Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಾವ ನಟರು ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ?

ಕರ್ನಾಟಕ ವಿಧಾನಸಭೆಯ ಚುನಾವಣೆ ಇದೇ ವರ್ಷ ನಡೆಯಲಿದೆ. ದೇಶದ ಕಣ್ಣು ಕರ್ನಾಟಕ ಚುನಾವಣೆ ಮೇಲೆ ಬಿದ್ದಿದೆ. ಅದೇ ರೀತಿ ರಾಜಕಾರಣಿಗಳ ಕಣ್ಣು ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲೆ ಬಿದ್ದಿದೆ. ಚುನಾವಣೆಗೆ ಇನ್ನು ಕೆಲತಿಂಗಳು ಮಾತ್ರ ಬಾಕಿ ಇದೆ. ಈಗಲೇ ಸ್ಟಾರ್ ನಟ-ನಟಿಯರನ್ನ ತಮ್ಮ ಪಕ್ಷದ ಪರ ಸೆಳೆಯುವ ಹರಸಾಹಸ ನಡೆಯುತ್ತಿದೆ.
ಕನ್ನಡದ ಸೂಪರ್ ಸ್ಟಾರ್ ಗಳಾದ ದರ್ಶನ್, ಸುದೀಪ್ ಅವರನ್ನ ಅಧಿಕೃತವಾಗಿ ರಾಜಕೀಯಕ್ಕೆ ಕರೆ ತರುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆಯಾದರೂ, ಇಬ್ಬರು ರಾಜಕೀಯಕ್ಕೆ ಬರಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿಗಾಗಿ ಚುನಾವಣ ರಂಗಕ್ಕೆ ಧುಮುಕುವುದು ಬಹುತೇಕ ಖಚಿತ.
ಇವರುಗಳು ಚುನಾವಣೆಗಂತೂ ಸ್ಪರ್ಧಿಸಲ್ಲ. ಆದ್ರೆ, ಪ್ರಚಾರ ಮಾಡೋದು ಮಾತ್ರ ಪಕ್ಕಾ ಎನ್ನಲಾಗಿದೆ. ಹಾಗಿದ್ರೆ, ಯಾವ ಯಾವ ನಟ-ನಟಿಯರು ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ ಓದಿ.....

ಕಾಂಗ್ರೆಸ್ ಪಕ್ಷಕ್ಕೆ ದರ್ಶನ್ ಜೈ
ನಟ ದರ್ಶನ್ ಅವರ ತಾಯಿ ಮೀನಾ ತೂಗದೀಪ್ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಲ ಅವರು ಮೈಸೂರಿನ ಯಾವುದಾದರೂ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಹಿರಿಯ ನಾಯಕ ಅಂಬರೀಷ್ ಮತ್ತು ದರ್ಶನ್ ನಡುವೆ ಅತ್ಯುತ್ತಮ ಬಾಂಧವ್ಯ ಇದೆ. ಕಾಂಗ್ರೆಸ್ ಶಾಸಕ ಮುನಿರತ್ನ ದರ್ಶನ್ ರ 50ನೇ ಸಿನಿಮಾ ಕುರುಕ್ಷೇತ್ರವನ್ನು ನಿರ್ಮಿಸುತ್ತಿದ್ದಾರೆ. ಹೀಗಾಗಿ, ಇವರು ಪರವಾಗಿ ದರ್ಶನ್ ಪ್ರಚಾರ ಮಾಡುವ ನಿರೀಕ್ಷೆ ಇದೆ.

ಯಾರ ಕಡೆ ಸುದೀಪ್ ಒಲವು
ಕಿಚ್ಚ ಸುದೀಪ್ ಅವರು ಯಾವ ಪಕ್ಷಕ್ಕೆ ಬೆಂಬಲ ಕೊಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಸುದೀಪ್ ಅವರನ್ನ ಭೇಟಿ ಮಾಡಿದ್ದ ಹೆಚ್.ಡಿ ಕುಮಾರಸ್ವಾಮಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದ ಸುದೀಪ್ ವಿಷ್ಣು ಸ್ಮಾರಕದ ಬಗ್ಗೆ ಚರ್ಚೆ ನಡೆಸಿದ್ದರು. ಮತ್ತೊಂದೆಡೆ ಬಿಜೆಪಿ ನಾಯಕ ಆರ್.ಅಶೋಕ್ ಅವರು ಸುದೀಪ್ ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂಬ ಮಾತು ಹೇಳಿದ್ದರು. ಸುದೀಪ್ ಯಾರ ಪರವಾಗಿ ಪ್ರಚಾರ ನಡೆಸ್ತಾರೆ ಅಥವಾ ಪ್ರಚಾರಕ್ಕೆ ಬರಲ್ವಾ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಕೈ, ಕಮಲದ ನಂತರ ಜೆಡಿಎಸ್ ಪಕ್ಷಕ್ಕೆ ಸುದೀಪ್.! ಹೆಚ್.ಡಿ. ದೇವೇಗೌಡ ಹೇಳಿದ್ದೇನು?

ರಮ್ಯಾ ಜೊತೆ ಭವ್ಯ, ಭಾವನಾ
ಸ್ಯಾಂಡಲ್ ವುಡ್ ಮೋಹಕ ತಾರೆ ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೈನೇರ್. ಇವರ ಜೊತೆ ಬಾಲಭವನದ ಮಾಜಿ ಅಧ್ಯಕ್ಷೆ ಹಾಗೂ ನಟಿ ಭಾವನಾ, ಇನ್ನೊಬ್ಬ ನಟಿ ಭವ್ಯಾ ಅವರು ಕೂಡ ಸಾಥ್ ನೀಡಲಿದ್ದಾರೆ.

ಶಿಲ್ಪಾ ಜೊತೆ ಗಣೇಶ್
ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗಣೇಶ್ ಬಿಜೆಪಿ ಪರವಾಗಿ ಚುನಾವಣೆಗೆ ಸ್ಫರ್ಧೆ ಮಾಡುವ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಶಿಲ್ಪಾ ಅವರಿಗೆ ಟಿಕೆಟ್ ಸಿಕ್ಕಿದ್ದೇ ಆದ್ರೆ, ಗಣೇಶ್ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡುವುದು ಖಚಿತ.
ಶಿಲ್ಪಗಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಗೋಲ್ಡನ್ ಸ್ಟಾರ್

ಕಮಲಕ್ಕೆ ಅಮೂಲ್ಯ ಎಂಟ್ರಿ
ನಟಿ ಅಮೂಲ್ಯ ಅವರ ಪತಿ ಜಗದೀಶ್ ಗೌಡ ಹಾಗೂ ಕುಟುಂಬ ಬಿಜೆಪಿ ಪಕ್ಷದ ಕಾರ್ಯಕರ್ತರು. ಮತ್ತೊಂದೆಡೆ ಶಿಲ್ಪಾ ಗಣೇಶ್ ಅವರು ಸ್ಪರ್ಧಿಸಿದ್ರೆ, ಅಮೂಲ್ಯ ಕೂಡ ಬಿಜೆಪಿ ಪರ ಪ್ರಚಾರಕ್ಕೀಳಿಯುವುದು ಪಕ್ಕಾ.
ಒಲ್ಲೆ ಎನ್ನುತ್ತಾ ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟೇ ಬಿಟ್ಟರು ಅಮೂಲ್ಯ

ಸ್ಟಾರ್ ಕ್ಯಾಂಪನೇರ್
ಜಗ್ಗೇಶ್, ಶ್ರುತಿ, ತಾರಾ, ಮಾಳವಿಕಾ, ಸಾಯಿಕುಮಾರ್ ಹಾಗೂ ರವಿಶಂಕರ್ ಕಳೆದ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಈ ಬಾರಿಯೂ ಇವರೆಲ್ಲಾ ಕಮಲದ ಪರವಾಗಿ ಪ್ರಚಾರ ನಡೆಸಬಹುದು ಎಂಬ ವಿಶ್ವಾಸವಿದೆ.

ಗೀತಾ ಶಿವರಾಜ್ ಕುಮಾರ್ ಕಣಕ್ಕೀಳಿದ್ರೆ?
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿದಿದ್ದರು. ಆಗ ಕನ್ನಡದ ಅನೇಕ ನಟ- ನಟಿಯರು ಗೀತಾ ಅವರ ಪರ ಪ್ರಚಾರ ಮಾಡಿದ್ದರು. ಈ ಬಾರಿ ಸ್ಪರ್ಧೆ ಮಾಡಿದ್ರೆ, ಖಂಡಿತಾ ಮತ್ತಷ್ಟು ಸ್ಟಾರ್ ನಟರು ಗೀತಾ ಶಿವರಾಜ್ ಕುಮಾರ್ ಪರ ರಸ್ತೆಗಳಿಯಬಹುದು.

ತಂದೆಗೆ ನಿಖಿಲ್ ಕುಮಾರ್ ಪವರ್
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಬಾರಿ ಮಗ ನಿಖಿಲ್ ಕುಮಾರ್ ಸಂಪೂರ್ಣವಾಗಿ ಸಾಥ್ ನೀಡಲಿದ್ದಾರೆ. ಗೌಡ್ರ ಪಕ್ಷಕ್ಕೆ ನಿಖಿಲ್ ಸ್ಟಾರ್ ಕ್ಯಾಂಪೈನೇರ್ ಆಗಲಿದ್ದಾರೆ.

ಉಪ್ಪಿಯ ನಡೆ ಕುತೂಹಲವಾಗಿದೆ
ಈ ಬಾರಿ ಸ್ವತಂತ್ರ ಪಕ್ಷ ಕಟ್ಟಿರುವ ಉಪೇಂದ್ರ ತಮ್ಮೊಂದಿಗೆ ಕೆಲವು ಕಲಾವಿದರನ್ನು ಪ್ರಚಾರಕ್ಕಾಗಿ ಕರೆತರಬಹುದು ಎಂಬ ಲೆಕ್ಕಾಚಾರವಿದೆ. ಉಪೇಂದ್ರ ಅವರ ನಿಲುವು ಏನು ಎಂಬುದು ಗೌಪ್ಯವಾಗಿದೆ.