For Quick Alerts
  ALLOW NOTIFICATIONS  
  For Daily Alerts

  ಸಂಪಾದಕನೊಂದಿಗೆ ಹಾಸಿಗೆ ಹಂಚಿಕೊಂಡಳೇ ತಾರೆ?

  By Rajendra
  |

  ಚಲನಚಿತ್ರ ನಿರ್ದೇಶಕರೊಂದಿಗೆ ಹಾಸಿಗೆ ಹಂಚಿಕೊಂಡ ತಾರೆಗಳ ಬಗ್ಗೆ ಓದಿರುತ್ತೀರಿ. ನಟರ ಜೊತೆ ಪಲ್ಲಂಗ ಹಂಚಿಕೊಂಡ ನಟಿಯರ ಸುದ್ದಿಗಳು ಆಗಿಂದಾಗ್ಗೆ ನಿಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಶ್ವಾನಗಳ ಜೊತೆ ಚಕ್ಕಂದ ಆಡಿದ ತಾರೆಗಳ ಬಗ್ಗೆ ಬೇಕಿದ್ದರೆ ಇಲ್ಲಿ ನೋಡಿ. ಆದರೆ ಪತ್ರಿಕೆಯ ಸಂಪಾದಕನೊಬ್ಬನ ಜೊತೆ ಸರಸವಾಡಿದ ತಾರೆಯ ಬಗ್ಗೆ ನೀವು ಕೇಳಿದ್ದೀರಾ?

  ಅಂತಹ ರೋಚಕ ಸುದ್ದಿಯೊಂದು ಬಾಲಿವುಡ್ ನಿಂದ ತೇಲಿಬಂದಿದೆ. ಇತ್ತೀಚೆಗೆ ತಮ್ಮ ಖಾಸಗಿ ಸಂಪತ್ತನ್ನು ಪ್ಲೇಬಾಯ್ ಪತ್ರಿಕೆಯಲ್ಲಿ ಘೋಷಿಸಿದ್ದ ಶೆರ್ಲಿನ್ ಚೋಪ್ರಾ ಎಂಬ ಮಾದಕ ಬೆಡಗಿ ಬಗ್ಗೆ ಈ ಮಾತುಗಳು ಕೇಳುಬರುತ್ತಿವೆ. ಪೋಲಿ ಪತ್ರಿಕೆ 'ಪ್ಲೇಬಾಯ್' ಸಂಪಾದಕರ ಜೊತೆ ಶೆರ್ಲಿನ್ ಮಲಗಿದ್ದರು ಎಂಬ ರಾತ್ರಿ ರಹಸ್ಯ ಬಯಲಾಗಿದೆ.

  'ಪ್ಲೇಬಾಯ್' ಪತ್ರಿಕೆ ಸಂಪಾದಕ ಹಗ್ ಹಫನರ್ ಜೊತೆ ಅನೈತಿಕ ಸಂಬಂಧ ಇರುವುದು ಬಯಲಾಗಿದೆ. ಆದರೆ ಚೋಪ್ರಾ ಮಾತ್ರ ಈ ರೀತಿಯ ಗಾಳಿಸುದ್ದಿಯನ್ನು ಹಾಗೇ ಗಾಳಿಗೆ ತೂರಿದ್ದಾರೆ. ನಾನು ಆ ಸಂಪಾದಕನ ಜೊತೆ ಮಲಗೂ ಇಲ್ಲ ಕುಂತೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಇದುವರೆಗೂ ನನ್ನನ್ನು ಯಾರೂ ಆ ರೀತಿಯ ಅನೈತಿಕ ವ್ಯವಹಾರಕ್ಕೆ ಆಹ್ವಾನಿಸಿಲ್ಲ ಎಂದಿದ್ದಾರೆ. ಒಂದು ವೇಳೆ ಆಹ್ವಾನಿಸಿದ್ದರೆ ಹೋಗುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗೆಯೇ ತಮ್ಮ ಬೆತ್ತಲೆ ದೇಹದ ಬಗ್ಗೆಯೂ ತುಂಬಾ ಹೇಳಿಕೊಂಡಿದ್ದಾರೆ. ತಮ್ಮ ತಾರುಣ್ಯವನ್ನು ನಗ್ನವಾಗಿ ಪ್ರದರ್ಶಿಸುವಲ್ಲಿ ತಪ್ಪೇನಿದೆ ಎಂದಿದ್ದಾರೆ ಬಿಚ್ಚಮ್ಮ.

  ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈ ಬಿಚ್ಚಮ್ಮ ಬಾಲಿವುಡ್ ನಲ್ಲಿ ರಾಗಿ ಬೀಸಿದ್ದೇ ಬಂತು. ನಯಾಪೈಸೆ ವರ್ಕ್ ಔಟ್ ಆಗಲಿಲ್ಲ. ಆಗಾಗ ತಮ್ಮ ವಸ್ತ್ರ ಕಳಚಿ ಕಜುರಾಹೊ ಶಿಲ್ಪಗಳೂ ನಾಚುವಂತಹ ಫೋಟೋಗಳನ್ನು ಟ್ವಿಟ್ಟರ್ ಗೆ ಹಾಕಿ ಸಂಭ್ರಮಿಸುತ್ತಿದ್ದರು.

  ಇದ್ಯಾವುದಕ್ಕೂ ಬಾಲಿವುಡ್ ಸೊಪ್ಪುಹಾಕಲಿಲ್ಲ. ಈಕೆಯ ತುಂಬಿದ ಸೌಂದರ್ಯವನ್ನು ನೋಡಿದ ಕೆಲವು ಬಾಲಿವುಡ್ ನಿರ್ಮಾಪಕರು ರತ್ನಗಂಬಳಿ ಹಾಸಿ ಅವಕಾಶ ಕೊಟ್ಟರು. ಅಲ್ಲಿಂದ ಈಕೆ ಹಿಂತಿರುಗಿ ನೋಡಲಿಲ್ಲ. ಈಕೆಯ ಚಿತ್ರಗಳು ಹೇಳಿಕೊಳ್ಳುವಂತಹ ಸದ್ದು ಮಾಡದಿದ್ದರೂ ಈಕೆ ಮಾತ್ರ ಆಗಾಗ ಈ ರೀತಿ ಸದ್ದು ಮಾಡುತ್ತಲೇ ಇದ್ದಾರೆ. (ಏಜೆನ್ಸೀಸ್)

  English summary
  The rumours are doing the rounds that Sherlyn Chopra might have slept with the Playboy Magazine's editor Hugh Hefner. It is believed that sleeping with Hugh Hefner, is an unofficial part of any Playmate's contract.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X