For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಸಂಭಾವನೆ ಇಳಿಕೆ: '2.0' ಚಿತ್ರವೇ ಕಾರಣ.!

  |

  ಸಿನಿಮಾ ಸೋತಾಗ ನಿರ್ಮಾಪಕರಿಗೆ ಸಹಾಯ ಮಾಡೋದು ಸೂಪರ್ ರಜನಿಕಾಂತ್ ಅವರ ಗುಣ. ಇದಕ್ಕೆ ಬಾಬಾ, ಲಿಂಗಾ ಸಿನಿಮಾಗಳು ಉದಾಹರಣೆಯಾಗಿವೆ. ಅದೇ ರೀತಿ ಸಿನಿಮಾ ಸೋತಾಗ ತಮ್ಮ ಸಂಭಾವನೆಯನ್ನ ಕಡಿಮೆ ಮಾಡಿಕೊಂಡಿರುವ ಘಟನೆಗಳಿವೆ.

  ಇದೀಗ, ಎಆರ್ ಮುರುಗದಾಸ್ ಜೊತೆ ಮಾಡ್ತಿರುವ ಹೊಸ ಚಿತ್ರಕ್ಕೆ ರಜನಿಕಾಂತ್ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಹಿಂದೆ 2.0 ಸಿನಿಮಾ ಮಾಡಿದ್ದ ಲೈಕಾ ಪ್ರೊಡಕ್ಷನ್ ಈ ಸಿನಿಮಾ ಮಾಡ್ತಿದ್ದು, ಈ ಚಿತ್ರಕ್ಕೆ ಮುರುಗದಾಸ್ ಆಕ್ಷನ್ ಹೇಳ್ತಿದ್ದಾರೆ.

  7 ತಿಂಗಳಲ್ಲಿ 1000 ಕೋಟಿ ಗಳಿಸಿದ ರಜನಿಕಾಂತ್

  2.0 ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು. ಈ ಚಿತ್ರ ಗಳಿಕೆಯಲ್ಲಿ ಅತಿ ದೊಡ್ಡ ಕಲೆಕ್ಷನ್ ಮಾಡಲಿದೆ ಎಂಬ ಲೆಕ್ಕಾಚಾರ ನಡೆದಿತ್ತು. ಸುಮಾರು 540 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂತು. ಅದರ ಪರಿಣಾಮ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಕಮ್ಮಿಯಾಯಿತು.

  ರಜನಿ ಮುಂದಿನ ಚಿತ್ರಕ್ಕೆ ಸ್ಟಾರ್ ನಿರ್ದೇಶಕ ಮತ್ತು ಸ್ಟಾರ್ ನಟಿ.!

  ಸದ್ಯದ ದಾಖಲೆಗಳ ಪ್ರಕಾರ 2.0 ಸಿನಿಮಾ ಸುಮಾರು 800 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಹಾಗ್ನೋಡಿದ್ರೆ, ಇದು ನಿರ್ಮಾಪರಿಗೆ ಖುಷಿಗಿಂತ ಸಮಾಧಾನ ನೀಡಿದೆ ಅಷ್ಟೇ. ಯಾಕಂದ್ರೆ, ಮೂರ್ನಾಲ್ಕು ವರ್ಷ ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿ ಹೆಚ್ಚು ಲಾಭ ಮಾಡಲಾಗಿಲ್ಲ ಎಂಬ ನಿರಾಸೆ ಇರುತ್ತೆ.

  ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡಿದ ಸೂಪರ್ ಸ್ಟಾರ್.!

  ಇದೀಗ, ಎಆರ್ ಮುರುಗದಾಸ್ ಜೊತೆಗಿನ ಚಿತ್ರವನ್ನ 2.0 ನಿರ್ಮಾಪಕರೇ ಮಾಡ್ತಿದ್ದು, ಮಾರ್ಚ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಫೆಬ್ರವರಿ 11ಕ್ಕೆ ರಜನಿ ಮಗಳ ಮದ್ವೆ ಇರುವ ಕಾರಣ ಅದನ್ನ ಮುಗಿಸಿ ಶೂಟಿಂಗ್ ಆರಂಭಿಸಲಿದ್ದಾರೆ.

  English summary
  Rumours are rife that legendary actor Rajinikanth has taken a pay cut for his next film with AR Murugadoss after his last release 2.0 failed to make the big bucks at the box-office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X