For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಪುಡಿಗಟ್ಟಿದ 'ಕಬಾಲಿ'

  By Sonu
  |

  ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಮೇನಿಯಾ ಸದ್ಯಕ್ಕೆ ತಣ್ಣಗಾದರೂ ಫಸ್ಟ್ ಡೇ ಬಾಕ್ಸಾಫೀಸ್ ವಿಷಯದಲ್ಲಿ ಮಾತ್ರ ಅಕ್ಷರಶಃ ಅಬ್ಬರಿಸಿದೆ. ಈ ಮೊದಲು ಭಾರತದಲ್ಲಿ 'ಕಬಾಲಿ' ಮೊದಲ ದಿನದ ಕಲೆಕ್ಷನ್ ಸುಮಾರು 48 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು.

  ಇದೀಗ ಒಟ್ಟು ಕಲೆಕ್ಷನ್ ಸುಮಾರು 250 ಕೋಟಿ ರೂಪಾಯಿ ಎಂದು ನಿರ್ಮಾಪಕ ಕಲೈಪುಲಿ ಎಸ್ ಥನು ಮೂಲಗಳು ಮಾಹಿತಿ ಒದಗಿಸಿವೆ. ಅಂದಹಾಗೆ ಶುಕ್ರವಾರ (ಜುಲೈ 22) ದಂದು ಕೆಲವೆಡೆ ಬೆಳಗಿನ ಜಾವ 2 ಗಂಟೆಗೆ ಚಿತ್ರ ಪ್ರದರ್ಶನ ನಡೆದಿತ್ತು.[ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

  ಇಡೀ ವಿಶ್ವದಾದ್ಯಂತ ಸುಮಾರು 10 ಸಾವಿರ ತೆರೆಗಳಲ್ಲಿ 'ಕಬಾಲಿ' ತೆರೆ ಕಂಡಿದ್ದು, ಅಮೆರಿಕದಲ್ಲಿ 480 ಸ್ಕ್ರೀನ್, ಮಲೇಷ್ಯಾದಲ್ಲಿ 490 ಸ್ಕ್ರೀನ್, ಹಾಗೂ ಗಲ್ಫ್ ನಲ್ಲಿ 500 ಸ್ಕ್ರೀನ್ ಗಳಲ್ಲಿ ಕಬಾಲಿ ತೆರೆ ಕಂಡಿತ್ತು.

  ಇನ್ನು ಚಿತ್ರದ ನಿರ್ಮಾಪಕ ಕಲೈಪುಲಿ ಅವರು ಹೇಳುವಂತೆ ಇಡೀ ತಮಿಳುನಾಡಿನಲ್ಲಿ ಸುಮಾರು 100 ಕೋಟಿ ರೂಪಾಯಿ ಹಾಗೂ ಇಡೀ ದೇಶದಾದ್ಯಂತ ಸುಮಾರು 150 ಕೋಟಿ, ಒಟ್ಟು 250 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲೂ 'ಕಬಾಲಿ' ಅಬ್ಬರಿಸುತ್ತಿದೆ ಎನ್ನಲಾಗುತ್ತಿದೆ.['ಕಬಾಲಿ' ಕಣ್ತುಂಬಿಕೊಂಡ ವಿಮರ್ಶಕರು ಮಾಡಿದ ಕಾಮೆಂಟ್ ಏನು.?]

  Rajinikanth's 'Kabali' box office collection report

  ಅಂದಹಾಗೆ ಪಾ ರಂಜಿತ್ ನಿರ್ದೇಶನದ 'ಕಬಾಲಿ' ಆನ್ ಲೈನ್ ನಲ್ಲಿ ಲೀಕ್ ಆದ್ರು ಕೂಡ ರಜನಿಕಾಂತ್ ಭಕ್ತರು ಥಿಯೇಟರ್ ನಲ್ಲಿ ಸಿನಿಮಾ ನೋಡಿ ಆನಂದಿಸಿದ್ದಾರೆ, ಅನ್ನೋದಕ್ಕೆ ಈ ಬಾಕ್ಸಾಫೀಸ್ ರಿಪೋರ್ಟ್ ಸಾಕ್ಷಿ ಅಂತಾನೇ ಹೇಳಬಹುದು.

  English summary
  Super Star Rajinikanth starrer gangster drama "Kabali" has collected a record Rs 250 crore on its first day, producers have said. The movie is directed by Pa Ranjith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X