»   » ಪೂನಂ ಪಾಂಡೆ ಭಕ್ತರಿಗೆ ಉಪವಾಸ ಗ್ಯಾರಂಟಿ

ಪೂನಂ ಪಾಂಡೆ ಭಕ್ತರಿಗೆ ಉಪವಾಸ ಗ್ಯಾರಂಟಿ

Posted By:
Subscribe to Filmibeat Kannada

ನಕಲಿ ಪೂನಂ ಪಾಂಡೆಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಭಯಂಕರ ಬೆತ್ತಲೆ ತಾರೆ ಪೂನಂ ಪಾಂಡೆ ತಮ್ಮ ಸಾಮಾಜಿಕ ಜಾಲ ತಾಣಗಳ ಅಕೌಂಟ್ ಕ್ಲೋಸ್ ಮಾಡುವ ಸೂಚನೆ ನೀಡಿದ್ದಾಳೆ.

ಈ ಸುದ್ದಿ ಕೇಳಿ ಪಡ್ಡೆಗಳಿಗೆ ತೀವ್ರ ನೋವು ಉಂಟಾಗಿದೆ. ದಯವಿಟ್ಟು ನಮ್ಮನ್ನು ಬಿಟ್ಟು ಹೋಗಬೇಡ ಎಂದು ದುಂಬಾಲು ಬಿದ್ದಿದ್ದಾರಂತೆ.

ಇತ್ತೀಚೆಗೆ ಅಪರೂಪಕ್ಕೆ ಟೈಟ್ ಜೀನ್ಸ್ ಹಾಕಿಕೊಂಡು ದಷ್ಟಪುಷ್ಟ ಪೃಷ್ಠ ತೋರಿಸಿದ್ದ ಪೂನಂ, ನನ್ನ ಸೊಂಟದ ಮುಂದೆ ಕರೀನಾಳದ್ದು ಏನಿಲ್ಲ ಎಂದು ಹೇಳಿದ್ದಾಳೆ. ಸರಿಯಾದ ಬ್ರಾ ಸಿಗದೆ ಸಮಸ್ಯೆಯಾಗುತ್ತಿದೆ. ಬ್ರಾ ತೊಡುವುದನ್ನೆ ಬಿಟ್ಟು ಬಿಟ್ಟಿದ್ದೇನೆ ಎಂದು ಮತ್ತೊಮ್ಮೆ ಟ್ವೀಟ್ ಮಾಡುವ ಈಕೆ ಸದಾ ಚಾಲ್ತಿಯಲ್ಲಿರುವ ತಾರೆ.

ಬಿಟ್ಟಿ ಪ್ರಚಾರ ಪ್ರಿಯೆ ಪೂನಂ ಪಾಂಡೆಗೆ ಸಾಮಾಜಿಕ ಜಾಲ ತಾಣ ಎರಡನೇ ಬಚ್ಚಲ ಮನೆಯಾಗಿತ್ತ್ತು ಎಂದರೆ ತಪ್ಪಾಗಲಾರದು. ಆಕೆ ದೇಹದ ಮೇಲಿನ ಬಟ್ಟೆ ಒಂದು ನೂಲು ಕಳಚಿದರೂ ದೊಡ್ಡ ಸುದ್ದಿಯಾಗುತ್ತಿತ್ತು. ಟ್ವಿಟ್ಟರ್ ಮೂಲಕ ಸಕತ್ ಮಜಾ ತಗೊಳ್ಳುತ್ತಿದ್ದ ಪೂನಂಗೆ ಈಗ ಟ್ವಿಟ್ಟರ್ ಸಹವಾಸ ಸಾಕೆನಿಸಿದೆಯಂತೆ.

ತನ್ನದೇ ಹೆಸರಿನಲ್ಲಿ ಸುಮಾರು 700ಕ್ಕೂ ಅಧಿಕ ಫೇಕ್ ಅಕೌಂಟ್ ಗಳು ಕಾಣಿಸಿಕೊಂಡ ಮೇಲೆ  ಬಿಕಿನಿ ರಾಣಿಗೆ ಸಮಸ್ಯೆ ಎದುರಾಗಿದೆ. ಪೂನಂ ಖಾತೆಗಿಂತ ನಕಲಿ ಖಾತೆಗಳಿಂದ ಫೋಟೋ, ವಿಡಿಯೋಗಳು ಧಾರಾಳವಾಗಿ ಹರಿಯತೊಡಗಿತ್ತು.

ತನ್ನ ಅಕೌಂಟ್ ಅಧಿಕೃತ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಇನ್ನೂ ಗುರುತಿಸಿಲ್ಲ. ಉಳಿದ ನಕಲಿ ಖಾತೆ ಕಂಡು ನನಗೆ ತಳಮಳವಾಗಿದೆ ಎಂದು ಪೂನಂ ಹೇಳಿದ್ದಾರೆ.

"More than 700 FAKE Twitter profiles with my Name and Pix.. unless my account is VERIFIED wont Post any PIX, Videos.(sic)". ಎಂದು ಪೂನಂ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಕಂಡ ಮೇಲೆ ಆಕೆ ಅಭಿಮಾನಿಗಳ ಹೃದಯ ಒಡೆದು ಚೂರಾಗಿದೆ. ಆದಷ್ಟು ಬೇಗ ಪೂನಂ ಖಾತೆ ಅಧಿಕೃತ ಎಂದು ಘೋಷಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಟ್ವಿಟ್ಟರ್ ಸಂಸ್ಥೆಗೆ ಅಭಿಮಾನಿಗಳು ನೋವು ತುಂಬಿದ ಮನವಿ ಮಾಡಿದ್ದಾರೆ.

ನಕಲಿ ಖಾತೆಗಳು ಬಂದ್ ಆಗುವ ತನಕ ಪೂನಂ ಪಾಂಡೆ ಭಕ್ತರಿಗೆ ಉಪವಾಸ ಗ್ಯಾರಂಟಿ.

ದಿನಕ್ಕೊಂದು ಬಿಕಿನಿ ಫೊಟೋ...ವಾರಕ್ಕೊಂದು ನಗ್ನ ಫೋಟೋವನ್ನು ಪೋಸ್ಟ್ ಮಾಡುತ್ತಾ ಮಾಡುತ್ತಾ ಈಗಾಗಲೆ ಈಕೆ ಲಕ್ಷಗಟ್ಟಲೆ ಅಭಿಮಾನಿಗಳನ್ನು ಟ್ವಿಟ್ಟರ್ ನಲ್ಲಿ ಸಂಪಾದಿಸಿದ ಮೇಲೆ ಆಕೆಯಿಂದ ಟ್ವಿಟ್ಟರ್ ಗೂ ಕೂಡಾ ಲಾಭವಾಗಿದೆ.

ಜಾಹೀರಾತಿನ ಮೂಲಕ ಬರುವ ಹಣದಲ್ಲಿ ಒಂದಿಷ್ಟು ಆಕೆಗೂ ಸಲ್ಲುತ್ತಿದೆ ಎಂಬ ಸುದ್ದಿ ಇದೆ. ಹೀಗಾಗಿ ಪೂನಂ ಕಳೆದುಕೊಳ್ಳುವುದು ಟ್ವಿಟ್ಟರ್ ಗೂ ಕಷ್ಟ ಕಷ್ಟ

English summary
Poonam Pandey to quit Twitter: Poonam reportedly tweeted - "More than 700 FAKE Twitter profiles with my Name and Pix.. unless my account is VERIFIED wont Post any PIX, Videos.(sic)".
Please Wait while comments are loading...