»   » ರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ಮದುವೆಗೆ ಕೂಡಿ ಬಂತು ಘಳಿಗೆ

ರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ಮದುವೆಗೆ ಕೂಡಿ ಬಂತು ಘಳಿಗೆ

Posted By: ಸೋನು ಗೌಡ
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅವರ ಮಗಳು ರಾಯನೆ ಮತ್ತು ಕರ್ನಾಟಕದ ರಣಜಿ ಆಟಗಾರ, ವೇಗಿ, ಬೆಂಗಳೂರು ಹುಡುಗ ಅಭಿಮನ್ಯು ಮಿಥುನ್ ಅವರ ಮದುವೆಯ ಶುಭ ಮುಹೂರ್ತಕ್ಕೆ ದಿನಗಣನೆ ಶುರುವಾಗಿದೆ.

ಇದೇ ವಾರ ಅಭಿಮನ್ಯು ಮತ್ತು ರಾಯನೆ ಸಪ್ತಪದಿ ತುಳಿಯಲಿದ್ದಾರೆ. ಇನ್ನು ಮದುವೆ ದಿನ ಹತ್ತಿರವಾಗುತ್ತಿದ್ದಂತೆ, ವೇಗಿ ಅಭಿಮನ್ಯು ಮತ್ತು ರಾಯನೆ ಅವರು ಕೂಡ ತುಂಬಾ ಎಕ್ಸೈಟ್ ಆಗಿದ್ದಾರೆ. ಜೊತೆಗೆ ನೂತನ ಜೀವನಕ್ಕೆ ಕಾಲಿಡೋದರ ಬಗ್ಗೆ ಬಣ್ಣ-ಬಣ್ಣದ ಕನಸು ಕಾಣುತ್ತಿದ್ದಾರೆ.

ಅಂದಹಾಗೆ ರಾಧಿಕಾ ಶರತ್ ಕುಮಾರ್ ಅವರ ಮನೆಯಲ್ಲಿ ಮದುವೆಯ ಕೆಲಸಗಳು ಒಂದೊಂದಾಗಿ ಶುರುವಾಗಿದೆ. ವಧು ಪೂಜೆ, ಮೆಹೆಂದಿ ಶಾಸ್ತ್ರಕ್ಕೆ ಸಿದ್ಧತೆ ಅದು-ಇದು ಅಂತ ಬಂಧು-ಬಳಗ ಹಾಗೂ ನೆಂಟರಿಷ್ಟರು ಅತ್ತಿಂದಿತ್ತ ಓಡಾಡುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಶುರುವಾಗಿದ್ದ ಇವರಿಬ್ಬರ ಲವ್ವಿ-ಡವ್ವಿಗೆ, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ನಿಶ್ಚಿತಾರ್ಥದ ಮೂಲಕ ಅಧೀಕೃತ ಮುದ್ರೆ ಬಿದ್ದಿತ್ತು. ಇದೀಗ ಪ್ರೇಮಿಗಳಿಬ್ಬರು ಇದೇ ವಾರ ಸಪ್ತಪದಿ ತುಳಿಯುತ್ತಿದ್ದಾರೆ.[ಚಿತ್ರಗಳು : ರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ನಿಶ್ಚಿತಾರ್ಥದ ಸಂಭ್ರಮ]

ಅಷ್ಟಕ್ಕೂ ಯಾವಾಗ ಮದುವೆ, ಎಲ್ಲಿ?, ಏನ್ಕತೆ?, ಇತ್ಯಾದಿಗಳ ಸಂಪೂರ್ಣ ಮಾಹಿತಿಯನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮದುವೆ ದಿನಗಳು ಹತ್ತಿರವಾಗಿವೆ

ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿರುವ ರಾಧಿಕಾ ಪುತ್ರಿ ರಾಯನೆ ಮತ್ತು ಕ್ರಿಕೆಟರ್ ಅಭಿಮನ್ಯು ಮಿಥುನ್ ಅವರು, ಕಳೆದ ವರ್ಷದಿಂದ ಕಾಯುತ್ತಿದ್ದ ಶುಭ ಘಳಿಗೆ ಹತ್ತಿರವಾಗಿದೆ.[ರಾಧಿಕಾ ಶರತ್ ಪುತ್ರಿ ಜೊತೆ ಕ್ರಿಕೆಟರ್ ಅಭಿಮನ್ಯು ಮಿಥುನ್ ಮದುವೆ]

ಯಾವಾಗ ಮದುವೆ.?

ಇದೇ ಭಾನುವಾರ (ಆಗಸ್ಟ್ 28), ಮಹಾಬಲಿಪುರಂನಲ್ಲಿ, ರಾಧಿಕಾ ಶರತ್ ಕುಮಾರ್ ಪುತ್ರಿ ರಾಯನೆ ಮತ್ತು ವೇಗಿ ಅಭಿಮನ್ಯು ಅವರು ಕುಟುಂಬಸ್ಥರ ಸಮ್ಮುಖದಲ್ಲಿ, ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ರಾಧಿಕಾ ಅವರ ಆಪ್ತ ಮೂಲಗಳು ವರದಿ ಮಾಡಿವೆ.

ಬ್ರೈಡಲ್ ಶವರ್

ಈಗಾಗಲೇ ವಧು ರಾಯನೆ ಮನೆಯಲ್ಲಿ ಒಂದೊಂದಾಗಿ ಮದುವೆ ಕಾರ್ಯಗಳು ಆರಂಭವಾಗಿದ್ದು, ಕಳೆದ ಭಾನುವಾರ (ಆಗಸ್ಟ್ 21) ದಂದು ರಾಯನೆ ಅವರಿಗೆ ಬ್ರೈಡಲ್ ಶವರ್ ನಡೆದಿದೆ.

'ಅಮ್ಮ'ನಿಗೆ ಆಹ್ವಾನ

ಈಗಾಗಲೇ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ (ಅಮ್ಮ) ಅವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ್ದಾರೆ.

ಸಂಗೀತ ಕಾರ್ಯಕ್ರಮ

ಶುಕ್ರವಾರ (ಆಗಸ್ಟ್ 26) ದಂದು ಸಂಗೀತ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ರಾಯನೆ ಮತ್ತು ಅಭಿಮನ್ಯು ಅವರ ಆಪ್ತ ಗೆಳೆಯರು ಭಾಗವಹಿಸಲಿದ್ದಾರೆ. ಜೊತೆಗೆ ಈ ಸಂಭ್ರಮದ ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರೂ ಜಬರ್ದಸ್ತ್ ಡ್ಯಾನ್ಸ್ ಮಾಡಲಿದ್ದಾರೆ.

ರಾಧಿಕಾ 2ನೇ ಪತಿ ಪುತ್ರಿ

ರಾಯನೆ ನಟಿ ರಾಧಿಕಾ ಶರತ್ ಕುಮಾರ್ ಅವರ ಎರಡನೇ ಪತಿ ರಿಚರ್ಡ್ ಹಾರ್ಡಿ ಅವರ ಪುತ್ರಿ. ರಾಧಿಕಾ ಅವರಿಗೆ ತಮ್ಮ ಮಗಳೆಂದರೆ ಪ್ರಾಣ. ಮದುವೆಯ ಖುಷಿಯಲ್ಲಿ ಅಮ್ಮನಿಗೆ ಸಿಹಿ ಮುತ್ತಿಕ್ಕಿದ ಮದು ಮಗಳು ರಾಯನೆ.

ಯಾರೆಲ್ಲಾ ಬರಬಹುದು.?

ರಾಯನೆ ಮತ್ತು ಅಭಿಮನ್ಯು ಅವರ ಅದ್ಧೂರಿ ಮದುವೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಸ್ಟಾರ್ ನಟ-ನಟಿಯರು ಆಗಮಿಸಲಿದ್ದಾರೆ. ಚಿತ್ರರಂಗದ ಗಣ್ಯರಿಗಾಗಿ ಅಂತ ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

ಕ್ರಿಕೆಟ್ ಮತ್ತು ಸಿನಿಮಾ

ವೇಗಿ ಅಭಿಮನ್ಯು ಅವರು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿ, ತಮ್ಮ ಸಾಧನೆಯನ್ನು ಮುಂದುವರಿಸುತ್ತಿದ್ದಾರೆ. ರಾಯನೆ ಅವರು ಚೆನ್ನೈನಲ್ಲಿರುವ ತಾಯಿ ರಾಧಿಕಾ ಅವರ 'ರಾಧನ್ ಮೀಡಿಯಾ' ಸಂಸ್ಥೆಯ ಉಸ್ತುವಾರಿ ವಹಿಸಿದ್ದಾರೆ.

English summary
Kollywood Actress Radhika Sarath Kumar's daughter Rayane has got married to Cricketer Abhimanyu Mithun in this Sunday (August 28th) at Mahabalipuram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada