿವಾಹ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೊದಲು ಈ ಜೋಡಿ ಗುಟ್ಟಾಗಿ ಮದುವೆಯಾಗಿದೆ ಎನ್ನುವ ವದಂತಿಗಳು ಹಬ್ಬಿದರೆ, ನಂತರ ಈ ಜೋಡಿ ಮದುವೆ ಆಗುತ್ತೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಈ ವಿವಾದ ಜೋರಾಗಿ ಸದ್ದು ಮಾಡುತ್ತಲೇ, ನಾವು ಬೆಸ್ಟ್ ಫ್ರೆಂಡ್ಸ್ ಎಂದು ಸಂದರ್ಶನದಲ್ಲಿ ಹೇಳಿಕೊಂಡರು.

  ಅದೇನೆ ಇದ್ದರೂ ಈ ಜೋಡಿಯ ಈ ವಿವಾದ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ಇತ್ತ ಕನ್ನಡದ ಪೋಷಕ, ನಟ ಪವಿತ್ರ ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಹೊರಬಿದ್ದಿದೆ.

  HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?

  ಹೀಗೆ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣಕ್ಕೆ ನಟಿ ಪವಿತ್ರಾ ಲೋಕೇಶ್ ಅವರು ತಮ್ಮ ಸಿನಿಮಾ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಯಾವ ಸಿನಿಮಾದಿಂದ ಪವಿತ್ರಾ ಲೋಕೇಶ್ ಅವರನ್ನು ಕೈಬಿಡಲಾಗಿದೆ ಎಂಬುದನ್ನು ಮುಂದೆ ಓದಿ...

  ತೆಲುಗು ಚಿತ್ರಗಳಿಂದ ಹೊರಬಿದ್ದರೆ ಪವಿತ್ರ ಲೋಕೇಶ್?

  ತೆಲುಗು ಚಿತ್ರಗಳಿಂದ ಹೊರಬಿದ್ದರೆ ಪವಿತ್ರ ಲೋಕೇಶ್?

  ಸದ್ಯ ತೆಲುಗು ಸಿನಿಮಾ ರಂಗದಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರ ಮದುವೆ ವಿವಾದ ಜೋರಾಗಿ ಸದ್ದು ಮಾಡುತ್ತದೆ. ನರೇಶ್ ತೆಲುಗಿನ ದೊಡ್ಡ ನಟ ಹಾಗೂ ದೊಡ್ಡ ಸ್ಟಾರ್ ನಟರ ಕುಟುಂಬದವರಾದ ಕಾರಣ ತೆಲುಗು ಚಿತ್ರರಂಗದಲ್ಲಿ ವಿವಾದ ಭುಗಿಲೆದ್ದಿದೆ. ಈ ವಿವಾದದ ಬೆನ್ನಲ್ಲೇ ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಮತ್ತೊಂದು ಗಾಸಿಪ್ ಹಬ್ಬಿದೆ. ಅದೇನೆಂದರೆ ತೆಲುಗು ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು ತೆಗೆದು ಹಾಕಲಾಗುತ್ತಿದೆ ಎನ್ನುವ ವದಂತಿ ಹಬ್ಬಿದೆ. ಈಗಾಗಲೇ ಅವರು ಒಪ್ಪಿಕೊಂಡಿರುವ ಎರಡು ದೊಡ್ಡ ತೆಲುಗು ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು ಕೈಬಿಡಲಾಗಿದೆ ಎನ್ನಲಾಗುತ್ತಿದೆ.

  ಪವಿತ್ರಾ ಲೋಕೇಶ್ ಮತ್ತು ನರೇಶ್ ಮೇಲೆ ಕಿಡಿಕಾರಿದ ತೆಲುಗು ನಟಿ ಶ್ರೀರೆಡ್ಡಿ!ಪವಿತ್ರಾ ಲೋಕೇಶ್ ಮತ್ತು ನರೇಶ್ ಮೇಲೆ ಕಿಡಿಕಾರಿದ ತೆಲುಗು ನಟಿ ಶ್ರೀರೆಡ್ಡಿ!

  ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಹೊರಗೆ?

  ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಹೊರಗೆ?

  ಹೌದು ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ. ಈಗಾಗಲೇ ಪವಿತ್ರಾ ಲೋಕೇಶ್ ಅವರು ಒಪ್ಪಿಕೊಂಡಿರುವ ಎರಡು ದೊಡ್ಡ ತೆಲುಗು ಸಿನಿಮಾಗಳಿಂದ ಅವರ ಹೆಸರನ್ನು ಕೈಬಿಡಲಾಗಿದೆಯಂತೆ. ಪವಿತ್ರಾ ಲೋಕೇಶ್ ಅವರನ್ನು ತಾಯಿಯ ಪಾತ್ರಕ್ಕಾಗಿ ಆರಿಸಿಕೊಳ್ಳಲಾಗಿತ್ತು. ತಾಯಿ ಪಾತ್ರ ಎಂದರೆ ಅದು ಪರಿಪೂರ್ಣವಾಗಿರಬೇಕು ಎನ್ನುವ ಕಾರಣಕ್ಕೆ ಪವಿತ್ರಾ ಲೋಕೇಶ್ ಅವರ ವಿವಾದದ ಬೆನ್ನಲ್ಲೇ ಅವರನ್ನು ಸಿನಿಮಾದಿಂದ ಕೈ ಬಿಡಲಾಗಿದೆ ಎನ್ನುವ ಸುದ್ದಿ ಹಬ್ಬಿದೆ. ಆದರೆ ಆ ಸಿನಿಮಾಗಳು ಯಾವುವು, ಯಾವ ಸ್ಟಾರ್ ನಟನಿಗೆ ಪವಿತ್ರಾ ಲೋಕೇಶ್ ತಾಯಿಯ ಪಾತ್ರ ಮಾಡಬೇಕಿತ್ತು ಎನ್ನುವ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

  ಮೈಸೂರಿನಲ್ಲಿ ಒಟ್ಟಿಗೆ ಇದ್ದ ನರೇಶ್, ಪವಿತ್ರ ಲೋಕೇಶ್!

  ಮೈಸೂರಿನಲ್ಲಿ ಒಟ್ಟಿಗೆ ಇದ್ದ ನರೇಶ್, ಪವಿತ್ರ ಲೋಕೇಶ್!

  ನರೇಶ್ ಪತ್ನಿ ರಮ್ಯಾ ರಘುಪತಿ, ಪವಿತ್ರಾ ಲೋಕೇಶ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಚಪ್ಪಲಿಯಲ್ಲಿ ಹೊಡೆಯ ಮಟ್ಟಕ್ಕೆ ಹೋಗಿತ್ತು. ನರೇಶ್, ಪವಿತ್ರಾ ಲೋಕೇಶ್ ಜೊತೆ ಮೈಸೂರಿನ ಹೋಟೆಲ್‌ನಲ್ಲಿ ತಂಗಿದ್ದ ಮಾಹಿತಿ ತಿಳಿದು, ರಮ್ಯಾ ಅಲ್ಲಿಗೆ ಎಂಟ್ರಿ ಕೊಟ್ಟಿದ್ದರು. ಬೆಳ್ಳಂಬೆಳಗ್ಗೆ ಇಬ್ಬರು ತಂಗಿದ್ದ ಹೋಟೇಲ್ ರೂಂ ಬಾಗಿಲು ಬಡಿದು ರಂಪಾಟ ಮಾಡಿದ್ದರು. ಈ ವಿಚಾರದಲ್ಲಿ ನನಗೆ ನ್ಯಾಯ ಬೇಕು ಎಂದು ಹೇಳಿದ್ದರು.

  ನರೇಶ್- ಪವಿತ್ರಾ ಲೋಕೇಶ್ ವಿವಾದ: ತೆಲುಗು ನಟನ ಮೂವರು ಪತ್ನಿಯರ ಹಿನ್ನೆಲೆ ಏನು?ನರೇಶ್- ಪವಿತ್ರಾ ಲೋಕೇಶ್ ವಿವಾದ: ತೆಲುಗು ನಟನ ಮೂವರು ಪತ್ನಿಯರ ಹಿನ್ನೆಲೆ ಏನು?

  ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದರು!

  ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದರು!

  ಪವಿತ್ರಾ ಲೋಕೇಶ್, ನರೇಶ್ ಇಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದರು. ಆದರೆ ಒಟ್ಟಿಗೆ ಹೋಟೆಲ್ ರೂಂನಲ್ಲಿ ತಂಗಿದ್ದಾರೆ. ಇದಕ್ಕೆ ಏನು ಹೇಳಬೇಕು ಎಂದು ನರೇಶ್ ಪತ್ನಿ ರಮ್ಯಾ ಕಿಡಿ ಕಾರಿದ್ದರು. ಈ ಎಲ್ಲಾ ಪ್ರಕರಣಗಳ ಬಳಿಕ ಇದೀಗ ಪವಿತ್ರಾ ಲೋಕೇಶ್ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ನರೇಶ್ ಜೊತೆಗಿನ ಮದುವೆ ವಿವಾದದ ಬಳಿಕ ಪವಿತ್ರಾ ಲೋಕೇಶ್ ಅವರಿಗೆ ಸಿನಿಮಾಗಳ ಆಫರ್ ಬರುತ್ತಿಲ್ಲ, ಈಗಾಗಲೇ ಪವಿತ್ರಾ ಲೋಕೋಶ್ ಸಹಿ ಮಾಡಿದ್ದ ಸಿನಿಮಾಗಳಿಂದಲೂ ಸಹ ಅವರನ್ನು ದೂರ ಇಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Pavithra Lokesh Replaced In Telugu Movies After Wedding Controversy With Naresh, Know More,
  Tuesday, July 5, 2022, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X