»   » 'ಕೋಟಿಗೊಬ್ಬ 2' ಚಿತ್ರದಿಂದ ಅಭಿಮಾನಿಗಳಿಗೆ ಬಿಸಿಬಿಸಿ ಸುದ್ದಿ

'ಕೋಟಿಗೊಬ್ಬ 2' ಚಿತ್ರದಿಂದ ಅಭಿಮಾನಿಗಳಿಗೆ ಬಿಸಿಬಿಸಿ ಸುದ್ದಿ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಒಂದಾಗಿ ಕಾಣಿಸಿಕೊಂಡಿದ್ದ 'ಕೋಟಿಗೊಬ್ಬ 2', ಕಳೆದ ಶುಕ್ರವಾರ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದಂದು ಗ್ರ್ಯಾಂಡ್ ಆಗಿ ತೆರೆ ಕಂಡಿತ್ತು. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡಿದ್ದ ಈ ಸಿನಿಮಾ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದ 'ಕೋಟಿಗೊಬ್ಬ 2' ಮೊದಲ ದಿನವೇ ಒಳ್ಳೆ ಕಲೆಕ್ಷನ್ ಮಾಡಿತ್ತು. ಶೂಟಿಂಗ್ ಹಂತದಲ್ಲಿರುವಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರ, ಬಿಡುಗಡೆ ಆದ ಮೇಲೆ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿರಲಿಲ್ಲ.[ಒಂದೇ ದಿನದಲ್ಲಿ 'ಕೋಟಿಗೊಬ್ಬ 2' ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದೆಷ್ಟು.?]


ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಭಾರಿ ಅಭಿಮಾನಿ ಬಳಗವನ್ನು ಹೊಂದಿರುವ ನಟ ಕಿಚ್ಚ ಸುದೀಪ್ ಅವರ 'ಮುಡಿಂಜ ಇವನ ಪುಡಿ' ತಮಿಳುನಾಡಿನಲ್ಲಿ ಒಳ್ಳೆ ರೆಸ್ಪಾನ್ಸ್ ಗಳಿಸುತ್ತಿದೆ. ಎಲ್ಲರೂ ಸುದೀಪ್ ಅವರ ಅದ್ಭುತ ಅಭಿನಯವನ್ನು ಕೊಂಡಾಡುತ್ತಿದ್ದಾರೆ.


ಇದೆಲ್ಲಾ ಓಕೆ, ಇದೀಗ ಈ ಚಿತ್ರತಂಡದಿಂದ ಹೊಸ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ, ಅದೇನೆಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....


ಏನದು ಬ್ರೇಕಿಂಗ್ ನ್ಯೂಸ್.?

ಕೆ.ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ಚಿತ್ರದಿಂದ ಒಂದಲ್ಲಾ, ಎರಡು ಹಾಟ್ ನ್ಯೂಸ್ ಹೊರಬಿದ್ದಿದೆ. ಈ ಸುದ್ದಿಯನ್ನು ಸುದೀಪ್ ಅಭಿಮಾನಿಗಳು ಕೇಳಿದ್ರೆ, ಭಾರಿ ಖುಷಿಯಲ್ಲಿ ಕೇಕೆ ಹಾಕೋದು ಗ್ಯಾರೆಂಟಿ. ಅಷ್ಟಕ್ಕೂ ಆ ಹಾಟ್ ನ್ಯೂಸ್ ಏನು ಎಂಬುದನ್ನು ನೋಡಿ ಮುಂದಿನ ಸ್ಲೈಡಿನಲ್ಲಿ....[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


ರಜನಿ ನೋಡ್ತಾರಂತೆ

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯದ 'ಮುಡಿಂಜ ಇವನ ಪುಡಿ' ಚಿತ್ರವನ್ನು ನೋಡಲು ಆಸಕ್ತಿ ತೋರಿದ್ದಾರೆ ಎಂದು ರಜನಿ ಆಪ್ತ ಮೂಲಗಳು ಮಾಹಿತಿ ಒದಗಿಸಿವೆ.[ವಿಮರ್ಶಕರ ಮನ ಲೂಟಿ ಮಾಡಿದನಾ 'ಈ' ಕೋಟಿಗೊಬ್ಬ.?]


ಯಾವಾಗ/ಎಲ್ಲಿ.?

ರಜನಿಕಾಂತ್ ಅವರ ಬುಧವಾರ (ಆಗಸ್ಟ್ 17) ದಂದು ಚೆನ್ನೈನಲ್ಲಿ ಸುದೀಪ್ ಅವರ ಸಿನಿಮಾ ನೋಡಲಿದ್ದಾರೆ. ಸೂಪರ್ ಸ್ಟಾರ್ ರಜನಿ ಅವರಿಗಂತಲೇ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ರಜಿನಿ ಆಪ್ತ ಕೆ.ಎಸ್ ರವಿಕುಮಾರ್

ಈ ಚಿತ್ರದ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ತುಂಬಾ ಆಪ್ತರಾಗಿರೋದ್ರಿಂತ ಖಂಡಿತವಾಗ್ಲೂ, ರಜನಿಕಾಂತ್ ಅವರು ಈ ಸಿನಿಮಾ ನೋಡಿಯೇ ತೀರುತ್ತಾರೆ, ಅನ್ನೋದು ಅಭಿಮಾನಿಗಳ ಅಭಿಪ್ರಾಯ.


ಮತ್ತೊಂದು ಬ್ರೇಕಿಂಗ್

ಅಂದಹಾಗೆ ಈ ಚಿತ್ರದ ಇನ್ನೊಂದು ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ, ಇಂದು (ಆಗಸ್ಟ್ 16) ಕೋಟಿಗೊಬ್ಬ 2' ಚಿತ್ರದ ವಿತರಕರು, ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ, ಅನ್ನೋ ವಿಚಾರವನ್ನು ಬಹಿರಂಗಪಡಿಸಲಿದ್ದಾರೆ.


ವಿತರಕ ಜಾಕ್ ಮಂಜು

ಬೆಂಗಳೂರು, ಕೋಲಾರ ಮತ್ತು ತುಮಕೂರು ಕಡೆ 'ಕೋಟಿಗೊಬ್ಬ 2' ಚಿತ್ರವನ್ನು ವಿತರಣೆ ಮಾಡಿದ್ದ ನಿರ್ಮಾಪಕ ಜಾಕ್ ಮಂಜು ಅವರು ಇಂದು ಚಿತ್ರದ ಒಟ್ಟು ಕಲೆಕ್ಷನ್ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಂದಹಾಗೆ ಸಿನಿಮಾ ವಿತರಕರು ಕಲೆಕ್ಷನ್ ಬಗ್ಗೆ ಮಾಹಿತಿ ನೀಡುತ್ತಿರೋದು ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲು.


English summary
Tamil Actor Super Star Rajinikanth will be watching Kannada Actor Sudeep starrer, KS Ravikumar directorial Tamil Version 'Mudinja Ivana Pudi' On Wednesday (August 17). Kannada Actor Sudeep, Actress Nithya menen in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada