For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗ್ತಾರಂತೆ.!

  By Harshitha
  |
  ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ಮಾಪಕ ಈಗ ಏನ್ ಮಾಡ್ತಿದ್ದಾರೆ ನೋಡಿ | FIlmibeat Kannada

  'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಹಂಬಲ್ ಪೊಲಿಟೀಶಿಯನ್ ನಾಗರಾಜ್', 'ಭೀಮಸೇನ ನಳ ಮಹಾರಾಜ', 'ಅವನೇ ಶ್ರೀಮನ್ನಾರಾಯಣ', 'ಕಥೆಯೊಂದು ಶುರುವಾಗಿದೆ' ಸಿನಿಮಾಗಳಿಗೆ ಬಂಡವಾಳ ಹಾಕಿರುವ, ಕೆಲ ಚಿತ್ರಗಳನ್ನು ವಿತರಣೆ ಮಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಗ್ಗೆ ಹೊಸ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.

  ಇಷ್ಟು ದಿನ ಸಿನಿಮಾಗಳಿಗೆ ಬಂಡವಾಳ ಹಾಕುತ್ತಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ಬರಲು ನಿರ್ಧರಿಸಿದ್ದಾರೆ.

  ಹೌದು, ಸಿನಿಮಾವೊಂದಕ್ಕೆ ಹೀರೋ ಆಗಲು ಪುಷ್ಕರ್ ಮಲ್ಲಿಕಾರ್ಜುನಯ್ಯ ಮನಸ್ಸು ಮಾಡಿದ್ದಾರೆ. ಈಗಾಗಲೇ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗುವ ಚಿತ್ರದ ಕಥೆ ಸಿದ್ಧವಾಗಿದೆ. ಸ್ಕ್ರಿಪ್ಟ್ ಓದಿ ಇಷ್ಟ ಪಟ್ಟಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ತಾವೇ ಹೀರೋ ಆಗಲು ಮುಂದೆ ಬಂದಿದ್ದಾರೆ.

  ರಕ್ಷಿತ್ ಶೆಟ್ಟಿ ಇನ್ಮುಂದೆ 'ಕೋಟಿ' ನಟ.! ಸಿಂಪಲ್ ಸ್ಟಾರ್ 'ಡೀಲ್' ಸುದ್ದಿ ನಿಜವೇ.?ರಕ್ಷಿತ್ ಶೆಟ್ಟಿ ಇನ್ಮುಂದೆ 'ಕೋಟಿ' ನಟ.! ಸಿಂಪಲ್ ಸ್ಟಾರ್ 'ಡೀಲ್' ಸುದ್ದಿ ನಿಜವೇ.?

  ನರಸಿಂಹ ಎಂಬುವರು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  ಅಂದ್ಹಾಗೆ, ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಶನ್ ನಲ್ಲಿ ಮೂರು ಸಿನಿಮಾಗಳು ತೆರೆಗೆ ಬರಲಿವೆ. ಈ ನಡುವೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗುವ ಚಿತ್ರ ಸೆಟ್ಟೇರಲಿದೆ.

  ಹೀರೋ ಆಗೋಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಸದ್ಯ ತಯಾರಿ ನಡೆಸುತ್ತಿದ್ದಾರಂತೆ ಎಂಬ ಅಂತೆ-ಕಂತೆ ಕೇಳಿಬರುತ್ತಿದ್ದರೂ, ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತ್ರ ಕನ್ಫರ್ಮ್ ಮಾಡಿಲ್ಲ.

  English summary
  According to the latest Grapevine, Kannada Producer Pushkar Mallikarjunaiah to become hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X