»   » ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?

ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?

By: ಹರಾ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬ ನಿನ್ನೆ (ಫೆಬ್ರವರಿ 16) ಅದ್ದೂರಿಯಾಗಿ ನೆರವೇರಿದೆ. ದರ್ಶನ್ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತ ಮಾಧ್ಯಮ ಮಿತ್ರರು 'ಜಗ್ಗು ದಾದಾ' ಮುಹೂರ್ತವನ್ನ ಬಹಿಷ್ಕರಿಸಿದ್ದಾರೆ.

ಜನ್ಮದಿನದ ಸಂಭ್ರಮದ ನಂತರ ನಡೆದ 'ಜಗ್ಗು ದಾದಾ' ಮುಹೂರ್ತ ಸಮಾರಂಭದಲ್ಲಿ ದಾಸ 'ದರ್ಶನ್' ಹೊಸ ಬಾಂಬ್ ವೊಂದನ್ನ ಸಿಡಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ನಡೆದ ಘಟನೆಯೊಂದನ್ನ ಮೆಲುಕು ಹಾಕಿ ಪತ್ರಕರ್ತರ ಮೇಲೆ ಕೊಂಚ ಗರಂ ಆಗಿ ಮಾತನಾಡಿದ್ದಾರೆ.

ಅಸಲಿಗೆ ದರ್ಶನ್ ಗೆ ಮಾಧ್ಯಮ ಮತ್ತು ಪತ್ರಿಕಾ ಮಿತ್ರರ ಮೇಲೆ ಕೋಪವೇಕೆ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

'ಜಗ್ಗು ದಾದಾ' ನಿರ್ದೇಶಕರಿಗೆ 'ಪಂಗನಾಮ'!

'ಜಗ್ಗು ದಾದಾ' ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ ಮೂಲತಃ ಮಂಗಳೂರಿನವರು. ಆದರೂ, ನೆಲೆಸಿರುವುದು ಮುಂಬೈನಲ್ಲಿ. ಬಾಲಿವುಡ್ ನಲ್ಲಿ ಹೆಚ್ಚು ಪಳಗಿರುವ ರಾಘವೇಂದ್ರಗೆ ಸ್ಯಾಂಡಲ್ ವುಡ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಹೀಗಿದ್ದರೂ, ದರ್ಶನ್ ಗಾಗಿ, ದರ್ಶನ್ ಇಮೇಜ್ ಗೆ ತಕ್ಕಂತೆ 'ಜಗ್ಗು ದಾದಾ' ಚಿತ್ರದ ಕಥೆಯನ್ನ ರಾಘವೇಂದ್ರ ರೆಡಿಮಾಡಿದ್ದರು. ಆಗ (ರಿಪೋರ್ಟರ್?) ಒಬ್ಬರ ಪರಿಚಯ ಆಯ್ತಂತೆ.

ದುಡ್ಡು ಕೊಟ್ಟರೆ ದರ್ಶನ್ ಮೀಟಿಂಗ್ ಫಿಕ್ಸ್!

'ಜಗ್ಗು ದಾದಾ' ಕಥೆ ಕೈಯಲ್ಲಿ ರೆಡಿಯಿದ್ದರೂ ದರ್ಶನ್ ಭೇಟಿ ಮಾತ್ರ ರಾಘವೇಂದ್ರ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಆಗ ಸಿಕ್ಕ (ರಿಪೋರ್ಟರ್?) ಒಬ್ಬರು ಏಳು ಲಕ್ಷ ರೂಪಾಯಿ ಕೊಟ್ಟರೆ ದರ್ಶನ್ ಮೀಟಿಂಗ್ ಸಾಧ್ಯ ಅಂತ ಹೇಳಿ ದುಡ್ಡು ವಸೂಲಿ ಮಾಡಿದ್ದರಂತೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದುಕಿನ ನಿಜವಾದ ದರ್ಶನ]

ದರ್ಶನ್ ಕಿವಿಗೆ ಬಿದ್ದ ಮ್ಯಾಟರ್

ತದನಂತರದಲ್ಲಿ ದರ್ಶನ್ ರನ್ನ ರಾಘವೇಂದ್ರ ಹೇಗೆ ಭೇಟಿ ಮಾಡಿದರೋ ಗೊತ್ತಿಲ್ಲ. ಆದರೆ, ಅಪಾಯಿಂಟ್ಮೆಂಟ್ ಗಾಗಿ ವರದಿಗಾರರೊಬ್ಬರು ಏಳು ಲಕ್ಷ ತೆಗೆದುಕೊಂಡ ವಿಷಯ ದರ್ಶನ್ ಕಿವಿಗೆ ಬಿದ್ದಿದೆ. ಇದರಿಂದ ಅವರ ಪಿತ್ತ ಕೂಡ ನೆತ್ತಿಗೇರಿದೆ. [ದರ್ಶನ್ ಮನೆ ಮುಂದೆ ಆ ರಾತ್ರಿ ನಡೆದಿದ್ದಾದರೂ ಏನು?]

ದರ್ಶನ್ ಸಮಯಕ್ಕೆ 'ಫೀಸ್' ಕೊಡಬೇಕಾ?

''ಭೇಟಿಗಾಗಿ ನಾನು ಯಾರಿಂದಲೂ ದುಡ್ಡು ಪಡೆದಿಲ್ಲ. ನನ್ನ ಹೆಸರು ಹೇಳಿಕೊಂಡು ರಿಪೋರ್ಟರ್ ಒಬ್ಬರು ಲಕ್ಷಾಂತರ ರೂಪಾಯಿ ಪಡೆದಿದ್ದಾರೆ.'' ಅಂತ ದರ್ಶನ್ ಸಿಟ್ಟಿನಿಂದ ಈ ಸಂಗತಿಯನ್ನ ಹೊರಹಾಕಿದ್ದಾರೆ. [ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]

'ಬ್ರೇಕಿಂಗ್ ನ್ಯೂಸ್' ಕೊಡ್ತಾರಂತೆ ದರ್ಶನ್

''ಇಂದು 'ಜಗ್ಗು ದಾದಾ' ಮುಹೂರ್ತ. ಸಿನಿಮಾ ಮುಗಿಯುವ ಹೊತ್ತಿಗೆ ಆ ರಿಪೋರ್ಟರ್ ಯಾರು ಅಂತ ನಾನೇ ಬ್ರೇಕಿಂಗ್ ನ್ಯೂಸ್ ಕೊಡ್ತೀನಿ'' ಅಂತ ದರ್ಶನ್ ಹೇಳಿದ್ದಾರೆ. ಕೌಟುಂಬಿಕ ಕಲಹವಾದಾಗಿನಿಂದಲೂ ದರ್ಶನ್ ಗೆ ಮಾಧ್ಯಮ ಮತ್ತು ಪತ್ರಕರ್ತರನ್ನ ಕಂಡರೆ ಅಷ್ಟಕಷ್ಟೆ. ಅದರ ಜೊತೆಗೆ ಇಂತಹ ಘಟನೆ ನಡೆದಿರುವ ಕಾರಣ ದರ್ಶನ್ ಕಣ್ಣು ಕೆಂಪಗಾಗಿದೆ.

ಒಬ್ಬರಿಂದ ಎಲ್ಲರಿಗೂ ಕೆಟ್ಟ ಹೆಸರು

ರಾಘವೇಂದ್ರ ಹೆಗಡೆ ಅವರಿಂದ ಯಾರು ಹಣ ಪಡೆದರೋ? ಅವರು ವೃತ್ತಿಪರ ವರದಿಗಾರರೋ...ಇಲ್ಲವೋ...ಗೊತ್ತಿಲ್ಲ. ಆದ್ರೆ, ಒಬ್ಬರ ಈ ನಡವಳಿಕೆಯಿಂದ ಎಲ್ಲಾ ಪತ್ರಕರ್ತರಿಗೂ ಕೆಟ್ಟ ಹೆಸರು ಅನ್ನುವುದು ವಿಷಾದನೀಯ.

English summary
Challenging Star Darshan has revealed that a Journalist took Rupees 7 Lakh to introduce him to 'Jaggu Dada' director Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada