For Quick Alerts
  ALLOW NOTIFICATIONS  
  For Daily Alerts

  ಕರುನಾಡ ಚಕ್ರವರ್ತಿ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ನಟನೆ.!

  By Bharath Kumar
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಮತ್ತು 'ಲೀಡರ್' ಚಿತ್ರಗಳು ತೆರೆ ಕಾಣಲು ಸಿದ್ದವಾಗುತ್ತಿದೆ. ಇದರ ಜೊತೆಗೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೀಗಿರುವಾಗ, ಶಿವಣ್ಣ ಅಡ್ಡಾದಿಂದ ಹೊಸ ಚಿತ್ರದ ಸುಳಿವು ಸಿಕ್ಕಿದೆ.

  ಈ ಹೊಸ ಚಿತ್ರದ ಬಗ್ಗೆ ಹೊರಬಿದ್ದಿರುವ ಮಾಹಿತಿಗಳು ಒಂದಕ್ಕಿಂತ ಒಂದು ಥ್ರಿಲ್ಲಿಂಗ್ ಎನಿಸುತ್ತಿದೆ. ಹೀಗಾಗಿ, ಈ ಚಿತ್ರದ ಮೂಲಕ ಶಿವು ಹುಡುಗರಿಗೆ ಒಂದಲ್ಲ, ಎರಡಲ್ಲ, ತ್ರಿಬಲ್ ಧಮಾಕ ಸಿಗಲಿದೆಯಂತೆ. ಇನ್ನು ಈ ಚಿತ್ರದ ಬಹುದೊಡ್ಡ ವಿಶೇಷ ಏನಪ್ಪಾ ಅಂದ್ರೆ, ಶಿವರಾಜ್ ಕುಮಾರ್ ಚಿತ್ರದಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ನಟ ತೆರೆ ಹಂಚಿಕೊಳ್ಳುವ ಸಾಧ್ಯತೆಯಿದೆಯಂತೆ.

  ಅಷ್ಟಕ್ಕೂ, ಈ ಚಿತ್ರದ ನಿರ್ದೇಶಕ ಯಾರು? ಸೆಂಚುರಿಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಲಿರುವ ಆ ನಟ ಯಾರು ಎಂಬುದನ್ನ ಮುಂದೆ ಓದಿ.....

  ನಾಗತಿಹಳ್ಳಿ ಚಿತ್ರದಲ್ಲಿ ಶಿವಣ್ಣ

  ನಾಗತಿಹಳ್ಳಿ ಚಿತ್ರದಲ್ಲಿ ಶಿವಣ್ಣ

  ಹಲವು ದಿನಗಳಿಂದ ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂದಿನ ಚಿತ್ರದಲ್ಲಿ ಸೆಂಚುರಿಸ್ಟಾರ್ ಅಭಿನಯಿಸುತ್ತಾರೆ ಎನ್ನಲಾಗುತ್ತಿತ್ತು. ಇದೀಗ, ಈ ಚಿತ್ರದ ಬಗ್ಗೆ ಚರ್ಚೆ ನಡೆದಿದ್ದು, ಶಿವಣ್ಣ ಕೂಡ ಒಪ್ಪಿಗೆ ಕೊಟ್ಟಿದ್ದಾರಂತೆ.

  ದ್ವಿಪಾತ್ರದಲ್ಲಿ ಸೆಂಚುರಿಸ್ಟಾರ್

  ದ್ವಿಪಾತ್ರದಲ್ಲಿ ಸೆಂಚುರಿಸ್ಟಾರ್

  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ಹಲವು ವರ್ಷಗಳ ನಂತರ ಶಿವಣ್ಣನನ್ನ ದ್ವಿಪಾತ್ರದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

  ಕಡ್ಡಿಪುಡಿ ಚಂದ್ರು ನಿರ್ಮಾಣ

  ಕಡ್ಡಿಪುಡಿ ಚಂದ್ರು ನಿರ್ಮಾಣ

  ಇನ್ನು ಶಿವಣ್ಣ ಮತ್ತು ಮೇಷ್ಟ್ರು ಕಾಂಬಿನೇಷನ್ ಚಿತ್ರವನ್ನ ಖ್ಯಾತ ನಟ ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಲಿದ್ದಾರಂತೆ.

  ಶಿವರಾಜ್ ಕುಮಾರ್ ಅಭಿಮಾನಿ ಮಾಡಿದ 'ಟಗರು' ದೋಸೆ

  ಅಮಿತಾಬ್ ಬಚ್ಚನ್ ನಟನೆ!

  ಅಮಿತಾಬ್ ಬಚ್ಚನ್ ನಟನೆ!

  ಮೇಷ್ಟ್ರು ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ಸೂಪರ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರನ್ನ ಅಪ್ರೋಚ್ ಮಾಡಲಾಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಬಿಗ್-ಬಿ ಕೂಡ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

  'ಅಮೃತಧಾರೆ'ಯಲ್ಲಿ ಅಭಿನಯಿಸಿದ್ದ 'ಬಿಗ್-ಬಿ'

  'ಅಮೃತಧಾರೆ'ಯಲ್ಲಿ ಅಭಿನಯಿಸಿದ್ದ 'ಬಿಗ್-ಬಿ'

  ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದ್ದ 'ಅಮೃತಧಾರೆ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಈ ಚಿತ್ರದಲ್ಲೂ ಅಮಿತಾಬ್ ಬಣ್ಣ ಹಚ್ಚಬಹುದು ಎಂಬ ಕುತೂಹಲ ಹೆಚ್ಚಿದೆ.

  ಶಿವಣ್ಣನ 'ಲೀಡರ್' ಮತ್ತು 'ಟಗರು' ಚಿತ್ರಗಳಿಗೆ ನಟ ಬಾಲಯ್ಯ ಸಾಥ್

  ಅಕ್ಟೋಬರ್ ನಲ್ಲಿ ಸಿನಿಮಾ ಶುರು

  ಅಕ್ಟೋಬರ್ ನಲ್ಲಿ ಸಿನಿಮಾ ಶುರು

  'ಇಷ್ಟಕಾಮ್ಯ' ಚಿತ್ರದ ನಂತರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಲಿರುವ ಚಿತ್ರ ಇದಾಗಲಿದ್ದು, ದೊಡ್ಡ ಬಜೆಟ್ ಸಿನಿಮವಾಗಿರಲಿದೆ. ಮತ್ತೊಂದೆಡೆ 'ದಿ ವಿಲನ್' ಚಿತ್ರೀಕರಣ ಮುಗಿಸಿದ ನಂತರ ಮೇಷ್ಟ್ರ ಚಿತ್ರಕ್ಕೆ ಶಿವಣ್ಣ ಚಾಲನೆ ಕೊಡಲಿದ್ದಾರೆ ಎನ್ನಲಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಅಕ್ಟೋಬರ್ ತಿಂಗಳಲ್ಲಿ ಈ ಅದ್ದೂರಿ ಸಿನಿಮಾ ಸೆಟ್ಟೇರಲಿದೆ.

  ದುಬೈಗೆ ಹಾರಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

  English summary
  Nagathihalli Chandrashekar Will Direct Shivarajkumar to in his Next Movie. and Director has Approached Amitabh Bachchan for an Important Role for this yet-to-be-titled film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X