»   » ಪ್ರಿಯಾಮಣಿ ಡಿಂಗ್ ಡಾಂಗ್ ಚಿತ್ರಗಳ ರಾದ್ಧಾಂತ

ಪ್ರಿಯಾಮಣಿ ಡಿಂಗ್ ಡಾಂಗ್ ಚಿತ್ರಗಳ ರಾದ್ಧಾಂತ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಚಿತ್ರರಸಿಕರ ಕಣ್ಮಣಿ ಪ್ರಿಯಾಮಣಿ ಆಂಧ್ರಪ್ರದೇಶದಲ್ಲಿ ಸಖತ್ ಸುದ್ದಿ ಮಾಡಿದ್ದಾರೆ. ಅವರ ಹಾಟ್ ಹಾಟ್ ಚಿತ್ರಗಳು ಅಲ್ಲಿನ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿವೆ. ಟಾಲಿವುಡ್ ನಲ್ಲಿ ಪ್ರಿಯಾಮಣಿ ಹೇಳಿಕೊಳ್ಳುವಂತಹ ಹಿಟ್ ಚಿತ್ರಗಳೇನು ಕೊಟ್ಟಿಲ್ಲ. ಆದರೂ ತೆರೆ ತುಂಬ ತಮ್ಮ ಸೌಂದರ್ಯವನ್ನು ತೆರೆದಿಟ್ಟು ತಮ್ಮ ಸೀಮಿತ ಮಾರುಕಟ್ಟೆ ಉಳಿಸಿಕೊಂಡಿದ್ದಾರೆ.

ಆರ್ ಚಂದ್ರು ನಿರ್ದೇಶನದ "ಕೋ ಕೋ" ಚಿತ್ರ ತೆಲುಗು ಭಾಷೆಯಲ್ಲಿ ರೀಮೇಕ್ ಆಗುತ್ತಿದೆ. ಈ ಚಿತ್ರದ ಅಡಿಬರಹ "ಕೋಳಿ ಕೋತಿ" ಎಂಬುದು ಗೊತ್ತೇ ಇದೆ. ತೆಲುಗಿನಲ್ಲಿ ಚಿತ್ರಕ್ಕೆ 'ತಿಕ್ಕ' (ಐಲು, ತಿಕ್ಕಲು ಎಂದರ್ಥ) ಎಂದು ಹೆಸರಿಡಲಾಗಿದೆ.

ಈ ಚಿತ್ರಕ್ಕೆ ಸಂಬಂಧಿಸಿದ ಹಾಟ್ ಸ್ಟಿಲ್ ಗಳು ಬಿಡುಗಡೆಯಾಗಿದ್ದು ಚಿತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾಮಣಿ ಸ್ಕಿನ್ ಶೋ ವಿರುದ್ಧ ಅಲ್ಲಿ ಕೋತಿ ಕೋಳಿ ಜಗಳ ಶುರುವಾಗಿದೆ. ಶ್ರೀನಗರ ಕಿಟ್ಟಿ ಹಾಗೂ ಪ್ರಿಯಾಮಣಿ ನಡುವಿನ ಹಾಡಿನ ಸನ್ನಿವೇಶದ ದೃಶ್ಯಗಳು ಸಖತ್ ಹಾಟ್ ಆಗಿದ್ದು ಹೊಸ ಚರ್ಚೆಗೆ ನಾಂದಿ ಹಾಡಿವೆ.

ಈ ಚಿತ್ರದಲ್ಲಿ ಪ್ರಿಯಾಮಣಿ ಅವರ ವಸ್ತ್ರಧಾರಣೆ ಅಸಭ್ಯವಾಗಿದೆ ಎಂದು ಆರೋಪಿಸಿ ಸುಬುದ್ಧಿ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರಗಳು ಸ್ಲೈಡ್ ಗಳಲ್ಲಿ ನೋಡಿ.

ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ

ಕನ್ನಡದಲ್ಲಿ ಒಳ್ಳೆ ಓಪನಿಂಗ್ ಪಡೆದ 'ಕೋ ಕೋ' ಚಿತ್ರವನ್ನು ತೆಲುಗು ಪ್ರೇಕ್ಷಕರ ಅಭಿರುಚಿ, ಮನೋಭಾವಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ತೆರೆಗೆ ತರಲಾಗುತ್ತಿದೆ.

ಭಾರಿ ಸದ್ದು ಮಾಡಿದ ಪ್ರಿಯಾಮಣಿ

ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಹರ್ಷಿಕಾ ಪೂಣಚ್ಚ, ಸಂಜನಾ, ತೆಲುಗಿನ ಶ್ರೀಹರಿ ಮುಂತಾದವರು ಕನ್ನಡದ 'ಕೋ ಕೋ' ಚಿತ್ರದಲ್ಲಿ ಅಭಿನಯಿಸಿದ್ದರು. ಚಿತ್ರವೂ ಒಂದು ಮಟ್ಟಿಗೆ ಹಿಟ್ ಆಗಿತ್ತು. ನಿರ್ದೇಶಕ ಆರ್. ಚಂದ್ರು ಬಗ್ಗೆ ಕೆಲವೊಂದು ಟೀಕೆಗಳು ಕೇಳಿ ಬಂದರೂ, ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಸಾಧಿಸಿತ್ತು.

ಕಿಟ್ಟಿ ಜೊತೆಗಿನ ಹಾಟ್ ದೃಶ್ಯಗಳು

ಕನ್ನಡದಲ್ಲಿ 'ಗಂಡ ಹೆಂಡತಿ' ಸಂಜನಾ ಹಾಡೊಂಡರಲ್ಲಿ ಕುಣಿದಿದ್ದರು. ಈಗ ಇದೇ ಹಾಡಿಗೆ ತೆಲುಗಿನಲ್ಲಿ ಪ್ರಿಯಾಮಣಿ ಹೆಜ್ಜೆ ಹಾಕಿದ್ದಾರೆ. ಶೇ.20ರಷ್ಟು ತೆಲುಗು ಕಲಾವಿದರನ್ನು ಬಳಸಿಕೊಂಡು ಮರು ಚಿತ್ರೀಕರಣ ಮಾಡಲಾಗಿದೆ. ಶ್ರೀನಗರ ಕಿಟ್ಟಿ ಹಾಗೂ ಪ್ರಿಯಾಮಣಿ ಅಲ್ಲೂ ಇರುತ್ತಾರೆ. ಇದು ಬಿಟ್ಟರೆ ಇನ್ನೇನು ಬದಲಾವಣೆಗಳು ಇರುವುದಿಲ್ಲ.

ಪ್ರಿಯಾಮಣಿ ವಿರುದ್ಧ ಆರೋಪ

ಸರಿ ಸುಮಾರು ರು.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಕೋ ಕೋ ಚಿತ್ರ ಸದ್ಯಕ್ಕೆ ತೆಲುಗಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಪ್ರಿಯಾಮಣಿ ವಸ್ತ್ರಧಾರಣೆ ಅಸಭ್ಯವಾಗಿದೆ ಎಂದು ಆರೋಪಿಸಿ ಸುಬುದ್ಧಿ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಸಭ್ಯ ವಸ್ತ್ರಧಾರಣೆ ಎಂದು ಕೇಸ್?

ಐಪಿಸಿ ಸೆಕ್ಷನ್ಸ್ 120-B, 292, 420, ಇಂಡಿಯನ್ ರೆಪ್ರಸೆಂಟೇಷನ್ ಆಫ್ ವುಮನ್ ಆಕ್ಟ್, 1986ರ 3, 6ರ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಲು ಸುಬುದ್ಧಿ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದಾರೆ.

ಅನುಷ್ಕಾ ವಿರುದ್ಧವೂ ಅದೇ ಆರೋಪ

ಪ್ರಿಯಾಮಣಿ ಮೇಲೆ ಅಷ್ಟೇ ಅಲ್ಲದೆ ಮತ್ತೊಬ್ಬ ನಾಯಕಿ ಅನುಷ್ಕಾ ಶೆಟ್ಟಿ ಮೇಲೂ ಕೇಸು ದಾಖಲಿಸಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಮುಂದೇನಾಗುತ್ತದೋ ಗೊತ್ತಿಲ್ಲ.

English summary
Kannada movie 'Ko Ko' has been dubbed in Telugu as Thikka. The sensuous photos of the actress Priyamani with Srinagara Kitty are selling like hot cakes on internet. But the worrying factor is that those photos have put her in trouble.
Please Wait while comments are loading...