»   » ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ 'ದೊಡ್ಮನೆ ಹುಡ್ಗ' ಪುನೀತ್.!

ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ 'ದೊಡ್ಮನೆ ಹುಡ್ಗ' ಪುನೀತ್.!

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಸಿನಿಮಾಗಳು ಅಂದ್ರೇನೇ ಹಾಗೆ...ಸ್ಯಾಂಡಲ್ ವುಡ್ ನಲ್ಲಿ ಸುನಾಮಿ ಎಬ್ಬಿಸುವ ಅಲೆಗಳು..! ಅಷ್ಟಿಲ್ಲದೇ, ಪವರ್ ಸ್ಟಾರ್ ಗೆ 'ಬಾಕ್ಸ್ ಆಫೀಸ್ ಬಾದ್ಷಾ' ಅಂತ ಹೆಸರು ಬಂದಿಲ್ಲ.

ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡುತ್ತಲೇ ಬಂದಿರುವ ಅಣ್ಣಾವ್ರ ಮಗ ಅಪ್ಪು, ತಮ್ಮ 25ನೇ ಚಿತ್ರ 'ದೊಡ್ಮನೆ ಹುಡ್ಗ' ಮೂಲಕ ಗಲ್ಲಪೆಟ್ಟಿಗೆಯಲ್ಲಿ ಗೆಲುವಿನ ನಾಗಲೋಟ ಮುಂದುವರೆಸಿದ್ದಾರೆ.


ದಾಖಲೆ ಕಲೆಕ್ಷನ್ ಮಾಡಿದೆ 'ದೊಡ್ಮನೆ ಹುಡ್ಗ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿರುವ 25ನೇ ಸಿನಿಮಾ 'ದೊಡ್ಮನೆ ಹುಡ್ಗ' ಮೊದಲನೇ ದಿನವೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ. [ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ]


ಕಲೆಕ್ಷನ್ ಎಷ್ಟಾಗಿರಬಹುದು?

ವಿತರಕರು ಅಂದಾಜು ಮಾಡಿರುವ ಪ್ರಕಾರ, ಮೊದಲ ದಿನ..ಅಂದ್ರೆ ಶುಕ್ರವಾರ 'ದೊಡ್ಮನೆ ಹುಡ್ಗ' 4.5 ಕೋಟಿ - 5.5 ಕೋಟಿ ವರೆಗೂ ಲೂಟಿ ಮಾಡಿದೆ. ['ದೊಡ್ಮನೆ ದರ್ಬಾರ್' ಮೊದಲ ಶೋ ನೋಡಿದವರ ಟ್ವೀಟ್ ವಿಮರ್ಶೆ]


ಕೆಲ ಮೂಲಗಳ ಪ್ರಕಾರ....

ದುನಿಯಾ ಸೂರಿ ಆಪ್ತ ವಲಯ ಹೇಳಿರುವ ಪ್ರಕಾರ, 'ದೊಡ್ಮನೆ ಹುಡ್ಗ' ಮೊದಲ ದಿನದ ಕಲೆಕ್ಷನ್ 6 ಕೋಟಿ ದಾಟಿದೆ.


ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.!

ರಾಜ್ಯಾದ್ಯಂತ 250ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'ದೊಡ್ಮನೆ ಹುಡ್ಗ' ಪ್ರದರ್ಶನ ಕಂಡಿತ್ತು. ಬಹುತೇಕ ಥಿಯೇಟರ್ ಗಳಲ್ಲಿ ಮೊದಲ ಎರಡು ಶೋಗಳು ಹೌಸ್ ಫುಲ್ ಆಗಿತ್ತು. ಇದರ ಅಂದಾಜಿನ ಮೇಲೆ ಟ್ರೇಡ್ ಎಕ್ಸ್ ಪರ್ಟ್ಸ್ ಫಸ್ಟ್ ಡೇ ಕಲೆಕ್ಷನ್ ಲೆಕ್ಕ ಹಾಕಿದ್ದಾರೆ ಹೊರತು 'ದೊಡ್ಮನೆ ಹುಡ್ಗ' ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.


ಇಂದು ಕೂಡ ಅನೇಕ ಕಡೆ ಹೌಸ್ ಫುಲ್

ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ 'ದೊಡ್ಮನೆ ಹುಡ್ಗ' ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬೀಳುತ್ತಿದ್ದಾರೆ.


ಪುನೀತ್ - ಸೂರಿ ಕಾಂಬಿನೇಷನ್ ವರ್ಕೌಟ್ ಆಗಿದೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಹ್ಯಾಟ್ರಿಕ್ ಸಿನಿಮಾ ಈ 'ದೊಡ್ಮನೆ ಹುಡ್ಗ'. ಕಮರ್ಶಿಯಲ್ ಮಸಾಲೆ ಹೇರಳವಾಗಿರುವ 'ದೊಡ್ಮನೆ ಹುಡ್ಗ' ಅಪ್ಪು ಅಭಿಮಾನಿಗಳ ಪಾಲಿಗೆ ಹಬ್ಬದೂಟ.


'ರೆಬೆಲ್' ಪವರ್

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿರುವುದರಿಂದ ಚಿತ್ರಕ್ಕೆ ಹೆಚ್ಚಿನ ಮೈಲೇಜ್ ಸಿಕ್ಕಂತಾಗಿದೆ.


English summary
According to the Trade Experts estimate, Puneeth Rajkumar, Ambareesh starrer Duniya Suri Directorial 'Doddmane Huduga' has made 4.5-5.5 Crore collection on the First Day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada