For Quick Alerts
  ALLOW NOTIFICATIONS  
  For Daily Alerts

  ಈ ನಟಿ ಜೊತೆ ಡೇಟ್ ಮಾಡ್ತಿದ್ದಾರಂತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ.!

  By Bharath Kumar
  |

  ಕ್ರಿಕೆಟ್ ಆಟಗಾರರಿಗೂ ಸಿನಿಮಾ ನಟಿಯರಿಗೂ ಅವಿನಾಭಾವ ಸಂಬಂಧ. ಈ ಲವ್, ಮದುವೆ, ಡೇಟಿಂಗ್ ವಿಚಾರದಲ್ಲಿ ಈ ಎರಡು ಕ್ಷೇತ್ರಗಳು ಹೆಚ್ಚು ಸುದ್ದಿಯಲ್ಲಿರುತ್ತೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಮದುವೆ ಆಗಿದ್ದರು. ಇದೀಗ, ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಹೆಸರು ನಟಿಯೊಬ್ಬರ ಜೊತೆ ತಳುಕು ಹಾಕಿಕೊಂಡಿದೆ.

  56 ವರ್ಷದ ರವಿಶಾಸ್ತ್ರಿ ಸದ್ಯ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ, 36 ವರ್ಷದ ನಟಿಯ ಜೊತೆ ಸುಮಾರು ಎರಡು ವರ್ಷದಿಂದ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಈಗ ಬಹಿರಂಗವಾಗಿದೆ.

  ಕನ್ನಡ ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆಗೆ ಡೇಟ್ ಮಾಡುತ್ತಿರುವ ನಟಿ ಯಾರು.? ಕನ್ನಡ ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆಗೆ ಡೇಟ್ ಮಾಡುತ್ತಿರುವ ನಟಿ ಯಾರು.?

  ಅಂದ್ಹಾಗೆ, ಬಾಲಿವುಡ್ ನಟಿಯ ಜೊತೆ ರವಿಶಾಸ್ತ್ರಿ ಡೇಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ನಟಿಯೊಬ್ಬರ ಜೊತೆಯಲ್ಲಿ ಈ ಆಲ್ ರೌಂಡರ್ ಹೆಸರು ಅಂಟಿಕೊಂಡಿತ್ತು. ಅಷ್ಟಕ್ಕೂ, ಈ ಸಲ ರವಿಶಾಸ್ತ್ರಿ ಡೇಟ್ ಮಾಡ್ತಿರುವ ಆ ನಟಿ ಯಾರು.? ಮುಂದೆ ಓದಿ.....

  'ಏರ್ ಲಿಫ್ಟ್' ನಟಿ ಜೊತೆ ಶಾಸ್ತ್ರಿ ಡೇಟ್

  'ಏರ್ ಲಿಫ್ಟ್' ನಟಿ ಜೊತೆ ಶಾಸ್ತ್ರಿ ಡೇಟ್

  2016ರಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಏರ್ ಲಿಫ್ಟ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ನಿಮ್ರತ್ ಕೌರ್ ಜೊತೆ ರವಿಶಾಸ್ತ್ರಿ ಡೇಟ್ ಮಾಡ್ತಿದ್ದಾರೆ ಎನ್ನಲಾಗಿದೆ.

  ಅನುಷ್ಕಾ ಶರ್ಮಾ ಮಾಡೋ ಕೆಲಸದಿಂದ ಕೊಹ್ಲಿ ಎಷ್ಟೆಲ್ಲಾ ಕಷ್ಟ.! ಅನುಷ್ಕಾ ಶರ್ಮಾ ಮಾಡೋ ಕೆಲಸದಿಂದ ಕೊಹ್ಲಿ ಎಷ್ಟೆಲ್ಲಾ ಕಷ್ಟ.!

  ಪತ್ನಿಯಿಂದ ದೂರ

  ಪತ್ನಿಯಿಂದ ದೂರ

  ರವಿಶಾಸ್ತ್ರಿ ಅವರ ಪತ್ನಿ ರೀತು ಅವರಿಂದ ದೂರುವಿದ್ದಾರೆ. ದಶಕಗಳಿಂದ ಒಂಟಿಯಾಗಿರುವ ರವಿಶಾಸ್ತ್ರಿ ಕಳೆದ ಎರಡು ವರ್ಷಗಳಿಂದ ನಿಮ್ರತ್ ಕೌರ್ ಅವರ ಪರಿಚಯ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ, ಇಲ್ಲಿಯವರೆಗೂ ಈ ವಿಷ್ಯ ಗೌಪ್ಯವಾಗಿಯೇ ಉಳಿದಿತ್ತು.

  ಏನು.. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಈ ನಟಿಯನ್ನ ಡೇಟ್ ಮಾಡ್ತಿದ್ದಾರಾ.? ಏನು.. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಈ ನಟಿಯನ್ನ ಡೇಟ್ ಮಾಡ್ತಿದ್ದಾರಾ.?

  ಸೈಫ್ ಮಾಜಿ ಪತ್ನಿ ಜೊತೆಯೂ ಲಿಂಕ್

  ಸೈಫ್ ಮಾಜಿ ಪತ್ನಿ ಜೊತೆಯೂ ಲಿಂಕ್

  ಇನ್ನು 80ರ ದಶಕದಲ್ಲಿ ಖ್ಯಾತ ನಟಿ ಹಾಗೂ ಸೈಫ್ ಅಲಿ ಖಾನ್ ಅವರ ಮಾಜಿ ಪತ್ನಿ ಅಮೃತಾ ಸಿಂಗ್ ಅವರ ಜೊತೆ ರವಿಶಾಸ್ತ್ರಿ ಡೇಟಿಂಗ್ ಮಾಡಿದ್ದರಂತೆ. ಮದುವೆವರೆಗೂ ಬಂದಿದ್ದ ಇವರಿಬ್ಬರ ಸಂಬಂಧ ನಂತರ ಅರ್ಧದಲ್ಲೇ ಮುರಿದು ಬಿದ್ದಿತ್ತಂತೆ.

  ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಇಶಾ ಗುಪ್ತ ಮದುವೆ.! ಹೌದೇನು.? ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಇಶಾ ಗುಪ್ತ ಮದುವೆ.! ಹೌದೇನು.?

  ಅಲ್ಲಿ ಅವರು, ಇಲ್ಲಿ ಇವರು

  ಅಲ್ಲಿ ಅವರು, ಇಲ್ಲಿ ಇವರು

  'ಏರ್ ಲಿಫ್ಟ್' ಆದ್ಮೇಲೆ ನಿಮ್ರತ್ ಕೌರ್ ಯಾವ ಸಿನಿಮಾನೂ ಮಾಡಿಲ್ಲ. ವೆಬ್ ಸಿರೀಸ್ ಮಾಡ್ತಿದ್ದಾರೆ. ಮತ್ತೊಂದೆಡೆ ರವಿಶಾಸ್ತ್ರಿ ಟೀಂ ಇಂಡಿಯಾದ ಜೊತೆ ಇಂಗ್ಲೆಂಡ್ ನಲ್ಲಿ ಬೀಡು ಬಿಟ್ಟಿದ್ದಾರೆ.

  English summary
  Indian cricket team coach Ravi Shastri, 56, is bowled over by 36-year-old Airlift actress Nimrat Kaur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X