Don't Miss!
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- News
ಸಕಲೇಶಪುರ-ಮಾರನಹಳ್ಳಿ ಚತುಷ್ಪಥ ಕಾಮಗಾರಿ ಶೀಘ್ರ ಪೂರ್ಣ: ಗಡ್ಕರಿ
- Sports
2015ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆ ನಂತರ ಏನಾಯ್ತು? 'ಯೇ ಮಾಯ ಚೇಸಾವೆ' ಸೀಕ್ವೆಲ್‌ನಲ್ಲಿ ಸಮಂತಾ ಜಾಗಕ್ಕೆ ಕನ್ನಡ ನಟಿ?
ದಶಕದ ಹಿಂದೆ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ 'ಯೇ ಮಾಯ ಚೇಸಾವೆ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಸಿನಿಮಾ ಮೂಲಕ ನಟಿ ಸಮಂತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.
ಏಕಕಾಲಕ್ಕೆ ಈ ಸಿನಿಮಾ ತಮಿಳಿನಲ್ಲಿ 'ವಿನೈತಾಂಡಿ ವರುವಾಯ' ಹೆಸರಿನಲ್ಲಿ ತಮಿನಿನಲ್ಲೂ ತೆರೆಕಂಡು ಸಕ್ಸಸ್ ಕಂಡಿತ್ತು. ಕಾಲಿವುಡ್‌ನಲ್ಲಿ ಸಿಂಬು, ತ್ರಿಷಾ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಗುಸುಗುಸು ಶುರುವಾಗಿದೆ. ಈ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದ ನಾಗಚೈತನ್ಯಾ- ಸಮಂತಾ ನಿಜ ಜೀವನದಲ್ಲೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಕಳೆದ ವರ್ಷ ಜೋಡಿ ದೂರಾಗಿತ್ತು. ಹಾಗಾದರೆ ಸೀಕ್ವೆಲ್‌ನಲ್ಲಿ ನಟಿಸೋದು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ.
'ಪುಷ್ಪ-
2'
ಚಿತ್ರದಿಂದ
ರಶ್ಮಿಕಾ-
ಫಹಾದ್
ಇಬ್ಬರೂ
ಹೊರಕ್ಕೆ?
ಹೊಸ
ಕಲಾವಿದರಿಗಾಗಿ
ಹುಡುಕಾಟ!
ಕೆಲ ದಿನಗಳ ಹಿಂದೆಯೇ ನಿರ್ದೇಶನ ಗೌತಮ್ ವಾಸುದೇವ್ ಮೆನನ್ 'ಯೇ ಮಾಯ ಚೇಸಾವೆ' ಸುಳಿವು ಕೊಟ್ಟಿದ್ದರು. ಸ್ಕ್ರಿಪ್ಟ್ ಸಿದ್ಧವಾದ ಕೂಡಲೇ ಶೂಟಿಂಗ್ ಆರಂಭವಾಗುತ್ತದೆ ಎಂದಿದ್ದರು. ಇದೀಗ ನಾಯಕ-ನಾಯಕಿಯಾಗಿ ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೀತಿದೆ.

ಚೈಸ್ಯಾಮ್ ಮತ್ತೆ ಒಟ್ಟಿಗೆ ನಟಿಸುತ್ತಾರಾ?
'ಯೇ ಮಾಯ ಚೇಸಾವೆ' ಚೈತು- ಸ್ಯಾಮ್ ಇಬ್ಬರಿಗೂ ಬಹಳ ಇಷ್ಟವಾದ ಸಿನಿಮಾ. ಈ ಸಿನಿಮಾ ಸೀಕ್ವೆಲ್ ಅಂದರೆ ಇಬ್ಬರು ನಟಿಸೋಕೆ ಸಿದ್ಧರಿರುತ್ತಾರೆ. ಕೆಲ ದಿನಗಳ ಹಿಂದೆ ಚೈತನ್ಯಾ ಮತ್ತೆ ಸ್ಯಾಮ್ ಜೊತೆ ನಟಿಸೋಕೆ ಅಭ್ಯಂತರ ಇಲ್ಲ ಎಂದಿದ್ದರು. ಹಾಗಾಗಿ ಗೌತಮ್ ವಾಸುದೇವ್ ಮನನ್ ಇವರಿಬ್ಬರನ್ನು ಒಟ್ಟುಗೂಡಿಸಿ ಕಾರ್ತಿಕ್- ಜೆಸ್ಸಿ ಲವ್ ಸ್ಟೋರಿ ಮುಂದುವರೆಸಿದರೂ ಅಚ್ಚರಿಪಡಬೇಕಿಲ್ಲ. ಸದ್ಯಕ್ಕೆ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ತಿಲ್ಲ.

ನಾಗ ಚೈತನ್ಯಾ ಜೊತೆ ರಶ್ಮಿಕಾ?
ಸದ್ಯ 'ಯೇ ಮಾಯ ಚೇಸಾವೆ' ಸೀಕ್ವೆಲ್‌ಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಹೆಸರು ಕೇಳಿಬರ್ತಿದೆ. ಕೊಡಗಿನ ಬೆಡಗಿ ಈ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋದು ಗೊತ್ತೇಯಿದೆ. ನ್ಯಾಷನಲ್ ಕ್ರಶ್ ಅನ್ನಿಸಿಕೊಂಡಿರೋ ಚೆಲುವೆ ರಶ್ಮಿಕಾ ಸೀಕ್ವೆಲ್‌ನಲ್ಲಿ ನಟಿಸ್ತಾರೆ ಎನ್ನಲಾಗ್ತಿದೆ. 'ಪುಷ್ಪ'-2 ಬಿಟ್ಟರೆ ರೋಶ್ ಯಾವುದೇ ತೆಲುಗು ಸಿನಿಮಾ ಒಪ್ಪಿಕೊಂಡಿಲ್ಲ.

ಕಾರ್ತಿ- ಜೆಸ್ಸಿ ಮದುವೆ ನಂತ್ರ ಏನಾಯ್ತು?
12 ವರ್ಷಗಳ ಹಿಂದೆ ಬಂದ 'ಯೇ ಮಾಯ ಚೇಸಾವೆ' ಚಿತ್ರದಲ್ಲಿ ಕಾರ್ತಿಕ್- ಜೆಸ್ಸಿ ಲವ್ ಸ್ಟೋರಿ ನೋಡಿದ್ದೆವು. ಜೋಡಿ ಕೊನೆಗೆ ಮದುವೆ ಆಗಿತ್ತು. ಮದುವೆ ನಂತರ ಕಥೆ ಏನಾಯಿತು ಎನ್ನುವುದನ್ನು ಸೀಕ್ವೆಲ್‌ನಲ್ಲಿ ಹೇಳುತ್ತಾರಂತೆ. ಇಬ್ಬರು ಡಿವೋರ್ಸ್ ತೆಗೆದುಕೊಳ್ಳುವ ಕಥೆಯೂ ಇರುತ್ತಂತೆ. ಚೈಸ್ಯಾಮ್ ರಿಯಲ್ ಲೈಫ್‌ನಲ್ಲಿ ನಡೆದಿದ್ದೇ ಮುಂದುವರೆದ ಭಾಗದಲ್ಲಿ ಬರಲಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ.

ಸೀಕ್ವೆಲ್‌ಗಾಗಿ ಅಭಿಮಾನಿಗಳ ಕಾತರ
ಎಲ್ಲಾ ವಿಭಾಗಗಳಲ್ಲೂ ಸೂಪರ್ ಅನ್ನಿಸಿಕೊಂಡಿದ್ದ ರೊಮ್ಯಾಂಟಿಕ್ ಲವ್ ಸ್ಟೋರಿ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಕ್ರೇಜ್‌ನ ಎನ್‌ಕ್ಯಾಶ್ ಮಾಡಿಕೊಳ್ಳಲು ಮೇಕರ್ಸ್ ಕೂಡ ಕಾಯುತ್ತಿದ್ದಾರೆ. ಗೌತಮ್ ವಾಸುದೇವ್ ಮೆನನ್ ಈಗಾಗಲೇ ಸಿನಿಮಾ ಕಥೆ ಹೆಣೆಯುವ ಕೆಲಸ ಆರಂಭಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಆದರೆ ಕಾರ್ತಿಕ್- ಜೆಸ್ಸಿ ಪಾತ್ರಗಳಲ್ಲಿ ಯಾರು ನಟಿಸುತ್ತಾರೆ ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ.