»   » ಸಿದ್ದಾರ್ಥ್ ಗೆ ಸಮಂತಾ ಕಿರು ಬೆರಳು ಬೇಡ್ವಂತೆ

ಸಿದ್ದಾರ್ಥ್ ಗೆ ಸಮಂತಾ ಕಿರು ಬೆರಳು ಬೇಡ್ವಂತೆ

Posted By:
Subscribe to Filmibeat Kannada

ತೆಲುಗು, ತಮಿಳು ಚಿತ್ರರಂಗದ ಆಗಾಗ ಹಿಂದಿ ಚಿತ್ರದಲ್ಲೂ ಕಾಣಿಸಿಕೊಳ್ಳುವ ಲವರ್ ಬಾಯ್ ಸಿದ್ದಾರ್ಥ್ ಗೆ ಫ್ಲರ್ಟ್ ಮಾಡುವುದು ನೀರು ಕುಡಿದ್ದಷ್ಟು ಸುಲಭ ಎಂಬ ಮಾತು ಸುಳ್ಳಲ್ಲ. ಪ್ರಕಾಶ್ ರೈ, ಕಮಲ್ ಹಾಸನ್ ಜೊತೆ ಪೈಪೋಟಿ ನೀಡುವಂತೆ ಚಿತ್ರರಂಗದಲ್ಲಿ ಪ್ಲೇ ಬಾಯ್ ಆಗಿ ಬೆಳೆಯುತ್ತಿರುವ ಸಿದ್ದಾರ್ಥ್ ಜೊತೆ ಹೊಸ ಹುಡುಗಿ ಸಮಂತಾ ಹೆಸರು ತಗುಲಿ ಹಾಕಿಕೊಂಡಿರುವುದು ಗುಟ್ಟಿನ ವಿಷಯವಾಗಿ ಉಳಿದಿಲ್ಲ.

ಈಗ ಜಬರ್ದಸ್ತ್ ನಾಯಕಿ ಸಮಂತಾ ಜೊತೆ ಮದುವೆಯಂತೆ ಹೌದೇ? ಎಂದರೆ ಅಯ್ಯೋ ಅದೆಲ್ಲ ಇಲ್ಲ ಬಿಡಿ ಎಂದು ಸಿದ್ದು ನಗುತ್ತಾನೆ. ಆದರೆ, ಶೈವಕ್ಷೇತ್ರ ಶ್ರೀಕಾಳಹಸ್ತಿಗೆ ಅಪ್ಪ ಅಮ್ಮನ ಜೊತೆ ತೆರಳಿ ಮದುವೆಗೆ ತೊಡಕಾಗಿರುವ ನಾಗಪೂಜೆಯನ್ನು ನೆರವೇರಿಸಿ ಬಂದಿದ್ದಾನೆ. ಇವರ ಪ್ರೇಮ್ ಕಹಾನಿಗೆ ಟ್ವಿಸ್ಟ್ ಎಂಬಂತೆ ಸಮಂತಾ ಕುಟುಂಬ ಕೂಡಾ ದೇಗುಲದಲ್ಲಿ ಕಾಣಿಸಿಕೊಂಡಿತ್ತಂತೆ

ಸಿದ್ದಾರ್ಥ್ ನನ್ನ ಬಾಯ್ ಫ್ರೆಂಡ್ ಕಣ್ರಿ ಎಂದು ಸಮಂತಾ ಕಣ್ಣು ಮಿಟುಕಿಸಿ ನಕ್ಕ ಮೇಲೆ ಗಾಳಿಸುದ್ದಿಗೆ ರೆಕ್ಕೆ ಪುಕ್ಕ ಬಂದು ಸುದ್ದಿ ಬಲಿತು ಎಲ್ಲೆಡೆ ಹಾರಾಟತೊಡಗಿತು. ಸಮಂತಾ ಹಾಗೂ ಸಿದ್ದಾರ್ಥ್ ಮದುವೆಯಾಗೋದು ಪಕ್ಕಾ ಎಂದು ಚಿತ್ರರಂಗ ಹೇಳುತ್ತಿದೆ.. ಮುಂದೇನು ಕಥೆ ನೋಡಿ...

ಸಿದ್ದು ಸಮಂತಾ ಕುಚ್ ಕುಚ್

ಕಾಳಹಸ್ತಿ ದೇಗುಲದಲ್ಲಿ ಪೂಜೆ ನಿರತ ಸಿದ್ದಾರ್ಥ್ ಹಾಗೂ ಸಮಂತಾ

ಕಾಳಹಸ್ತಿ ದೇಗುಲದಲ್ಲಿ

ಮಾ.16 ರಂದು ಬೆಳಗ್ಗೆ 10 ಗಂಟೆಗೆ ರಾಹು ಕೇತು ಪೂಜೆ ಸಲ್ಲಿಸಿದ ಸಿದ್ದಾರ್ಥ್ ಹಾಗೂ ಸಮಂತಾ ಕುಟುಂಬ ವರ್ಗ ನಂತರ ಗೆಸ್ಟ್ ಹೌಸ್ ಗೆ ತೆರಳಿ ಕ್ವಿಕ್ ಆಗಿ ರೀಫ್ರೆಶ್ ಆಗಿ ಅಲ್ಲಿಂದ ತಿರುಪತಿಗೆ ಪ್ರಯಾಣ ಬೆಳೆಸಿದರು.

ನಮ್ಮ ನಡುವೆ ಏನಿಲ್ಲ

ಮಣಿರತ್ನಂ ಅವರ ಜೊತೆಗೆ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಇಳಿದ ಸಿದ್ದಾರ್ಥ್, ನಟ, ಗಾಯಕ, ಚಿತ್ರ ಬರಹಗಾರ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾನೆ.

ಆದರೆ, ವೈಯಕ್ತಿಕ ಬದುಕಿನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ ಮೇಲೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜೊತೆ ಲಿನ್ ಇನ್ ಸಂಬಂಧ ಹಾಳುಗೆಡವಿಕೊಂಡರು. ಎಲ್ಲಾ ಪ್ರಮುಖ ನಟಿಯರ ಜೊತೆ ಸಿದ್ದಾರ್ಥ್ ಹೆಸರು ಬೇಡದ ವಿಷಯಗಳಿಗೆ ತಗುಲಿಹಾಕಿಕೊಂಡಿದ್ದು ಅವರ ಕೆರಿಯರ್ ಗೆ ಕಪ್ಪುಚುಕ್ಕೆಯಾಗಿದೆ.

ಮದುವೆ ಪದ ಕೇಳಿ ಉರಿ

ಮದುವೆ ಪದ ಕೇಳಿದೊಡನೆ ಉರಿದು ಬಿದ್ದ ಸಿದ್ದಾರ್ಥ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, ನಾವು ಕುಟುಂಬ ವರ್ಗದೊಡನೆ ಬಂದ ತಕ್ಷಣ ಮದುವೆ ಬಗ್ಗೆ ಚಿಂತಿಸುತ್ತಿದ್ದೆವೆ ಎಂದು ಏಕೆ ಅಂದುಕೊಳ್ಳುತ್ತೀರಾ? ನಾನು ಮದ್ವೆಯಾಗಲು ನಿಶ್ಚಯಿಸಿದಾಗ ನಿಮಗೆ ಖಂಡಿತಾ ತಿಳಿಸುತ್ತೇನೆ. ರೂಮರ್ಸ್ ಹಬ್ಬಿಸಬೇಡಿ ಎಂದಿದ್ದಾರೆ.

ಸಿದ್ದು ಮದುವೆ ಗುದ್ದು

ಸೋಹಾ ಅಲಿ ಖಾನ್, ಶ್ರುತಿ ಹಾಸನ್, ಪ್ರಿಯಾ ಆನಂದ್ ಪಟ್ಟಿಗೆ ಸಮಂತಾ ಸೇರ್ಪಡೆಯಾಗಿದ್ದು, ಸಿದ್ದಾರ್ಥ್ ಎಂಬ ಪ್ಲೇಬಾಯ್ ಗೆ ಸಮಂತಾ ಕಿರು ಬೆರಳ ಹಿಡಿದು ಸಪ್ತಪದಿ ತುಳಿಯುವ ಮನಸು ಮೂಡುವುದೇ ಕಾದು ನೋಡಬೇಕಿದೆ.

ಅಂದ ಹಾಗೆ ಸಮಂತಾಗೆ ಇನ್ನೂ ವಯಸ್ಸು ಇನ್ನೂ 25ರ ಪ್ರಾಯ. ಆದರೆ ಸಿದ್ಧಾರ್ಥ್ ಆಕೆಗಿಂತಲೂ 10 ವರ್ಷ ದೊಡ್ಡವನು. ಮದುವೆ ವಿಷಯದಲ್ಲಿ ಅನುಭವಿ

English summary
Actor Siddharth is very furious over the rumours about his impending wedding with actress Samantha. The speculations were being made after the Jabardasth stars spotted offering pooja with their parents at the Kalahasti temple
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada