»   » ಜೇಮ್ಸ್ ಬಾಂಡ್ ಚಿತ್ರಕ್ಕೆ ಚೆಂದುಳ್ಳಿ ಚೆಲುವೆ ಸಾನಿಯಾ

ಜೇಮ್ಸ್ ಬಾಂಡ್ ಚಿತ್ರಕ್ಕೆ ಚೆಂದುಳ್ಳಿ ಚೆಲುವೆ ಸಾನಿಯಾ

Posted By:
Subscribe to Filmibeat Kannada

ಜೇಮ್ಸ್ ಬಾಂಡ್ ಚಿತ್ರ ತೆರೆಗೆ ಬಂದು ಹತ್ತತ್ರ ಎರಡು ವರ್ಷವಾಯ್ತು. ಬಾಂಡ್ ಸೀರೀಸ್ ನ ಹೊಸ ಆವೃತ್ತಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. 'ಸ್ಕೈ ಫಾಲ್' ಚಿತ್ರದ ನಂತರ ಎಂದಿನಂತೆ ಬಾಂಡ್ ಪಾತ್ರದಲ್ಲಿ ಡೇನಿಯಲ್ ಕ್ರೇಗ್ ಬಂದೂಕು ಹಿಡಿದ್ರೆ, ಬಾಂಡ್ ಹಾರ್ಟ್ ಗೆ ಬುಲೆಟ್ ಹಾರಿಸೋ ಬಾಂಡ್ ಗರ್ಲ್ ಆಗಿ ಭಾರತದ ತಾರೆ ಸೆಲೆಕ್ಟ್ ಆಗ್ತಾರಂತೆ.

ಭಾರತದ ತಾರೆ ಅಂದ ತಕ್ಷಣ, ಬಾಲಿವುಡ್ ನ ಟಾಪ್ ಹೀರೋಯಿನ್ಸ್ ಹಾಲಿವುಡ್ ನ ಬಾಂಡ್ ಚಿತ್ರಕ್ಕೆ ಸೆಲೆಕ್ಟ್ ಆಗಿಲ್ಲ. ಟೆನ್ನಿಸ್ ಲೋಕದಲ್ಲಿ ಭಾರತದ ಸೆನ್ಸೇಷನ್ ಆಗಿರುವ ತಾರೆ ಸಾನಿಯಾ ಮಿರ್ಜಾ ಬಾಂಡ್ ಗರ್ಲ್ ಆಗ್ತಾರಂತೆ..! ಹಾಗಂತ ಹಾಲಿವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಗುಲ್ಲೆದ್ದಿದ್ದೆ.

Sania Mirza in James bond next

ಸದಾ ಟೂರ್ನಮೆಂಟ್ ಗಳಲ್ಲೇ ಬಿಜಿಯಾಗಿರುವ ಸಾನಿಯಾಗೆ ಯು.ಕೆ ಮೂಲದ ಕಾಸ್ಟಿಂಗ್ ಕಂಪನಿಯಿಂದ ಆಫರ್ ಸಿಕ್ಕಿದೆ. ಬಾಂಡ್ ಸೀರೀಸ್ ನ ಬ್ರ್ಯಾಂಡ್ ನ್ಯೂ ಚಿತ್ರದ ಕೆಲ ಸೀನ್ ಗಳು ಭಾರತದಲ್ಲಿ ಶೂಟ್ ಆಗಲಿದೆ. ಆದ್ದರಿಂದ ಚಿತ್ರತಂಡಕ್ಕೆ ಇಡೀ ಜಗತ್ತಿಗೆ ಮುಖಪರಿಚಯವಿರುವ ಭಾರತೀಯ ನಾರಿ ಬೇಕಾಗಿದೆ. ಟೆನ್ನಿಸ್ ಲೋಕದಲ್ಲಿ ಸಾನಿಯಾ ಸಂಚಲನ ಸೃಷ್ಟಿಸುತ್ತಿರುವುದರಿಂದ ಸಾನಿಯಾಗೆ ಈ ಗೋಲ್ಡನ್ ಚಾನ್ಸ್ ಸಿಕ್ಕಿದೆ.

ನಟನೆಯಲ್ಲಿ ಅನುಭವವಿಲ್ಲದ ಕಾರಣ, ಆಫರ್ ಬಗ್ಗೆ ಸಾನಿಯಾ ತುಟಿಕ್ ಪಿಟಿಕ್ ಅಂದಿಲ್ಲ. ಒಂದುವೇಳೆ ಸಾನಿಯಾ ಬಾಂಡ್ ಗರ್ಲ್ ಆಗೋಕೆ ಒಪ್ಪಿಕೊಂಡರೆ, ಇಲ್ಲಿವರೆಗೂ ಕೈಯಲ್ಲಿದ್ದ ಟೆನ್ನಿಸ್ ರಾಕೆಟ್ ಬಿಟ್ಟು ಪೌಡರ್ ಪ್ಯಾಡ್, ಕನ್ನಡಿ ಹಿಡಿಯೋದು ಪಕ್ಕಾ. (ಏಜೆನ್ಸೀಸ್)

English summary
Tennis Sensation Sania mirza is likely to get selected for James Bond next. It seems that Sania has got an offer from casting agency from UK to act as the next bong girl beside Daniel Craig. Sania is still mum about the project.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada