»   » 'ತಾರಕ್' ಸುಂದರಿ ಶಾನ್ವಿಗೆ ಒಲಿದು ಬಂದ ಮತ್ತೊಂದು ಅವಕಾಶ

'ತಾರಕ್' ಸುಂದರಿ ಶಾನ್ವಿಗೆ ಒಲಿದು ಬಂದ ಮತ್ತೊಂದು ಅವಕಾಶ

Posted By:
Subscribe to Filmibeat Kannada

ನಟಿ ಶಾನ್ವಿ ಶ್ರೀವತ್ಸವ್ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕನ್ನಡದ ಅನೇಕ ಸ್ಟಾರ್ ನಟರ ಜೊತೆ ಸಿನಿಮಾ ಮಾಡಿರುವ ಶಾನ್ವಿ ಇತ್ತೀಚಿಗಷ್ಟೆ 'ಮಫ್ತಿ' ಚಿತ್ರದ ನಾಯಕಿ ಆಗಿದ್ದರು. ಆ ಸಿನಿಮಾ ಬಳಿಕ ಈಗ ಮತ್ತೊಂದು ಹೊಸ ಸಿನಿಮಾವನ್ನು ಶಾನ್ವಿ ಶುರು ಮಾಡುವ ತವಕದಲ್ಲಿ ಇದ್ದಾರೆ.

ಹೊಸ ವರ್ಷಕ್ಕೆ ದಿಟ್ಟ ನಿರ್ಧಾರ ತೆಗೆದುಕೊಂಡ ನಟಿ ಶಾನ್ವಿ ಶ್ರೀವಾತ್ಸವ್

ಈ ಬಾರಿ ಮಹಿಳಾ ಪ್ರಧಾನ ಸಿನಿಮಾಗೆ ಶಾನ್ವಿ ನಾಯಕಿ ಆಗಲಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ರೀತಿಯ ಸಿನಿಮಾ ಆಗಿದ್ದು, ವರುಣದೇವ ಕೊಲವು ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರಂತೆ. ಈ ಚಿತ್ರದ ಪಾತ್ರಕ್ಕೆ ಶಾನ್ವಿ ಅವರು ತುಂಬ ಚೆನ್ನಾಗಿ ಸೂಟ್ ಆಗುತ್ತಾರೆ ಎನ್ನುವುದು ನಿರ್ದೇಶಕ ಅಭಿಪ್ರಾಯವಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಸುಹಾಸಿನಿ ಮತ್ತು ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 'ಮಫ್ತಿ' ಖ್ಯಾತಿಯ ಸಿನಿಮಾಟೋಗ್ರಾಫರ್ ನವೀನ್ ಕುಮಾರ್ ಛಾಯಾಗ್ರಹಣ ಇರಲಿದೆಯಂತೆ. ಸದ್ಯಕ್ಕೆ ಈ ಚಿತ್ರದ ಟೈಟಲ್ ಇನ್ನು ಪಕ್ಕಾ ಆಗಿಲ್ಲ.

Shanvi Srivastava next project will be suspense thriller movie

ಇನ್ನು ಶಾನ್ವಿ ಶ್ರೀವತ್ಸವ ನಟ ಯಶ್, ದರ್ಶನ್, ಶ್ರೀ ಮುರಳಿ, ಗಣೇಶ್ ಜೊತೆ ನಟಿಸಿದ್ದಾರೆ. ಅದರ ಜೊತೆಗೆ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ರೀತಿ ಕನ್ನಡದಲ್ಲಿ 'ತಾರಕ್' ಸುಂದರಿ ಶಾನ್ವಿ ಅವರ ಡಿಮ್ಯಾಂಡ್ ದಿನೇ ದಿನೇ ಜಾಸ್ತಿಯಾಗುತ್ತಿದೆ.

English summary
Kannada actress Shanvi Srivastava next project will be suspense thriller movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X