For Quick Alerts
  ALLOW NOTIFICATIONS  
  For Daily Alerts

  ಕಮಲ್ ಗೆ 80 ವರ್ಷವಾದರೂ ಓಕೆ; ಶುಭಾ ಪೂಂಜಾ

  |
  'ಜಾಕ್ ಪಟ್' ಹಾಗೂ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಗಮನಸೆಳೆದ ನಟಿ ಶುಭಾ ಪೂಂಜಾ, ನಂತರ ಅದ್ಯಾಕೋ ಸರಿಯಾದ ಅವಕಾಶ ಸಿಗದೇ ಸಾಕಷ್ಟು ಪರದಾಟ ಅನುಭವಿಸಿದ್ದರು. ತೀರಾ ಇತ್ತೀಚಿನವರೆಗೂ ಅಂದರೆ ಸುಮಾರು 6 ರಿಂದ ಏಳು ವರ್ಷಗಳ ಕಾಲ ಶುಭಾ ಪೂಂಜಾ ತೆರೆಮೆರೆಗೆ ಸರಿದಂತಾಗಿತ್ತು. ಆಗಾಗ ಕೆಲವೊಂದು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಲೈಮ್ ಲೈಟ್ ನಲ್ಲಿ ನಿಲ್ಲಲು ಅವರಿಗೆ ಸಾಧ್ಯವೇ ಆಗಿರಲಿಲ್ಲ.

  ಆದರೆ, 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ಇನ್ನೊಬ್ಬರು ನಟಿ ರಾಧಿಕಾ ಪಂಡಿತ್, ಈಗ 'ನಂ 1' ಸ್ಥಾನಕ್ಕೆ ಪೈಪೋಟಿ ನೀಡುವಷ್ಟು ಬೆಳೆದಿರುವುದು ಎಲ್ಲರಿಗೂ ಗೊತ್ತು. ಸಹಜವಾಗಿಯೇ ರಾಧಿಕಾ ಹಾಗೂ ಶುಭಾಗೆ ಹೋಲಿಕೆ ಮಾಡಿ ಜನರು ಮಾತನಾಡುತ್ತಿದ್ದರು. ಆಗೆಲ್ಲಾ ಶುಭಾ ಪುಂಜಾ ವಿರುದ್ಧ ಹರಿದಾಡಿದ್ದ ಗಾಸಿಪ್ ಗಳೇ ಮಾತುಕತೆಗೆ ಆಹಾರವಾಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ.

  ಶುಭಾ ಪೂಂಜಾ ಇತ್ತಚಿಗೆ ಸಾಕಷ್ಟು ಬಿಜಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ 'ಬೀರ' ಚಿತ್ರದ ಶೂಟಿಂಗ್ ಮುಗಿಸಿರುವ ಶುಭಾ ಪೂಂಜಾ, ತೀರಾ ಇತ್ತೀಚಿಗೆ 'ಆ ದಿನಗಳು' ಖ್ಯಾತಿಯ ಚೈತನ್ಯ ನಿರ್ದೇಶನದ 'ಪರಾರಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದಕ್ಕೂ ಮೊದಲು 'ಮೀನಾಕ್ಷಿ', 'ಗೋಲ್ಮಾಲ್', 'ಅರ್ಥ', 'ಚಿರಾಯು' ಮುಂತಾದ ಚಿತ್ರಗಳಿಗೆ ಸಹಿ ಮಾಡಿದ್ದರು ಶುಭಾ ಪೂಂಜಾ. ಇತ್ತೀಚಿಗೆ ನಿಧಾನಕ್ಕೆ ಅವರ ಬೇಡಿಕೆ ಮೇಲೇರುತ್ತಿದೆ.

  ಇಂಥ ಶುಭಾ ಪೂಂಜಾ ಅವರಿಗೆ ಬೆಟ್ಟದಷ್ಟು ಕನಸಿದೆ. ಅದರಲ್ಲೊಂದು ತುಂಬಾ ಇಂಟರೆಸ್ಟಿಂಗ್! ಅದು ಸೌತ್ ಇಂಡಿಯಾದ ಸೂಪರ್ ಸ್ಟಾರ್ ಕಮಲ್ ಹಾಸನ್‌ ಜೊತೆ ನಾಯಕಿಯಾಗಿ ಅಭಿನಯಿಸುವುದು. "ಕಮಲ್‌ ಹಾಸನ್ ಅವರಿಗೆ 80 ವರ್ಷವಾದಾಗ ಕರೆದರೂ ಓಕೆ, ನಾನು ನಾಯಕಿಯಾಗಲು ರೆಡಿ" ಅಂದಿದ್ದಾರೆ ಶುಭಾ. ಇನ್ನೂ 60 ಮಟ್ಟದ ಕಮಲ್ ಗೆ 80 ಆದಾಗ ಶುಭಾಗೂ ಸಾಕಷ್ಟು ವರ್ಷ ಆಗಿರುತ್ತದೆ, ನಾಯಕಿ ಪಟ್ಟ ಸಿಕ್ಕೀತೇ ಎಂದು ಗಾಂಧಿನಗರ ಮಾತನಾಡುತ್ತಿದೆ...(ಒನ್ ಇಂಡಿಯಾ ಕನ್ನಡ)

  English summary
  Kannada Actress Shubha Poonja wish to Act with South Indian Star Kamal Hassan. She told that she wants to act even if she gets chance to act with in his 80 age. Now Shubha Poonja to act in movie Chaitanya's Pagade. 
 
  Thursday, October 11, 2012, 14:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X