ಜೂ.ಎನ್‌ಟಿಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ವಿಲನ್

ತೆಲುಗು ಚಿತ್ರರಂಗಕ್ಕೆ ಬಾಲಿವುಡ್‌ ಸ್ಟಾರ್ ನಟ-ನಟಿಯರ ಮೇಲೆ ಪ್ರೀತಿ ಅಚಾನಕ್ಕಾಗಿ ಹೆಚ್ಚಾಗಿದೆ. ಬಾಲಿವುಡ್‌ನ ಸ್ಟಾರ್ ನಟ-ನಟಿಯರನ್ನು ಕರೆತಂದು ಸಿನಿಮಾದಲ್ಲಿ ಪಾತ್ರಮಾಡಿಸುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಈಗಾಗಲೇ ಎರಡು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಕತ್ರಿನಾ ಕೈಫ್, ಶ್ರದ್ಧಾ ಕಪೂರ್‌ ಅವರುಗಳು ಸಹ ನಟಿಸಿದ್ದಾರೆ. ದೀಪಿಕಾ ಪಡುಕೋಣೆ, ಪ್ರಭಾಸ್ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ.

ಇದೀಗ ಬಾಲಿವುಡ್‌ನ ಸ್ಟಾರ್ ನಟರೊಬ್ಬರನ್ನು ತೆಲುಗು ಸಿನಿಮಾರಂಗಕ್ಕೆ ಕರೆಸಲಾಗುತ್ತಿದ್ದು, ಜೂ.ಎನ್‌ಟಿಆರ್ ಎದುರು ವಿಲನ್ ಪಾತ್ರ ನೀಡಲಾಗಿದೆ.

Saif Ali Khan May Act In Jr NTR Movie As Villain

ಹೌದು, ನಟ ಸೈಫ್ ಅಲಿ ಖಾನ್ ಅನ್ನು ಜೂ.ಎನ್‌ಟಿಆರ್ ಸಿನಿಮಾಕ್ಕಾಗಿ ತೆಲುಗಿಗೆ ಕರೆಸಲಾಗುತ್ತಿದೆ. ಈಗಾಗಲೇ ಸೈಫ್ ಅವರು ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಅದು ಸಂಪೂರ್ಣ ತೆಲುಗು ಸಿನಿಮಾ ಅಲ್ಲ.

ಜೂ.ಎನ್‌ಟಿಆರ್ ನಟಿಸಿ ತ್ರಿವಿಕ್ರಮ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ವಿಲನ್ ಪಾತ್ರಕ್ಕಾಗಿ ಸೈಫ್ ಅಲಿ ಖಾನ್ ಅವರನ್ನು ಕೇಳಲಾಗಿದ್ದು ಸೈಫ್ ಸಹ ಪಾತ್ರದಲ್ಲಿ ನಟಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ ಸ್ಟಾರ್ ನಟರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಆದರೆ ವಿಲನ್‌ಗಳಾಗಿ ನಟಿಸುವುದು ತುಸು ಅಪರೂಪ. ಕನ್ನಡದ ಕೆಜಿಎಫ್‌ 2 ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ. ಜಾಕಿ ಶ್ರಾಫ್ ಸಹ ದಕ್ಷಿಣದ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ.

ಅಮಿತಾಬ್ ಬಚ್ಚನ್, ಅಕ್ಷಯ್‌ ಕುಮಾರ್, ಶಾರುಖ್ ಖಾನ್ ಅವರುಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸೈಫ್ ಅಲಿ ಖಾನ್‌ ಈವರೆಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ 'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರಾದರೂ ಆ ಸಿನಿಮಾದ ನಿರ್ಮಾಪಕ, ನಿರ್ದೇಶಕ, ನಟಿ, ಸಹ ನಟರು ಬಹುತೇಕ ಬಾಲಿವುಡ್‌ನವರೇ. ಹಾಗಾಗಿ 'ಆದಿಪುರುಷ್' ಅನ್ನು ತೆಲುಗು ಸಿನಿಮಾ ಎಂದು ಹೇಳಲಾಗದು.

ಜೂ.ಎನ್‌ಟಿಆರ್ ಪ್ರಸ್ತುತ ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾ ಮುಗಿದ ಬಳಿಕ ತ್ರಿವಿಕ್ರಮ್ ಜೊತೆ ಸಿನಿಮಾ ಆರಂಭಿಸಲಿದ್ದಾರೆ. ಇನ್ನು ಸೈಫ್ ಅಲಿ ಖಾನ್, ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ಬಳಿಕ ಜೂ.ಎನ್‌ಟಿಆರ್, ತ್ರಿವಿಕ್ರಮ್ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ.

More from Filmibeat

English summary
Bollywood actor Saif Ali Khan may act in Jr NTR's movie as villain. He is currently acting along with Prabhas in Adipurush movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X