»   » ಪ್ರಿಯಕರನೊಂದಿಗೆ ತಾರೆ ತ್ರಿಷಾ ಗುಟ್ಟಾಗಿ ನಿಶ್ಚಿತಾರ್ಥ

ಪ್ರಿಯಕರನೊಂದಿಗೆ ತಾರೆ ತ್ರಿಷಾ ಗುಟ್ಟಾಗಿ ನಿಶ್ಚಿತಾರ್ಥ

By: ರವಿಕಿಶೋರ್
Subscribe to Filmibeat Kannada
ಈ ರೀತಿಯ ಸುದ್ದಿಯೊಂದು ಲಂಗು ಲಗಾಮಿಲ್ಲದಂತೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಓಡಾಡುತ್ತಿದೆ. ಮೊದಲೇ ಆತ ಆರಡಿ ಉದ್ದದ ಹುಡುಗ. ಹೆಸರು ರಾಣಾ ದಗ್ಗುಬಾಟಿ. ಇವರಿಬ್ಬರ ನಡುವೆಯೂ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿ ಆಗಿಂದಾಗ್ಗೆ ಬರುತ್ತಲೇ ಇದೆ.

ತ್ರಿಷಾ ಮಾತ್ರ ಈ ಸುದ್ದಿಯನ್ನು ಅತ್ತ ಸಂಪೂರ್ಣವಾಗಿ ತಿರಸ್ಕರಿಸದೆ ಇತ್ತ ಸಂಪೂರ್ಣವಾಗಿ ಒಪ್ಪದೆ ಒಂಥರಾ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಈಗ ಇವರಿಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇವರಿಬ್ಬರೂ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿಕೊಳ್ಳುತ್ತಿರುವ ಫೋಟೋಗಳು ಬೇರೆ ಲೀಕ್ ಆಗಿವೆ. ಅಲ್ಲಿಗೆ ಇಬ್ಬರೂ ಉಂಗುರ ಬದಲಾಯಿಸಿಕೊಂಡಿರುವ ಸಾಧ್ಯತೆಗಳು ಇವೆ ಎನ್ನುತ್ತವೆ ಮೂಲಗಳು. ಆದರೆ ತ್ರಿಷಾ ಎಂದಿನಂತೆ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಸದ್ಯಕ್ಕೆ ಮೂರು ಮತ್ತೊಂದು ಚಿತ್ರಗಳಲ್ಲಿ ತಾನು ಬಿಜಿಯಾಗಿದ್ದೇನೆ. ಮದುವೆ, ನಿಶ್ಚಿತಾರ್ಥ, ಹನಿಮೂನಿಗೆ ನನಗೆ ಟೈಮೆಲ್ಲಿದೆ. ಇವೆಲ್ಲಾ ತಳಬುಡವಿಲ್ಲದ ಸುದ್ದಿಗಳು. ನನ್ನ ಮದುವೆ ಇನ್ನೂ ಬಹಳ ದೂರವಿದೆ ಎಂದಿದ್ದಾರೆ. ಆದರೆ ಯಾರೂ ನಂಬುತ್ತಿಲ್ಲ.

"ರಾಣಾ ನನಗೆ ಆತ್ಮೀಯ ಗೆಳೆಯ. ನಮ್ಮಿಬ್ಬರ ಗೆಳೆತನ ಹತ್ತು ವರ್ಷಗಳಷ್ಟು ಹಳೆಯದು. ಈಗದು ಪಕ್ವವಾಗಿದೆ. ನಮ್ಮದು ಮಾಗಿದ ಗೆಳೆತನ" ಎಂದಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮಿಬ್ಬರಿಗೆ ಮದುವೆ ಬಂಧ ಕಟ್ಟಬೇಡಿ" ಎಂದು ತ್ರಿಷಾ ಮತ್ತೆ ಮತ್ತೆ ವಿನಂತಿಸಿಕೊಂಡಿದ್ದಾರೆ.

"ನಾವಿಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದೇವೆ ಎಂಬುದು ಅಟಮಟ ಅಬದ್ಧ. ನಮ್ಮಿಬ್ಬರ ನಡುವೆ ಗೆಳೆತನವಿದೆಯಷ್ಟೆ ಮದುವೆಯಾಗುವ ಪ್ಲಾನ್ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ ತ್ರಿಷಾ.

English summary
The latest buzz in the film circles is that actor Daggubati Rana and actress Trisha’s secret engagement. As per the sources duo got engaged in a private ceremony.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada