»   » ಲೋಕಲ್ 'ಟಗರು'ಗೆ ಬಾಲಿವುಡ್ ನಿಂದ ಬಂದಿದೆ ಬೇಡಿಕೆ

ಲೋಕಲ್ 'ಟಗರು'ಗೆ ಬಾಲಿವುಡ್ ನಿಂದ ಬಂದಿದೆ ಬೇಡಿಕೆ

Posted By:
Subscribe to Filmibeat Kannada

'ಟಗರು' ಸಿನಿಮಾ ನೋಡಲು ಶಿವರಾಜ್ ಕುಮಾರ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ಚಿತ್ರ ಈಗ ಸುದ್ದಿ ಮೇಲೆ ಸುದ್ದಿಯಾಗುತ್ತಿದೆ. 'ಟಗರು 2' ಬರುತ್ತೆ ಎಂಬ ಸುದ್ದಿಯ ಬಳಿಕ ಈಗ ಮತ್ತೆ ಶಿವಣ್ಣ ಅಂಡ್ ಟೀಂ ಬಗ್ಗೆ ಒಂದು ಹೊಸ ಹರಿದು ಬಂದಿದೆ.

'ಟಗರು' ಸಿನಿಮಾದ ರಿಮೇಕ್ ಗಾಗಿ ಈಗ ಡಿಮ್ಯಾಂಡ್ ಹೆಚ್ಚಾಗಿದೆಯಂತೆ. ಬಾಲಿವುಡ್ ಮತ್ತು ಟಾಲಿವುಡ್ ನಿಂದ ಚಿತ್ರದ ರಿಮೇಕ್ ಗಾಗಿ ಕೆಲವರು ಸಂಪರ್ಕ ಮಾಡಿದ್ದಾರಂತೆ. ಇನ್ನು ಬಿಡುಗಡೆಯಾಗದೆ ಇದ್ದರೂ 'ಟಗರು' ಸಿನಿಮಾದ ರಿಮೇಕ್ ಗಾಗಿ ಬೇಡಿಕೆ ಹೆಚ್ಚಾಗಿದೆ. ಇನ್ನು 'ಟಗರು' ಸಿನಿಮಾ ಇದೇ ಫೆಬ್ರವರಿಗೆ ಬಿಡುಗಡೆಯಾಗಲಿದೆ. ಶಿವರಾಜ್ ಕುಮಾರ್, ಭಾವನ, ಮಾನ್ವಿತ ಹರೀಶ್, ಧನಂಜಯ್, ವಸಿಷ್ಟ ಚಿತ್ರದಲ್ಲಿ ನಟಿಸಿದ್ದಾರೆ. ಸೂರಿ ನಿರ್ದೇಶನ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಇದಾಗಿದೆ.

'ಟಗರು' ವಿರುದ್ಧ ಪೈಪೋಟಿಗೆ ನಿಲ್ಲಲ್ಲಿದ್ದಾರೆ ದಂಡುಪಾಳ್ಯ ಹಂತಕರು

Tagaru movie remake rights in demand

ಇದರ ಜೊತೆಗೆ ಇಂದು 'ಟಗರು' ಸಿನಿಮಾದ ಹೊಸ ಹಾಡು ರಿಲೀಸ್ ಆಗದೆ. 'ಜೀವ ಸಖಿ...' ಎಂಬ ಸಾಹಿತ್ಯದೊಂದಿಗೆ ಈ ಹಾಡು ಶುರುವಾಗುತ್ತದೆ. ಚರಣ್ ರಾಜ್ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ. ಈ ಹಾಡಿನ ಸೌಂಡಿಂಗ್ ತುಂಬ ವಿಭಿನ್ನ ಮತ್ತು ಚೆನ್ನಾಗಿದೆ.

English summary
Kannada actor Shiva Rajkumar's 'Tagaru' movie remake rights in demand. The movie will be releasing on February 9th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada