»   » ರಮ್ಯಾ ಎಲ್ಲಿದ್ದಾರೆ ಹುಡುಕಿಕೊಡಿ ಪ್ಲೀಸ್..!

ರಮ್ಯಾ ಎಲ್ಲಿದ್ದಾರೆ ಹುಡುಕಿಕೊಡಿ ಪ್ಲೀಸ್..!

By: ಹರಾ
Subscribe to Filmibeat Kannada

''ರಮ್ಯಾ ಎಲ್ಲಿದ್ದಾರೆ ಅಂತ ನಿಮ್ಗೊತ್ತಾ? ಅದೆಲ್ಲೋ ಲಂಡನ್ ನಲ್ಲಿದ್ದಾರೆ ಅಂತ ಎಲ್ರೂ ಹೇಳ್ತಾರೆ. ಆದ್ರೆ, ಅವ್ರು ಯಾರ ಕೈಗೆ ಸಿಕ್ಕಿದ್ದಾರೆ ಹೇಳಿ.? ಅವ್ರ ನಂಬರ್ ಇದ್ಯಾ? ಅವರನ್ನ ಸಂಪರ್ಕಿಸುವುದು ಹೇಗೆ.? ಇಲ್ಲಿವರೆಗೂ ರಮ್ಯಾ ಈಗ ಬರ್ತಾರೆ, ಆಗ ಬರ್ತಾರೆ ಅಂತ ಕಾದು ಕಾದು ಸುಸ್ತಾಯ್ತು..!''

ಹೀಗಂತ ಪರಿ ಪರಿಯಾಗಿ ಕೇಳ್ತಿರೋರು ಗಾಂಧಿನಗರದ ನಿರ್ಮಾಪಕರು. ''ಏಪ್ರಿಲ್ ನಲ್ಲಿ ಬರ್ತೀನಿ'' ಅಂತ ಟ್ವಿಟ್ಟರ್ ನಲ್ಲಿ ರಮ್ಯಾ ಮೇಡಂ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು. ಏಪ್ರಿಲ್ ಬಂದಿದ್ದು ಆಯ್ತು. ಏಪ್ರಿಲ್ ಕಳೆದು, ಮೇ ಮುಗಿದು ಈಗ ಜೂನ್ ಕೊನೆಯ ವಾರ ನಡೀತಾಯಿದೆ. ಇನ್ನೂ ಮಂಡ್ಯದ ಬೆಣ್ಣೆಯ ದರ್ಶನವಾಗಿಲ್ಲ. [ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!]

Ramya aka Divya Spandana not reachable to Kannada Producers

ರಮ್ಯಾ ಬಂದೇಬಿಟ್ರಲ್ಲ! ಅಂತ ನಿಂತು ಹೋಗಿದ್ದ ಶೂಟಿಂಗ್ ಗೆ ಮರುಚಾಲನೆ ನೀಡುವುದಕ್ಕೆ ನಿರ್ಮಾಪಕರು ಸಕಲ ತಯಾರಿಯಲ್ಲಿ ತೊಡಗಿದ್ದರು.

ಆದ್ರೆ, ರಮ್ಯಾ ಬರಲಿಲ್ಲ! ಪಾಪ...ಬಕಪಕ್ಷಿಗಳಂತೆ ನಿರ್ಮಾಪಕರು ಇನ್ನೂ ಕಾಯುತ್ತಲೇ ಇದ್ದಾರೆ. ತಾಯಿ ನೆಲಕ್ಕೆ ಬಂದು ಕೊಟ್ಟ ಮಾತನ್ನ ಉಳಿಸಿಕೊಳ್ಳುವ ಬದಲು, ವಿದೇಶದಲ್ಲಿ ರಮ್ಯಾ ಮೇಡಂ ಹಾಯಾಗಿದ್ದಾರೆ. [ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ?]

ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಇಣುಕಿನೋಡಿ ಸದ್ದು ಮಾಡುತ್ತಿರುತ್ತಾರೆ. ಓದಿನ ಬಗ್ಗೆ ಲಕ್ಕಿ ಸ್ಟಾರ್ ಗೆ ಆಸಕ್ತಿ ಇರಬಹುದು, ಆದ್ರೆ ಆಕೆಯನ್ನೇ ನಂಬಿ ಕೋಟಿ ಕೋಟಿ ಸುರಿದಿರುವ ನಿರ್ಮಾಪಕರನ್ನೂ ಪರಿಗಣಿಸುವುದು ನ್ಯಾಯ ಅಲ್ವೇ..!? ಪ್ಲೀಸ್...ನಿಮಗೆ ರಮ್ಯಾ ಸಿಕ್ಕರೆ ಒಂದು ಮಾತು ಹೇಳಿಬಿಡಿ...ಇದು ನಿರ್ಮಾಪಕರ ಕಳಕಳಿಯ ಮನವಿ.

English summary
Kannada Actress Ramya aka Divya Spandana has not returned back from London. She is still not reachable to Kannada Producers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada