Just In
Don't Miss!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Sports
ಐಪಿಎಲ್ 2021: ಆರ್ಸಿಬಿ ವಿರುದ್ಧ ಅತೀ ಹೆಚ್ಚು ರನ್ ದಾಖಲೆಗಳು
- News
ದೆಹಲಿಯಲ್ಲಿ ಕೊರೊನಾ ದಾಖಲೆ; ಖಾಸಗಿ ಹೋಟೆಲ್ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ
- Automobiles
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೂ ಮುಂಚೆ 900 ಕೋಟಿ ಗಳಿಸಿದ ಆರ್‌ಆರ್‌ಆರ್: 'ಬಾಹುಬಲಿ' ದಾಖಲೆ ಉಡೀಸ್
ಎಸ್ ಎಸ್ ರಾಜಮೌಳಿ ತಮ್ಮದೇ ಚಿತ್ರದ ದಾಖಲೆಯನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬಾಹುಬಲಿ ಸಿನಿಮಾ ಮೂಲಕ ವಿಶ್ವ ಜಗತ್ತಿನಲ್ಲಿ ಹೊಸ ಅಧಿಪತ್ಯ ಸಾಧಿಸಿದ ರಾಜಮೌಳಿ ಈಗ ಆರ್ ಆರ್ ಆರ್ ಚಿತ್ರದ ಮೂಲಕ ದಾಖಲೆಗಳನ್ನು ಅಳಿಸಿ ಹೊಸದಾಗಿ ಬರೆಯುತ್ತಿದ್ದಾರೆ.
ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ನಟನೆಯ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಗೆ ಬರುತ್ತಿದೆ. ಅಜಯ್ ದೇವಗನ್ ಮತ್ತು ಆಲಿಯಾ ಭಟ್ ವಿಶೇಷ ಪಾತ್ರದಲ್ಲಿ ನಟಸಿದ್ದಾರೆ. 350-400 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಬಾಹುಬಲಿ ಹೆಸರಿನಲ್ಲಿ ಎಲ್ಲ ದಾಖಲೆ ಮುರಿಯಲಿದೆ ಎಂದು ಅಂದಾಜಿಸಲಾಗಿದೆ. ಅಂದಾಜಿನಂತೆ ಪ್ರಿ-ರಿಲೀಸ್ ಬಿಸಿನೆಸ್‌ನಲ್ಲೇ ಭಾರಿ ಗಳಿಕೆ ಕಂಡಿದೆ. ರಾಜಮೌಳಿಯ ಸಿನಿಮಾ ಬರೋಬ್ಬರಿ 900 ಕೋಟಿ ರೂಪಾಯಿ ಬಿಡುಗಡೆಗೆ ಮುಂಚೆಯೇ ಬಾಚಿಕೊಂಡಿದೆ ಎಂದು ಹೇಳಲಾಗಿದೆ. ಏನಿದು 900 ಕೋಟಿ ಲೆಕ್ಕಾಚಾರ? ಮುಂದೆ ಓದಿ....
ಆರ್‌ಆರ್‌ಆರ್ ಚಿತ್ರದ ಬಾಲಿವುಡ್ ಹಕ್ಕು ಖರೀದಿಸಿದ ಪೆನ್ ಸ್ಟುಡಿಯೋ

ಪ್ರಿ-ರಿಲೀಸ್ ಬಿಸಿನೆಸ್ 900 ಕೋಟಿ?
2017ರಲ್ಲಿ ತೆರೆಕಂಡಿದ್ದ ಬಾಹುಬಲಿ 2 ಸಿನಿಮಾದ ಪ್ರಿ-ರಿಲೀಸ್ ಬಿಸಿನೆಸ್ 500 ಕೋಟಿ. ಆರ್ ಆರ್ ಆರ್ ಚಿತ್ರದ ಪ್ರಿ ರಿಲೀಸ್ ಗಳಿಕೆ 900 ಕೋಟಿ. ಅಂದ್ರೆ, ಬಾಹುಬಲಿ ಚಿತ್ರಕ್ಕಿಂತ ಡಬಲ್ ಆಗಿದೆ. ಚಿತ್ರದ ಎಲ್ಲ ಭಾಷೆಯ ವಿತರಣೆ ಹಕ್ಕು, ಡಿಜಿಟಲ್ ಹಕ್ಕು, ಸ್ಯಾಟ್‌ಲೈಟ್ ಹಕ್ಕು, ಆಡಿಯೋ ಹಕ್ಕು ಸೇರಿ 900 ಕೋಟಿ ಎಂದು ಅಂದಾಜಿಸಲಾಗಿದೆ.
ಭಾರಿ ಮೊತ್ತಕ್ಕೆ RRR ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದ ಖ್ಯಾತ ಸಂಸ್ಥೆ?

570 ಕೋಟಿಗೆ ವಿತರಣೆ ಹಕ್ಕು ಮಾರಾಟ!
ಆರ್ ಆರ್ ಆರ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿದೆ. ಆಂಧ್ರಪ್ರದೇಶದಿಂದ 165 ಕೋಟಿ, ತೆಲಂಗಾಣದಿಂದ 75 ಕೋಟಿ, ಉತ್ತರ ಭಾರತದಿಂದ 140 ಕೋಟಿ, ತಮಿಳುನಾಡು 48 ಕೋಟಿ, ಕರ್ನಾಟಕ 45 ಕೋಟಿ, ಕೇರಳ 15 ಕೋಟಿ ಹಾಗೂ ವಿದೇಶದಿಂದ 70 ಕೋಟಿ, ಒಟ್ಟು 570 ಕೋಟಿ ಹಣ ವಿತರಣೆಯಿಂದಲೇ ಬಾಚಿಕೊಂಡಿದೆ.

ಡಿಜಿಟಲ್-ಸ್ಯಾಟ್‌ಲೈಟ್ ಹಕ್ಕಿನಿಂದ ಬಂದಿದ್ದು ಎಷ್ಟು?
ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಎಲ್ಲ ಭಾಷೆಗಳ ಡಿಜಿಟಲ್ ಹಕ್ಕು 170 ಕೋಟಿ. ಎಲ್ಲಾ ಭಾಷೆಗಳ ಸ್ಯಾಟ್‌ಲೈಟ್ ಹಕ್ಕು 130 ಕೋಟಿ ಹಾಗೂ ಆಡಿಯೋ ಹಕ್ಕಿನಿಂದ 20 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

ದಸರಾ ಹಬ್ಬಕ್ಕೆ ಬಿಡುಗಡೆ
ನಿರ್ಮಾಪಕರು ಹಾಕಿದ ಬಂಡವಾಳಕ್ಕೆ ಲಾಭ ಸಹ ಪಡೆದುಕೊಂಡಿದ್ದಾರೆ. ಡಿವಿವಿ ದಾನಯ್ಯ ನಿರ್ಮಿಸಿದ್ದು, 350-400 ಕೋಟಿ ಬಜೆಟ್. ಪ್ರಿ-ರಿಲೀಸ್ ಬಿಸಿನೆಸ್‌ನಲ್ಲಿ 900 ಕೋಟಿ ಗಳಿಕೆ ಕಂಡಿದೆ. ಅಲ್ಲಿಗೆ ನಿರ್ಮಾಪಕ ಲಾಭದಲ್ಲಿದ್ದಾನೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ ತಿಂಗಳಲ್ಲಿ ಆರ್ ಆರ್ ಆರ್ ಸಿನಿಮಾ ತೆರೆಗೆ ಬರಲಿದೆ. ಥಿಯೇಟರ್‌ಗೆ ಬಂದ ಮೇಲೆ ಚಿತ್ರದ ಗಳಿಕೆ ಎಷ್ಟಾಗಲಿದೆ ಎನ್ನುವುದರ ಲೆಕ್ಕಾಚಾರ ನಡೆಯುತ್ತಿದೆ.