For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿ ಸಂಭಾವನೆ ರು.240 ಕೋಟಿ

  By Rajendra
  |

  ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಸಂಬಳ ಎಣಿಸುವ ನಟನಾಗಿ ರಜನಿಕಾಂತ್ ಹೊಸ ದಾಖಲೆ ನಿರ್ಮಿಸುವತ್ತ ದಾಪುಗಾಲು ಹಾಕಿದ್ದಾರೆ. ಮೂಲಗಳ ಪ್ರಕಾರ ಅವರ ಮುಂದಿನ ಚಿತ್ರಕ್ಕೆ ರು.240 ಕೋಟಿ ಸಂಭಾವನೆಗೆ ಆಫರ್ ಬಂದಿದೆಯಂತೆ.

  ಸನ್ ಟಿವಿ ಹಾಗೂ ಸನ್ ಪಿಕ್ಚರ್ಸ್ ನ ಮಾಜಿ ಕಾರ್ಯನಿರ್ವಾಹಣಾಧಿಧಿಕಾರಿ ಹಂಸರಾಜ್ ಸಕ್ಸೇನಾ ಅವರು ರಜನಿ ಅವರ ಮುಂದಿನ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ರು.240 ಕೋಟಿ ನೀಡುವುದಾಗಿಯೂ ಮಾತುಕತೆಯಾಗಿದೆಯಂತೆ.

  ರಜನಿಕಾಂತ್ ಅಭಿನಯದ 'ರೋಬೋ' (ತಮಿಳಿನಲ್ಲಿ ಎಂಥಿರನ್) ಚಿತ್ರವನ್ನು ಹಂಸರಾಜ್ ಸಕ್ಸೇನಾ ರು.132 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದರು. ಆ ಚಿತ್ರ ಬಾಕ್ಸಾಫೀಸರಲ್ಲಿ ರು. 375 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿತ್ತು.

  ಇತ್ತೀಚೆಗೆ ತೆರೆಕಂಡ ಕನ್ನಡ ಹಾಗೂ ತಮಿಳು ದ್ವಿಭಾಷಾ ಚಿತ್ರ 'ಚಾರುಲತಾ' ವಿತರಣೆ ಹಕ್ಕುಗಳನ್ನು ಹಂಸರಾಜ್ ಪಡೆದಿದ್ದರು. ರಜನಿಕಾಂತ್ ಮೇಲೆ ಹಣ ಹೂಡಿದರೆ ಖಂಡಿತ ಅದು ದುಪ್ಪಟ್ಟಾಗಿ ಮರಳಿಬರುತ್ತದೆ ಎಂಬ ವಿಶ್ವಾಸದಲ್ಲಿ ಹಂಸರಾಜ್ ಇದ್ದಾರೆ.

  ಆದರೆ ರಜನಿಕಾಂತ್ ಅವರಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ರಜನಿ ಅವರನ್ನು ಒಟ್ಟು 30 ದಿನಗಳ ಡೇಟ್ಸ್ ಕೇಳಲಾಗಿದೆಯಂತೆ. ದಿನವೊಂದಕ್ಕೆ ಅವರಿಗೆ ರು.8 ಕೋಟಿ ಸಂಭಾವನೆ ನೀಡುವುದಾಗಿಯೂ ಸಕ್ಸೇನಾ ಆಫರ್ ನೀಡಿದ್ದಾರೆ.

  ಇದೊಂದು ಮೆಗಾ ಬಜೆಟ್ ಚಿತ್ರವಾಗಿದ್ದು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಮಾಡಲಾಗುತ್ತದೆ ಎನ್ನಲಾಗಿದೆ. ಇದೇ ಚಿತ್ರದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಅವರನ್ನೂ ಹಾಕಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. (ಏಜೆನ್ಸೀಸ್)

  English summary
  Producer W Hansraj Saxena, ex-CEO of SunTV and Sun Pictures, has reportedly offered a Rs 240-crore deal to Rajinikanth for a Tamil film. It is a huge pay packet, and, according to a source, 'Rajini sir is taking his time to decide'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X