»   » ಶಿವಣ್ಣ ಜೊತೆಗೆ ನಟಿಸುವ ಶ್ರದ್ಧಾ ಕನವರಿಕೆ ಈಡೇರುತ್ತಾ.?

ಶಿವಣ್ಣ ಜೊತೆಗೆ ನಟಿಸುವ ಶ್ರದ್ಧಾ ಕನವರಿಕೆ ಈಡೇರುತ್ತಾ.?

Posted By:
Subscribe to Filmibeat Kannada

'ಯು ಟರ್ನ್', 'ಆಪರೇಷನ್ ಅಲಮೇಲಮ್ಮ' ಸೇರಿದಂತೆ ಹಲವು ಸದಭಿರುಚಿಯ ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರದ್ಧಾ ಶ್ರೀನಾಥ್ ಗೆ ಒಂದು ಆಸೆ ಇದೆ. ಅದೇನಪ್ಪಾ ಅಂದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ತೆರೆ ಹಂಚಿಕೊಳ್ಳಬೇಕು ಎಂಬ ಬಯಕೆ ಬಹಳ ದಿನಗಳಿಂದಲೂ ಶ್ರದ್ಧಾ ಶ್ರೀನಾಥ್ ಗೆ ಕಾಡುತ್ತಿದೆ.

ಇದನ್ನೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲೂ ನಟಿ ಶ್ರದ್ಧಾ ಶ್ರೀನಾಥ್ ಕನವರಿಸಿದರು. ಅದಕ್ಕೆ 'ಅಸ್ತು' ಎಂದಿದ್ದರು ಶಿವಣ್ಣ. ಇದೀಗ ನಿಜವಾಗಿಯೂ, ಶಿವಣ್ಣ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಸದಾವಕಾಶ ಶ್ರದ್ಧಾ ಶ್ರೀನಾಥ್ ಗೆ ಒಲಿಯುವ ಹಾಗಿದೆ.

'ರುಸ್ತುಮ್' ಚಿತ್ರತಂಡದಿಂದ ಹೊರಬಿದ್ದಿರುವ ಸುದ್ದಿ ನಿಜವೇ ಆದರೆ, ಸೆಂಚುರಿ ಸ್ಟಾರ್ ಜೊತೆಗೆ ಮೂಗುತಿ ಸುಂದರಿ ಶ್ರದ್ಧಾ ಅಭಿನಯಿಸುವುದು ಪಕ್ಕಾ. ಅಷ್ಟಕ್ಕೂ, ಯಾವುದು ಈ 'ರುಸ್ತುಮ್' ಸಿನಿಮಾ.? ನಿರ್ದೇಶಕರ ಯಾರು.? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿರಿ....

ರವಿ ವರ್ಮಾ ನಿರ್ದೇಶನದ ಸಿನಿಮಾ

ಸಾಹಸ ನಿರ್ದೇಶಕ ರವಿ ವರ್ಮಾ ಆಕ್ಷನ್ ಕಟ್ ಹೇಳಲು ಸಿದ್ಧವಾಗಿರುವುದು 'ರುಸ್ತುಮ್' ಚಿತ್ರಕ್ಕೆ. ಈ ವರ್ಷದ ಡಾ.ರಾಜ್ ಕುಮಾರ್ ಜನ್ಮದಿನೋತ್ಸವದಂದು 'ರುಸ್ತುಮ್' ಚಿತ್ರದ ಮುಹೂರ್ತ ನೆರವೇರಿಸಲು ರವಿ ವರ್ಮಾ ಪ್ಲಾನ್ ಮಾಡಿದ್ದಾರೆ.

ಶಿವಣ್ಣನ ಜೊತೆ ಅಭಿನಯಿಸಲು ಬಂದ್ರು ಬಾಲಿವುಡ್ ಸ್ಟಾರ್

'ರುಸ್ತುಮ್'ನಲ್ಲಿ ಶಿವಣ್ಣ ಪೊಲೀಸ್

'ರುಸ್ತುಮ್' ಚಿತ್ರದಲ್ಲಿ ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದರೆ, 'ಮಫ್ತಿ' ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ.

'ರುಸ್ತುಂ' : ಶಿವಣ್ಣ ಖಾತೆಗೆ ಸೇರಿದ ಮತ್ತೊಂದು ಹೊಸ ಸಿನಿಮಾ

ಶ್ರದ್ಧಾ ಶ್ರೀನಾಥ್ ನಾಯಕಿ.?

'ರುಸ್ತುಮ್' ಚಿತ್ರತಂಡದಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ, 'ರುಸ್ತುಮ್' ನಾಯಕಿಯ ಪಾತ್ರ ನಟಿ ಶ್ರದ್ಧಾ ಶ್ರೀನಾಥ್ ಗೆ ಸೂಟ್ ಆಗುತ್ತಂತೆ. ಹೀಗಾಗಿ, ಅವರನ್ನೇ ನಾಯಕಿ ಆಗಿ ಆಯ್ಕೆ ಮಾಡಲು ರವಿ ವರ್ಮಾ ನಿರ್ಧರಿಸಿದ್ದಾರಂತೆ.

ಓಕೆ ಮಾಡಿದ್ದಾರಾ ಶ್ರದ್ಧಾ.?

ಈಗಾಗಲೇ 'ಗೋಧ್ರಾ' ಶೂಟಿಂಗ್ ಕಂಪ್ಲೀಟ್ ಮಾಡಿರುವ ಶ್ರದ್ಧಾ ಶ್ರೀನಾಥ್, ಉತ್ತಮ ಕನ್ನಡ ಸ್ಕ್ರಿಪ್ಟ್ ಗಳನ್ನು ಎದುರು ನೋಡುತ್ತಿದ್ದಾರೆ. ಶ್ರದ್ಧಾಗೆ 'ರುಸ್ತುಮ್' ಕಥೆ ಇಷ್ಟವಾಗಿದ್ದು, ಪ್ರಾಜೆಕ್ಟ್ ಓಕೆ ಮಾಡಿದ್ದಾರೆ ಎಂಬುದು ಮೂಲಗಳ ಮಾಹಿತಿ.

ಅಧಿಕೃತ ಘೋಷಣೆ ಆಗಬೇಕು

'ರುಸ್ತುಮ್' ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿ ಎಂದು ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಗ್ಯಾರೆಂಟಿ ಇಲ್ಲ. ಆದ್ರೆ, ಕನ್ನಡ ನಟಿಯನ್ನೇ ನಾಯಕಿಯ ಜಾಗಕ್ಕೆ ಕರೆತರಬೇಕು ಎಂಬುದು ರವಿ ವರ್ಮಾ ಹಂಬಲ. ಹೀಗಾಗಿ, ಶ್ರದ್ಧಾ ಶ್ರೀನಾಥ್ ಫೈನಲ್ ಆದರೂ ಅಚ್ಚರಿ ಇಲ್ಲ.

ಚಿತ್ರಕ್ಕಾಗಿ ಬಾಲಿವುಡ್ ನಿಂದ ಬರ್ತಾರಾ ಖ್ಯಾತ ನಟ.?

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, 'ರುಸ್ತುಮ್' ಚಿತ್ರಕ್ಕಾಗಿ ಬಾಲಿವುಡ್ ನಿಂದ ಖ್ಯಾತ ನಟರೊಬ್ಬರನ್ನೂ ರವಿ ವರ್ಮಾ ಕನ್ನಡಕ್ಕೆ ಕರ್ಕೊಂಡ್ ಬರ್ತಿದ್ದಾರಂತೆ. ಅನಿಲ್ ಕಪೂರ್, ಸಂಜಯ್ ದತ್ ಅಥವಾ ಸುನೀಲ್ ಶೆಟ್ಟಿ ಅವರನ್ನ ಭೇಟಿ ಆಗುವ ಪ್ಲಾನ್ ನಲ್ಲಿದ್ದಾರಂತೆ ರವಿ ವರ್ಮಾ.

English summary
Kannada Actress Shraddha Srinath to play lead opposite Kannada Actor Shiva Rajkumar in Ravi Varma directorial 'Rustom'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X