»   » ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು

ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಏನುಂಟು? ಏನಿಲ್ಲ? ಜೇಬಿನ ತುಂಬಾ ಕಂತೆಕಂತೆಗಳನ್ನ ತಂದು ಸುರಿಯುವವರಿಗೆ ಅದು ಸ್ವರ್ಗ. ಗೆದ್ದ ಎತ್ತಿನ ಬಾಲ ಹಿಡಿಯುವವರಿಗೆ ಇಲ್ಲಿ ಬೆಲೆ. ಅದೃಷ್ಟ ಇದ್ರೆ ಬಚಾವ್. ಇಲ್ಲದಿರುವವರ ಕಥೆ ಅಧೋಗತಿ. ಹಾಗೂ ಹೀಗೂ, ಹೊಸಬರಿಗೆ ಒಂದು ಚಾನ್ಸ್ ಕೊಡುವ ಸ್ಯಾಂಡಲ್ ವುಡ್ ನಲ್ಲಿ ಹಣೆಗೆ ಉಂಡೆನಾಮ ತಿಕ್ಕುವವರೂ ಇದ್ದಾರೆ. ಆ ತರಹದ ಮಿಕಗಳು ಕೆ.ಜಿ.ರೋಡ್ ನಲ್ಲಿ ಗಲ್ಲಿಗೊಬ್ಬರು ಸಿಗುತ್ತಾರೆ.

ಗಾಂಧಿನಗರದ ಇಂತ ವಾಸ್ತವ ಸ್ಥಿತಿ 'ತರ್ಲೆ ನನ್ಮಕ್ಕಳ' ಬಾಯಿಗೆ ಆಹಾರವಾಗಿದೆ. ಗಾಂಧಿನಗರದ ದೊಡ್ಡ ದೊಡ್ಡ ನಿರ್ದೇಶಕರು, ಹೀರೋಗಳನ್ನ ಬೀದೀಲಿ ಮೂರ್ಕಾಸಿಗೆ ಹರಾಜು ಹಾಕಿದ್ದಾರೆ 'ತರ್ಲೆ ನನ್ಮಕ್ಳು'.

ಈ 'ತರ್ಲೆ ನನ್ಮಕ್ಳು' ಬೇರಾರೂ ಅಲ್ಲ, ಒಬ್ರು ಕಾಮಿಡಿ ಪಾತ್ರಗಳನ್ನ ಮಾಡುತ್ತಾ ನಿರ್ದೇಶನದ ಪಟ್ಟಕ್ಕೇರಿ ಇದೀಗ ಹೀರೋ ಆಗಿರುವ ನಾಗಶೇಖರ್. ಮತ್ತೊಬ್ರು ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್. ಇಬ್ಬರು ಒಟ್ಟಾಗಿ ನಟಿಸಿರುವ 'ತರ್ಲೆ ನನ್ಮಕ್ಳು' ಚಿತ್ರದಲ್ಲಿ ಗಾಂಧಿನಗರದ 'ಅಸಲಿ' ವಿಷ್ಯ ಬೀದಿಗೆ ಬಂದಿದೆ.

ತಲೆಕೆಟ್ಟ ಅಡುಗೆ 'ಭಟ್ಟ'

ಎಬಡ ತಬಡ ಸಾಹಿತ್ಯದಿಂದ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ಸಾಹಿತಿಯಾಗಿರುವ ಭಟ್ರಿಗೆ ತರ್ಲೆ ನನ್ಮಕ್ಳು 'ಅಡುಗೆ ಭಟ್ಟ' ಅಂತ ಟಾಂಗ್ ನೀಡಿದ್ದಾರೆ. 'ಕ್ವಾಟ್ರು ಬಾಟ್ಲು ಹಂಗೆ ಲೈಫು' ಅಂತ ಬಾಟ್ಲು ಸಿದ್ಧಾಂತ ಹೇಳಿದ್ದ ಭಟ್ರಿಗೆ 'ತರ್ಲೆ ನನ್ಮಕ್ಳು' ಅದೇ ಬಾಟ್ಲು ಇಳಿಸಿ ಆಡಿರುವ ಮಾತುಗಳಿವು-''ನಿದ್ದೆ ಬಾರದೆ ಮಧ್ಯರಾತ್ರಿ ಎದ್ದು, ಹಾಳೆ ಖಾಲಿ ಇತ್ತು, ಪೆನ್ನು ತುಂಬಾ ಇಂಕ್ ತುಂಬಿತ್ತು, ಅದಕ್ಕೆ ಬೇಕಾಬಿಟ್ಟಿ ಗೀಚಿದ್ದಾರೆ''.

ಇದೆಲ್ಲಾ ಬೇಕಿತ್ತಾ ಭಟ್ರೆ ನಿಮ್ಗೆ?

ಏನೋ ಒಂಥಾರ ಲಿರಿಕ್ಸ್ ಬರೆದ್ರೆ ಜನ್ರಿಗೆ ಇಷ್ಟವಾಗುತ್ತೆ ಅಂತ ಹಾಡು ಬರೆಯುವ ಭಟ್ರಿಗೆ 'ಇದೆಲ್ಲಾ ಬೇಕಿತ್ತಾ' ಅನ್ಸಿದ್ಯೋ ಇಲ್ಲವೋ, ಆದ್ರೆ, ಕ್ವಾಟ್ರು ಬಾಟ್ಲು ಸಿದ್ಧಾಂತವನ್ನ ತಿದ್ದುವ ಸಲುವಾಗಿ ಅದೇ ಬಾಟ್ಲು ಹಿಡ್ಕೊಂಡು ತರ್ಲೆಗಳು ಬಾಯ್ಗೆ ಬಂದಂತೆ ಒದರಿದ್ಮೇಲೆ ಏನಾದ್ರು ಪರಿಣಾಮ ಆಗಿರ್ಬಹುದೇನೋ.

'ಮುಂಗಾರು ಮಳೆ'ಗೆ ಛತ್ರಿ!

ಸೂಪರ್ ಹಿಟ್ ಮುಂಗಾರು ಮಳೆ ಚಿತ್ರವನ್ನೂ ಇಟ್ಕೊಂಡು 'ತರ್ಲೆ ನನ್ಮಕ್ಳು' ತರ್ಲೆ ಮಾಡಿದ್ದಾರೆ. ಎದೆ ಮೇಲೆ ಕಾಲು ತುಳಿಸಿಕೊಳ್ಳೋದಕ್ಕೆ ಕಪ್ಪು ಮಣ್ಣಿನ ಲೋಕೇಷನ್ ಬೇಡ ಅಂತ ನಾಗಶೇಖರ್ ಛೂಬಾಣ ಬಿಟ್ಟಿದ್ದಾರೆ.

ಸುದೀಪ್ v/s ಗಣೇಶ್

ಕಾಮಿಡಿ ಟೈಮ್ ಗಣೇಶ್ ನಿಂದ ಏಕ್ದಂ ಗೋಲ್ಡನ್ ಸ್ಟಾರ್ ಪಟ್ಟಕ್ಕೇರಿರುವ ಗಣೇಶ್ ಗೂ 'ತರ್ಲೆ ನನ್ಮಕ್ಳು' ಬಿಸಿ ಮುಟ್ಸಿದ್ದಾರೆ. ಸುದೀಪ್ ರೇಂಜಿಗೆ ಗಣೇಶ್ ನ ಕಂಪೇರ್ ಮಾಡಿ ನಾಗಶೇಖರ್ ಆಡಿಕೊಂಡಿರುವ ರೀತಿಯನ್ನ ನೀವು ಟ್ರೇಲರ್ ನಲ್ಲೇ ನೋಡ್ಬೇಕು.

ನಾಗಶೇಖರ್ ಗೂ ಗಣೇಶ್ ಗೂ ಆಗ್ಬರಲ್ವಾ?

ಒಂದ್ಕಾಲದಲ್ಲಿ ರೂಮ್ ಮೇಟ್ಸ್ ಆಗಿದ್ದ ನಾಗಶೇಖರ್ ಮತ್ತು ಗಣೇಶ್ ಮಧ್ಯೆ ಅದೇನಾಯ್ತೋ ಏನೋ, ಅರಮನೆ ಸಿನಿಮಾ ಆದ್ಮೇಲೆ ಇಬ್ರಿಗೂ ಅಷ್ಟಕಷ್ಟೆ. ಇದನ್ನಿಟ್ಟುಕೊಂಡೇ ಸಿನಿಮಾದಲ್ಲಿ ಗಣೇಶ್ ಗೆ ಕಿಚಾಯಿಸಲಾಗಿದ್ಯಾ? ಗೊತ್ತಿಲ್ಲ.

ಗುರು'ಪ್ರಸಾದ್'ಗೆ ಟಾಂಗ್!

ಮಾತಿನ ಮೂಲಕವೇ ಎಲ್ಲರಿಗೂ ಪೆಟ್ಟು ಕೊಡುವ ಗುರುಪ್ರಸಾದ್ ಗೂ 'ತರ್ಲೆ ನನ್ಮಕ್ಳು' ಚಿತ್ರದಲ್ಲಿ ಸಿಕ್ಸರ್ರೇ ಬಾರಿಸಿದ್ದಾರೆ.

ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆ ಡೈರೆಕ್ಟರ್ ಇಲ್ವಾ?

ಸಾಲಾಗಿ ಒಂದ್ಕಡೆಯಿಂದ ಇಂದಿನ ಗೆಲ್ಲೋ ಮುಖಗಳಿಗೆ ನೀರಿಳಿಸಿರುವ 'ತರ್ಲೆ ನ್ಮಕ್ಕಳು' ಪಾಲಿಗೆ ಕನ್ನಡ ಇಂಡಸ್ಟ್ರಿಯಲ್ಲಿರುವ ಒಳ್ಳೆ ಡೈರೆಕ್ಟರ್ ಅಂದ್ರೆ ಅದು 'ಪ್ರೇಮ್'. ಎಷ್ಟೇ ಆಗ್ಲಿ 'ತರ್ಲೆ ನ್ಮಕ್ಕಳು' ಬಾಯಲ್ಲಿ ಇಷ್ಟೆಲ್ಲಾ ಹೇಳಿಸಿರುವುದು ಪ್ರೇಮ್ ಶಿಷ್ಯ ರಾಕೇಶ್ ಅಲ್ವಾ.

ಸುನಿ ತಲೆ ಮೇಲೆ ಹೊಡೆದಂತಿದೆ ಡೈಲಾಗ್ಸ್

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ರಚನ, ವಚನ, ಕವನ ಬರೆದಿದ್ದ ಸಿಂಪಲ್ ಸುನಿ ತಲೆ ಮೇಲೆ ಹೊಡೆದಂತಿದೆ 'ತರ್ಲೆ ನನ್ಮಕ್ಕಳ' ಬಾಯಿಂದ ಬರುವ ಡೈಲಾಗ್ ಗಳು.

ಇದೆಲ್ಲಾ ಗಿಮಿಕ್ಕಾ?

ಈ ಎಲ್ಲಾ ಪ್ರಶ್ನೆಗಳನಿಟ್ಟುಕೊಂಡೇ 'ಫಿಲ್ಮಿಬೀಟ್ ಕನ್ನಡ' 'ತರ್ಲೆ ನನ್ಮಕ್ಳು' ನಿರ್ದೇಶಕ ರಾಕೇಶ್ ಸಂಪರ್ಕಿಸಿದಾಗ, ''ಇದು ಗಿಮಿಕ್ಕಲ್ಲ.! ಚಿತ್ರದಲ್ಲಿ ಸಂದರ್ಭಕ್ಕಾನುಸಾರ ಈ ಡೈಲಾಗ್ ಗಳು ಬಳಕೆಯಾಗಿವೆ. ಸಾಮಾನ್ಯ ಜನರು ಸಿನಿಮಾವನ್ನ ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಳ್ಳುತ್ತಾರೆ ಅನ್ನುವುದನ್ನ ಇಟ್ಕೊಂಡು ಸಂಭಾಷನೆ ಬರೆಯಲಾಗಿದೆ. ನಾಗಶೇಖರ್ ಹೀರೋ ಆಗ್ಬೇಕು ಅಂತ ಇಂಡಸ್ಟ್ರಿಗೆ ಕಾಲಿಟ್ಟು ಜೂನಿಯರ್ ಆರ್ಟಿಸ್ಟ್ ಆಗೋ ಪಾತ್ರ ಮಾಡಿದ್ದಾರೆ. ಸಿಟ್ಟಿನಿಂದ ಎಲ್ಲರನ್ನೂ ಬೈಯುವ ಪಾತ್ರ ಅವರದ್ದು, ಹಾಗಾಗಿ ಇದೆಲ್ಲಾ ಇದೆ'' ಅಂದ್ರು.

ಯಾರಿಗೂ ಅವಹೇಳನ ಮಾಡಿಲ್ಲ.!

''ಯೋಗರಾಜ ಭಟ್ರು, ಗಣೇಶ್, ಗುರುಪ್ರಸಾದ್ ಸೇರಿದಂತೆ ಅನೇಕ ದಿಗ್ಗಜರ ಹೆಸರು ಚಿತ್ರದಲ್ಲಿ ಬಳಕೆಯಾಗಿದೆ. ಆದ್ರೆ ಯಾರಿಗೂ ಅವಹೇಳನಕಾರಿಯಾಗುವಂತೆ ಚಿತ್ರೀಕರಿಸಿಲ್ಲ. ನಾನೂ ನಿರ್ದೇಶಕ. ಇನ್ನೊಬ್ಬ ನಿರ್ದೇಶಕರನ್ನ ಕೀಳಾಗಿ ತೋರಿಸುವುದು ತಪ್ಪು. ಸನ್ನಿವೇಶಕ್ಕೆ ತಕ್ಕಂತೆ ಚಿತ್ರದಲ್ಲಿ ಎಲ್ಲವೂ ಬಳಕೆಯಾಗಿದೆ. ಇದು ಕಂಪ್ಲೀಟ್ ಕಾಮಿಡಿ ಸಿನಿಮಾ. ನೋಡಿದ್ರೆ ನಿಮ್ಗೆ ಗೊತ್ತಾಗುತ್ತೆ'' ಅಂತ ನಿರ್ದೇಶಕ ರಾಕೇಶ್ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದರು.

English summary
Rakesh directorial debute 'Tharle nan maklu' is in news for having controversial dialogues on Director Yograj Bhatt, Guruprasad of 'Mata' fame and Actor Ganesh. Rakesh clarifies to FilmiBeat Kannada that the dialogues are just situational and not intentional to hurt anybody.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more