For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ ಪ್ರಭಾಸ್‌ಗೆ ಲಂಡನ್‌ನಲ್ಲಿ ಸರ್ಜರಿ; ಅಂಥದ್ದೇನಾಯ್ತು?

  |

  ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಸಖತ್ ಸೌಂಡ್ ಮಾಡ್ತಿದ್ದಾರೆ. 'ಆದಿಪುರುಷ್' ಸಿನಿಮಾ ಶೂಟಿಂಗ್ ಮುಗಿಸಿರೋ ಡಾರ್ಲಿಂಗ್ 'ಪ್ರಾಜೆಕ್ಟ್- K' ಸಿನಿಮಾದಲ್ಲಿ ನಟಿಸ್ತಿದ್ದಾರೆ. ಆದರೆ ಚಿತ್ರೀಕರಣದ ನಡುವೆಯೇ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಪ್ರಭಾಸ್‌ ಲಂಡನ್‌ಗೆ ತೆರಳಿದ್ದಾರೆ.

  ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿ ದತ್ ಬಹುಕೋಟಿ ವೆಚ್ಚದಲ್ಲಿ 'ಪ್ರಾಜೆಕ್ಟ್- K' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಕ್ಷನ್ ಸನ್ನಿವೇಶದ ಚಿತ್ರೀಕರಣದಲ್ಲಿ ಪ್ರಭಾಸ್ ಎಡಗಾಲಿಗೆ ಚಿಕ್ಕ ಪೆಟ್ಟಾಗಿತ್ತು. ಇದೇ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸಿ ಶಸ್ತ್ರ ಚಿಕಿತ್ಸೆಗಾಗಿ ಯಂಗ್‌ ರೆಬಲ್ ಸ್ಟಾರ್ ಫಾರಿನ್ ಫ್ಲೈಟ್ ಏರಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ಮಾಪಕ ಅಶ್ವಿನಿ ದತ್ ಹೇಳಿರುವುದಾಗಿ ವರದಿಯಾಗಿದೆ.

  ಪ್ರಭಾಸ್ ಜೊತೆ ನಟಿಸಲು ಸಿದ್ಧ ಎಂದ ಸುದೀಪ್? ಆದರೆ ಒಂದು ಕಂಡೀಷನ್!ಪ್ರಭಾಸ್ ಜೊತೆ ನಟಿಸಲು ಸಿದ್ಧ ಎಂದ ಸುದೀಪ್? ಆದರೆ ಒಂದು ಕಂಡೀಷನ್!

  ದುಲ್ಕರ್ ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರೋ 'ಸೀತಾ ರಾಮಂ' ಚಿತ್ರವನ್ನು ಅಶ್ವಿನಿ ದತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ಪ್ರಭಾಸ್ ಮುಖ್ಯ ಅತಿಥಿಯಾಗಿ ಬರಬೇಕಿತ್ತು. ಆದರೆ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಅವರು ವಿದೇಶದಲ್ಲಿ ಇರುವುದರಿಂದ ಸಾಧ್ಯವಾಗಲಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ. 'ಸೀತಾ ರಾಮಂ' ಸಿನಿಮಾ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರಲಿದೆ.

   ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಡಾರ್ಲಿಂಗ್

  ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಡಾರ್ಲಿಂಗ್

  'ಬಾಹುಬಲಿ' ಸರಣಿ ನಂತರ ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. 'ಸಾಹೋ' ಹಾಗೂ 'ರಾಧ್ಯೆ-ಶ್ಯಾಮ್' ಆದಮೇಲೆ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಮತ್ತು ನಾಗ್‌ ಅಶ್ವಿನ್ ಸಾರಥ್ಯದ 'ಪ್ರಾಜೆಕ್ಟ್- K' ಸಿನಿಮಾಗಳ ಚಿತ್ರೀಕರಣ ಈಗ ನಡೀತಿದೆ. 'ಸ್ಪಿರಿಟ್' ಅನ್ನುವ ಮತ್ತೊಂದು ಚಿತ್ರದಲ್ಲೂ ಪ್ರಭಾಸ್ ನಟಿಸಲಿದ್ದಾರೆ.

  ಡಾರ್ಲಿಂಗ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್: 'ಸಲಾರ್' ಟೀಸರ್ ಡೇಟ್ ಸುಳಿವು ಕೊಟ್ಟ ಆರ್ಟ್ ಡೈರೆಕ್ಟರ್ಡಾರ್ಲಿಂಗ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್: 'ಸಲಾರ್' ಟೀಸರ್ ಡೇಟ್ ಸುಳಿವು ಕೊಟ್ಟ ಆರ್ಟ್ ಡೈರೆಕ್ಟರ್

   ಹೋಟೆಲ್ ಉದ್ಯಮಕ್ಕೆ ಪ್ರಭಾಸ್‌?

  ಹೋಟೆಲ್ ಉದ್ಯಮಕ್ಕೆ ಪ್ರಭಾಸ್‌?

  ಚಿತ್ರವೊಂದಕ್ಕೆ ಅಂದಾಜು 100 ಕೋಟಿ ರೂ. ಸಂಭಾವನೆ ಪಡೆಯುವ ಪ್ರಭಾಸ್‌ ಹೋಟೆಲ್ ಉದ್ಯಮಕ್ಕೆ ಅಡಿ ಇಡಲು ನಿರ್ಧರಿಸಿದ್ದಾರಂತೆ. ಭಾರತದಲ್ಲಿ ಮಾತ್ರವಲ್ಲದೇ ದುಬೈ, ಸ್ಪೇನ್ ಸೇರಿದಂತೆ ವಿದೇಶಗಳಲ್ಲೂ ಹೋಟೆಲ್‌ ಬ್ಯುಸಿನೆಸ್‌ಗೆ ಚರ್ಚೆ ನಡೆಸ್ತಿದ್ದಾರೆ ಅಂತ ಟಾಲಿವುಡ್‌ನಲ್ಲಿ ಗುಸು ಗುಸು ಶುರುವಾಗಿದೆ.

   ಹಾರರ್ ಕಾಮಿಡಿ ಚಿತ್ರದಲ್ಲಿ ಬಿಲ್ಲಾ

  ಹಾರರ್ ಕಾಮಿಡಿ ಚಿತ್ರದಲ್ಲಿ ಬಿಲ್ಲಾ

  ಬರೀ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲೇ ನಟಿಸ್ತಿರೋ ಪ್ರಭಾಸ್ ಒಂದು ಹಾರರ್ ಕಾಮಿಡಿ ಚಿತ್ರಕ್ಕೂ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಅನ್ನುವ ಸುಳಿವು ಸಿಕ್ತಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಸಹ ನಟಿಸೋ ಸಾಧ್ಯತೆ ಇದೆಯಂತೆ. ಅಂದಹಾಗೆ 'ರಾಜಾ ಡೀಲಕ್ಸ್' ಹೆಸರಿನ ಥಿಯೇಟರ್‌ನಲ್ಲೇ ಬಹುತೇಕ ಕಥೆ ನಡೆಯಲಿದ್ದು, ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ. 'ಆರ್‌ಆರ್‌ಆರ್' ಸಿನಿಮಾ ನಿರ್ಮಿಸಿದ ಡಿವಿವಿ ದಾನಯ್ಯ 'ರಾಜಾ ಡೀಲಕ್ಸ್' ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

   ಪ್ರಭಾಸ್ ಜೊತೆ ನಟಿಸಲು ಸೈ ಎಂದ ಕಿಚ್ಚ

  ಪ್ರಭಾಸ್ ಜೊತೆ ನಟಿಸಲು ಸೈ ಎಂದ ಕಿಚ್ಚ

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್, ಬಾಹುಬಲಿ ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ನಟನೆಯ ಸರಿಯಾದ ಅವಕಾಶ ಇರುವ ಪಾತ್ರ ಸಿಕ್ಕಿದ್ರೆ, ನಟಿಸ್ತೀನಿ. ಆದರೆ ಒಂದು ಕಂಡಿಷನ್. ವಿಲನ್ ರೋಲ್ ಮಾತ್ರ ಮಾಡೋದಿಲ್ಲ ಎಂದಿದ್ದಾರೆ.

  English summary
  Prabhas Went To London For A Minor Surgery. Know More.
  Friday, July 29, 2022, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X