»   » ಶಿವಣ್ಣ-ಸುದೀಪ್ ಬಗ್ಗೆ ಈಗ ಹರಡುತ್ತಿರುವ ಸುದ್ದಿ ನಿಜಾನಾ..?

ಶಿವಣ್ಣ-ಸುದೀಪ್ ಬಗ್ಗೆ ಈಗ ಹರಡುತ್ತಿರುವ ಸುದ್ದಿ ನಿಜಾನಾ..?

Posted By: ಹರಾ
Subscribe to Filmibeat Kannada

ಇಂದು ಬೆಳಗ್ಗಿನಿಂದಲೂ ಗಾಂಧಿನಗರದ ಅಂಗಳದಲ್ಲಿ ಒಂದೇ ಸುದ್ದಿ. ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಬಗ್ಗೆ. ಇಬ್ಬರ ಮಧ್ಯೆ ಮತ್ತೆ ಅಂತದ್ದೇನಾಯ್ತು ಅಂತ ಕಣ್ಣು-ಬಾಯಿ ಬಿಡಬೇಡಿ. ಗಾಂಧಿನಗರದಲ್ಲಿ ಹರಡುತ್ತಿರುವ ಸುದ್ದಿ ಕೊಂಚ ಸರ್ ಪ್ರೈಸಿಂಗ್.

ಅದು ಏನಪ್ಪಾ ಅಂದ್ರೆ, ಶಿವರಾಜ್ ಕುಮಾರ್ ಮತ್ತು ಸುದೀಪ್ ತೆರೆ ಹಂಚಿಕೊಳ್ಳಲಿದ್ದಾರೆ. ಒಂದೇ ಚಿತ್ರದಲ್ಲಿ ಇಬ್ಬರು ಅಭಿನಯಿಸಲಿದ್ದಾರೆ. ರೀಲ್ ನಲ್ಲಿ ಇಬ್ಬರು ಸ್ಟಾರ್ ನಟರು ಒಂದಾಗಲಿದ್ದಾರೆ.! ಹಾಗಂತ ಗಾಂಧಿನಗರದ ಗಲ್ಲಿಗಳಲ್ಲಿ ಗುಲ್ಲೋ..ಗುಲ್ಲು. [ಶಿವಣ್ಣ ಮಗಳ ಮದುವೆಯಲ್ಲಿ ಸುದೀಪ್-ಪುನೀತ್ ಮಾಡಿದ್ದೇನು?]

sudeep-shivarajkumar

ಅಂದ್ಹಾಗೆ, ಇಬ್ಬರು ಯಾವ ಚಿತ್ರದಲ್ಲಿ ಒಂದಾಗಿ ಕಾಣಿಸಿಕೊಳ್ತಾರೆ ಅನ್ನುವ ಪ್ರಶ್ನೆಗೆ ಉತ್ತರ ಇದೆ. ಚಿತ್ರದ ಹೆಸರು 'ಕುಂಭಮೇಳ' ಅಂತ. ಇಷ್ಟು ಬಿಟ್ಟರೆ, ಚಿತ್ರದ ನಿರ್ದೇಶಕರು ಯಾರು, ನಿರ್ಮಾಪಕರು ಎಲ್ಲಿಯವರು, ಇಬ್ಬರನ್ನು ಒಂದು ಮಾಡುವ ಪ್ರಯತ್ನ ಯಾರದ್ದು ಅನ್ನುವ ಬಗ್ಗೆ ಮಾಹಿತಿ ಇಲ್ಲ. [ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

ಇದು ಶುದ್ಧ ಗಾಸಿಪ್ಪೋ ಅಥವಾ ಇಂತಹ ಪ್ರಯತ್ನ ತೆರೆ ಮರೆಯಲ್ಲಿ ನಡೆಯುತ್ತಿದೆಯೋ ಅನ್ನುವುದನ್ನೂ ಖಚಿತವಾಗಿ ಹೇಳುವುದು ಕಷ್ಟ. ಒಂದ್ವೇಳೆ ಈ ಸುದ್ದಿ ನಿಜವೇ ಆದರೆ, ಕನ್ನಡ ಸಿನಿ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ ಅಲ್ವಾ.

English summary
According to the Grapevine, Kannada Actor Shivarajkumar and Kiccha Sudeep is all set to share the screen space in the movie 'Kumbhamela'. But how far is it true is a question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada