For Quick Alerts
  ALLOW NOTIFICATIONS  
  For Daily Alerts

  ಮತ್ತೆ 'ಅವ್ವ'ದಂತಹ ಹಾಟ್ ಸೀನಿನಲ್ಲಿ ನಟಿಸುವುದಿಲ್ಲ

  |

  ನಿವೇದಿತಾ ಅಲಿಯಾಸ್ ಸ್ಮಿತಾ ಮತ್ತೆ ಗೊಂದಲಕ್ಕೆ ಬಿದ್ದಿದ್ದಾರೆ. ಪರಿ ಚಿತ್ರದಲ್ಲಿ ಹಾಟ್ ದೃಶ್ಯಗಳು ಇರಲಿಕ್ಕಿಲ್ಲ ಎಂದೇ ಭಾವಿಸಿ ಸಹಿ ಹಾಕಿದ್ದರಂತೆ ಸ್ಮಿತಾ. ಅವರು ಹಾಗೆಂದುಕೊಳ್ಳಲಿಕ್ಕೆ ಕಾರಣ, ಪರಿ ಕಾದಂಬರಿ ಆಧಾರಿತ ಚಿತ್ರವೆಂಬುದಂತೆ. ಈ ಚಿತ್ರದ ಕಥೆ ಹಾಗೂ ಚಿತ್ರಕಥೆ ನಿರ್ದೇಶಕರಿಗೆ ಬೇಕಾದಂತೆ ಸುತ್ತಿದ್ದಲ್ಲ. ಅದರಲ್ಲಿ ನನಗೆ ಬೋಲ್ಡ್ ಸೀನ್ ಇರುವುದಿಲ್ಲ" ಎಂಬುದು ಸ್ಮಿತಾ ಅನಿಸಿಕೆಯಾಗಿತ್ತಂತೆ. ಆದರೆ ಆಗಿದ್ದೇ ಬೇರೆ, ಮತ್ತೆ ಇದರಲ್ಲಿ ಸ್ಮಿತಾ ಹಾಟ್ ಹಾಟ್.

  ಈಗ, ಅದ್ಯಾಕೋ ತುಂಬಾ ತಡವಾಗಿ ನಿವೀದಿತಾಗೆ ಅರ್ಥವಾಗಿದೆ. "ನಾನು ಬದಲಾದರೂ ನಿರ್ಮಾಪಕ ಹಾಗೂ ನಿರ್ದೇಶಕರ ದೃಷ್ಟಿಕೋನ ನನ್ನ ಮೇಲೆ ಹಾಗೆಯೇ ಇದೆ. ಕಾಮುಕಿಯಂತಹ ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಅದೇ ಕಿಸ್, ಅದೇ ಅಪ್ಪುಗೆ. ನಾನು ನಟಿಸುವ ಚಿತ್ರಗಳಲ್ಲಿ ಬೇರೆ ಇರುವುದೇ ಇಲ್ಲ. ಪರಿಯಲ್ಲೂ ಹಾಗೇ ಆಗಿದ್ದು ತುಂಬಾ ಬೇಸರ" ಎಂದು ಅವಲತ್ತುಕೊಂಡಿದ್ದಾರೆ ಸ್ಮಿತಾ.

  ಪರಿ ಬಿಡುಗಡೆಯಾದ ನಂತರ ನಿರ್ದೇಶಕ ಸುಧೀರ್ ಅತ್ತಾವರ್ ಹಾಗೂ ಸಿನಿಮಾ ಬಗ್ಗೆ ವಿಮರ್ಶಕರು ಕೆಟ್ಟದಾಗಿಯೇ ಬರೆದಿದ್ದರು. ಅದನ್ನು ಓದಿ ಸುಧೀರ್ ಅತ್ತಾವರ್ ಅತ್ತರೋ ಏನೋ ಗೊತ್ತಿಲ್ಲ. ಆದರೆ ವಿಮರ್ಶಕರ ಮೇಲೆ ಮುನಿಸಿಕೊಂಡು 'ವಿಮರ್ಶೆಗಳನ್ನೂ ಮೀರಿ ನಿಂತ ಚಿತ್ರ' ಎಂದು ಬಿಂಬಿಸಿ ನಗೆಪಾಟಲಿಗೀಡಾಗಿದ್ದರು. ಆದರೀಗ ನಿರ್ಮಾಪಕರು, ಸ್ಮಿತಾ ಹಾಗೂ ಇಡೀ ಚಿತ್ರತಂಡವೇ ಅತ್ತಾವರ್ ವಿರುದ್ಧ ಕೋಪಾಗ್ನಿ ಅಸ್ತ್ರ ಪ್ರಯೋಗಿಸಿದೆ.

  ಮೊನ್ನೆ ಪರಿ ಚಿತ್ರ ಸೋತಿದ್ದಕ್ಕೆ ಕರೆದ ಪತ್ರಿಕಾಗೋಷ್ಠಿಗೆ ನಿರ್ದೇಶಕ ಸುಧೀರ್ ಹಾಜರಿರಲಿಲ್ಲ. ಇಡೀ ಚಿತ್ರತಂಡವೇ ಉರಿದುಬಿದ್ದು ಏನೆಲ್ಲ ಅವಾಂತರವಾಗುವುದೋ ಎಂದೇ ಬಂದಿರಲಿಲ್ಲವೋ ಏನೋ! ಆದರೆ ಸ್ಮಿತಾ ಮಾತ್ರ ಅವರಿಲ್ಲದ ವೇದಿಕೆಯಲ್ಲಿ ತಮಗಾದ ಅನ್ಯಾವನ್ನು ಹೇಳಿಕೊಂಡಿದ್ದಾರೆ. '"ಅವ್ವ ಚಿತ್ರದಲ್ಲಿದ್ದಂತಹ ದೃಶ್ಯದಲ್ಲಿ ಮತ್ತೆ ನಾನು ನಟಿಸುವುದಿಲ್ಲ" ಎಂದು ಶಪಥ ಮಾಡಿದ್ದಾರೆ. ಪರಿಯಲ್ಲಿ ಅಂತಹ ಪಾತ್ರದಲ್ಲಿ ತೋರಿಸಿದ್ದಕ್ಕೆ ಪರಿಪರಿಯಾಗಿ ಹೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Smith aliyas Niveditha told that she wiil not accept and act Hot Scenes like 'Avva' Movie, in her future carrier. She also clarified that she changed her mind even, the sandalwood directors not changed. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X