»   » ನಟಿ ಸೋನಂ ಕಪೂರ್ 'ಕ್ಲಾಸ್ ಲೆಸ್' ಅಂದಿದ್ದು ಯಾರಿಗೆ?

ನಟಿ ಸೋನಂ ಕಪೂರ್ 'ಕ್ಲಾಸ್ ಲೆಸ್' ಅಂದಿದ್ದು ಯಾರಿಗೆ?

Posted By:
Subscribe to Filmibeat Kannada

ವಯಸ್ಸಲ್ಲಿ ಚಿಕ್ಕವಳೇ ಇರಬಹುದು. ಆದ್ರೆ, ಅನಿಸಿದ್ದನ್ನ ನೇರವಾಗಿ ಮುಖಕ್ಕೆ ಹೊಡೆಯುವ ಹಾಗೆ ಹೇಳುವ ಜಾತಿಗೆ ಸೇರಿದಾಕೆ ನಟಿ ಸೋನಂ ಕಪೂರ್. ಎಷ್ಟೇ ಆಗಲಿ, ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ಸೋನಂ, ತನ್ನ ಕಮೆಂಟ್ ಗಳಿಂದಲೇ ಹೆಸರುವಾಸಿ ಅಲ್ಲವೇ.

ಅದ್ರಲ್ಲೂ ಹಾಟ್ ಕೇಕ್ ದೀಪಿಕಾ ಪಡುಕೋಣೆ ಬಗ್ಗೆ ಆಗಾಗ ಒಗ್ಗರಣೆ ಹಾಕಿ, ಮಾತನಾಡದೆ ಹೋದರೆ, ಸೋನಂಗೆ ಸಮಾಧಾನವೇ ಆಗಲ್ಲ. ಅದಕ್ಕೆ ದಿಪ್ಪಿ ಸ್ಟೈಲ್ ಬಗ್ಗೆ ಸೋನಂ ಆಡಿದ ಮಾತುಗಳೇ ಸಾಕ್ಷಿ.

ಈಗ ಅದೆಲ್ಲಾ ಫ್ಲ್ಯಾಶ್ ಬ್ಯಾಕ್ ಬಿಡಿ. ಇಷ್ಟು ದಿನ ಹಾಗೂ ಹೀಗೂ ನಟಿ ಸೋನಂ ಕಪೂರ್ ತಾನಾಯ್ತು, ತನ್ನ ಕೆಲಸವಾಯ್ತು ಅಂತ ಸುಮ್ಮನಿದ್ರು. ಹೀಗಿರಬೇಕಾದ್ರೆ, ಹೊಸ ವರ್ಷದ ಪ್ರಯುಕ್ತ ದಿನಪತ್ರಿಕೆಯೊಂದಕ್ಕೆ ಸೋನಂ ಸಂದರ್ಶನ ನೀಡಿದ್ರು. ಇಲ್ಲೇ ನೋಡಿ, ಸೋನಂ ಮತ್ತೊಂದು ಬಾಂಬ್ ಸಿಡಿಸಿರುವುದು. [ನಟಿ ಸೋನಂ ಕಪೂರ್ 'ಎಲ್ಲೇ' ಮೀರಿದ ಚಿತ್ರಗಳು]

deepika

ಸಂದರ್ಶನದಲ್ಲಿ ತಮ್ಮ ಹೊಸ ವರ್ಷದ ಪ್ಲಾನ್ ಬಗ್ಗೆ ಹೇಳುವ ಬದಲು, ಈಗಾಗಲೇ ಬೇರೆ ಸೆಲೆಬ್ರಿಟಿಗಳು ಜಗಜ್ಜಾಹೀರು ಮಾಡಿರುವ ಪ್ಲಾನ್ ಗಳನ್ನ ಸೋನಂ ಅಲ್ಲಗೆಳೆದಿದ್ದಾರೆ. ''ಸಮಾಜ ಸೇವೆ ಮಾಡುವ ಬಗ್ಗೆ ನಾನು ಪಬ್ಲಿಸಿಟಿ ತೆಗೆದುಕೊಳ್ಳುವುದಿಲ್ಲ. ಹಾಗೆ, ಸಮಾಜಕ್ಕೋಸ್ಕರ ಸೇವೆ ಮಾಡ್ತೀನಿ ಅಂತ ಪ್ರಚಾರ ತೆಗೆದುಕೊಳ್ಳುವವರು ಕ್ಲಾಸ್ ಲೆಸ್ ಮಂದಿ'' ಅಂದುಬಿಟ್ಟಿದ್ದಾರೆ.

ಸೋನಂ ಆಡಿರುವ ಈ ಮಾತುಗಳು, ದಿಪ್ಪಿಯನ್ನ ಉದ್ದೇಶಿಸಿದೆ ಅಂತ ಗಾಸಿಪ್ ಪಂಡಿತರು ಆಗಲೇ ತಾಳೆ ಹಾಕಿಬಿಟ್ಟಿದ್ದಾರೆ. ಯಾಕಂದ್ರೆ, ಹೊಸ ವರ್ಷದ ಪ್ರಯುಕ್ತ ದೀಪಿಕಾ, ''ಮೆಂಟಲ್ ಹೆಲ್ತ್''ಗೆ ಸಪೂರ್ಟ್ ಮಾಡ್ತೀನಿ ಅಂತ್ಹೇಳಿ ಟ್ವೀಟ್ ಮಾಡಿದ್ದರು. [ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಹಿಂತಿರುಗಿ ನೋಡಿದಾಗ!]

ಇದನ್ನ ನೋಡಿ, ಸೋನಂಗೆ ಪಿತ್ತ ನೆತ್ತಿಗೇರಿದಂತಾಗಿ ಸಿಕ್ಕಿದ್ದೇ ಚಾನ್ಸು ಅಂತ ದಿಪ್ಪಿ ಮೇಲೆ ಚಾಟಿ ಬೀಸಿದ್ದಾರೆ ಅಂತ ಬಾಲಿವುಡ್ ನಲ್ಲಿ ಸುದ್ದಿಯಾಗ್ತಿದೆ. ಆದ್ರೆ, ಎಲ್ಲಾ ಬಿಟ್ಟು ಸೋನಂ ಗೆ ದಿಪ್ಪಿ ಮೇಲೆ ಯಾಕೆ ಇಷ್ಟು ಸಿಟ್ಟು ಅಂತ ಯಾರೂ ಮಾತನಾಡುತ್ತಿಲ್ಲ..!

English summary
Sonam Kapoor who sometime back irked Deepika Padukone with respect to her dressing style, has yet again supposedly targeted Deepika. 'Happy New Year' Actress had announced to support Mental health awareness for New Year. Sonam apparently took a dig by saying ''Publicising social service is Classless''..!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada