Don't Miss!
- News
Karnataka Budget 2023: ಈ ವರ್ಷದ ಬಜೆಟ್, ಅಭಿವೃದ್ಧಿ, ಹಣಕಾಸಿನ ಕೊರತೆ ಬಗ್ಗೆ ಬೊಮ್ಮಾಯಿ ಉತ್ತರ
- Sports
ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲಾರ್: ಪ್ರಭಾಸ್ ತಾಯಿಯಾಗಿ ಹಿರಿಯ ನಟಿ
ನಟ ಪ್ರಭಾಸ್ ನಟಿಸಿ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿರುವಾಗ ಕೊರೊನಾ ಕಾರಣಕ್ಕೆ ಚಿತ್ರೀಕರಣ ಸ್ಥಗಿತವಾಗಿದೆ.
Recommended Video
'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಎದುರು ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಲನ್ ಆಗಿ ಕನ್ನಡಿಗ ಮಧು ಗುರುಸ್ವಾಮಿ ನಟಿಸುತ್ತಿದ್ದಾರೆ. ಮಲಯಾಳಂನ ಮೋಹನ್‌ಲಾಲ್ ಸಹ ಸಿನಿಮಾದಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಹಿರಿಯ ನಟಿಯೊಬ್ಬರು ಪ್ರಭಾಸ್ ತಾಯಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಪ್ರಭಾಸ್ ಜೊತೆಗೆ 'ಬಾಹುಬಲಿ' ಸಿನಿಮಾದಲ್ಲಿ ನಟಿಸಿರುವ ರಮ್ಯಕೃಷ್ಣ ಅವರು 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ತಾಯಿಯ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.
ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಭರ್ಜರಿ ಆಕ್ಷನ್ ಜೊತೆಗೆ 'ತಾಯಿ ಸೆಂಟಿಮೆಂಟ್' ಸಾಮಾನ್ಯ ಅಂಶ. 'ಸಲಾರ್'ನಲ್ಲಿಯೂ ತಾಯಿ ಸೆಂಟಿಮೆಂಟ್ ದೃಶ್ಯಗಳು ಹೇರಳವಾಗಿ ಇರಲಿದ್ದು, ತಾಯಿ ಪಾತ್ರಕ್ಕೆ ಅನುಭವಿ ನಟಿಯಾದ ರಮ್ಯಕೃಷ್ಣರನ್ನು ಆಯ್ಕೆ ಮಾಡಿದ್ದಾರೆ ಪ್ರಶಾಂತ್ ನೀಲ್.

ಸಲಾರ್‌ನಲ್ಲಿ ಪ್ರಭಾಸ್ ದ್ವಿಪಾತ್ರ?
'ಸಲಾರ್' ಸಿನಿಮಾಕ್ಕೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. 'ಸಲಾರ್'ನಲ್ಲಿ ಪ್ರಭಾಸ್‌ರದ್ದು ದ್ವಿಪಾತ್ರ ಎಂಬ ಹೊಸ ಸುದ್ದಿ ಇತ್ತೀಚೆಗೆ ಹರಿದಾಡುತ್ತಿದೆ. ಸಿನಿಮಾ ತಂಡದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

'ಉಗ್ರಂ' ಸಿನಿಮಾದ ರೀಮೇಕ್?
'ಸಲಾರ್' ಸಿನಿಮಾದ ಬಹುಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಗೋಧಾವರಿ ಗಣಿಗಳು ಹಾಗೂ ಇತರ ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. 'ಸಲಾರ್' ಸಿನಿಮಾವು ಕನ್ನಡದ 'ಉಗ್ರಂ' ಸಿನಿಮಾದ ರೀಮೇಕ್ ಎನ್ನಲಾಗಿತ್ತು. ಆದರೆ ಇದನ್ನು ಪ್ರಶಾಂತ್ ನೀಲ್ ತಳ್ಳಿ ಹಾಕಿದ್ದಾರೆ.

ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಪ್ರಭಾಸ್
ಇನ್ನು ಪ್ರಭಾಸ್ ಇದೇ ಮೊದಲ ಬಾರಿಗೆ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಸಲಾರ್' ಸಿನಿಮಾದ ಜೊತೆಗೆ ಅವರು ರಾಮಾಯಣ ಕತೆ ಆಧರಿತ ಸಿನಿಮಾ 'ಆದಿಪುರುಷ್'ನಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಭಾರತದ ಈವರೆಗೆ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಆಗಿರಲಿದ್ದು ಸಿನಿಮಾವನ್ನು ಓಂರಾವತ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಭೂಷಣ್ ಕುಮಾರ್ ಅವರದ್ದು.

ತೆಲುಗಿನಲ್ಲಿಯೇ ಬ್ಯುಸಿ ಆಗಲಿರುವ ಪ್ರಶಾಂತ್ ನೀಲ್
'ಸಲಾರ್' ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ನೀಲ್ ಇದರ ಬಳಿಕ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆಗೆ ಹೊಸ ಸಿನಿಮಾ ಮಾಡಲಿದ್ದಾರೆ. ಅಲ್ಲು ಅರ್ಜುನ್-ಪ್ರಶಾಂತ್ ನೀಲ್ ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಾಣ ಮಾಡಲಿದೆ. ಅದಾದ ಬಳಿಕ ಜೂ.ಎನ್‌ಟಿಆರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಪ್ರಶಾಂತ್.