»   » ಉಪ್ಪಿಯ 'ಕನ್ನೇಶ್ವರ'ದಲ್ಲಿ ಕೋಮಲ್ ಕುಮಾರ !

ಉಪ್ಪಿಯ 'ಕನ್ನೇಶ್ವರ'ದಲ್ಲಿ ಕೋಮಲ್ ಕುಮಾರ !

Written By:
Subscribe to Filmibeat Kannada

ಉಪ್ಪಿಯ ಸಿನಿಮಾಗಳು ಅಂದ್ರೇನೇ ಹಾಗೆ. ಸೆಟ್ಟೇರುವುದಕ್ಕೂ ಮುನ್ನವೇ ಸಖತ್ ಸೌಂಡ್ ಮಾಡುತ್ತೆ. ಆದ್ರೆ, ಇಲ್ಲೊಂದು ಹೊಸ ಸಿನಿಮಾ ಸದ್ದು ಸುದ್ದಿಯಿಲ್ಲದೇ ಸೈಲಾಂಟ್ ಆಗಿ ಸೆಟ್ಟೇರಿದೆ.

ಸದ್ಯ, ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ 'ಮುಕುಂದ ಮುರಾರಿ' ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಸಾಲು ಸಾಲು ಚಿತ್ರಗಳಲ್ಲಿ ಉಪ್ಪಿ ತೊಡಗಿಸಿಕೊಂಡಿದ್ದಾರೆ. ಈಗ ಈ ಸಾಲಿಗೆ ಮತ್ತೊಂದು ಹೊಸ ಚಿತ್ರ ಸೇರಿಕೊಂಡಿದ್ದು, ಮುಹೂರ್ತ ಮುಗಿಸಿ, ಶೂಟಿಂಗ್ ಸ್ಟಾರ್ಟ್ ಮಾಡಿಯೇ ಬಿಟ್ಟಿದ್ದಾರೆ. ['ಮುಕುಂದ ಮುರಾರಿ'ಯ ಮೊದಲ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್]

ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗೆ ಸೆನ್ಸೆಷ್ನಲ್ ಸ್ಟಾರ್ ಕೋಮಲ್ ಕುಮಾರ್ ಸಾಥ್ ಕೊಡಲಿದ್ದಾರಂತೆ. ಕಳೆದ ಕೆಲ ವರ್ಷಗಳಿಂದ ಕೇವಲ ನಾಯಕ ನಟನಾಗಿ ಮಾತ್ರ ಅಭಿನಯಿಸುತ್ತಿರುವ ಕೋಮಲ್, ಈ ಚಿತ್ರದಲ್ಲಿ ಉಪ್ಪಿ ಜೊತೆ ಕಮಾಲ್ ಮಾಡಲಿದ್ದಾರಂತೆ. ಮುಂದೆ ಓದಿ.....

ಉಪ್ಪಿ ಇನ್ಮುಂದೆ 'ಕನ್ನೇಶ್ವರ'

ಉಪೇಂದ್ರ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು 'ಕನ್ನೇಶ್ವರ'. ಈ ಟೈಟಲ್ ಕೇಳಿದಾಕ್ಷಣ ಇದು ಯಾವುದೋ ಭಕ್ತಿ ಪ್ರಧಾನ ಸಿನಿಮಾ ಇರಬೇಕು ಅಂದುಕೊಳ್ಳಬೇಡಿ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಅಂತೆ.

ನಾಗಣ್ಣ ನಿರ್ದೇಶನ

ಉಪೇಂದ್ರ ಅವರ 'ಕನ್ನೇಶ್ವರ' ಚಿತ್ರಕ್ಕೆ ಖ್ಯಾತ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇವರಿಬ್ಬರ ಕಾಂಬಿನೇಷನ್ ನ 4ನೇ ಸಿನಿಮಾ

'ಕನ್ನೇಶ್ವರ' ಉಪೇಂದ್ರ ಹಾಗೂ ನಾಗಣ್ಣ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ ನಾಲ್ಕನೇ ಸಿನಿಮಾ. ಈಗಾಗಲೇ 'ಕುಟುಂಬ', 'ಗೌರಮ್ಮ' ಹಾಗೂ 'ದುಬೈ ಬಾಬು' ಚಿತ್ರಗಳಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ.

'ವೇದಿಕಾ' ನಾಯಕಿ

ಉಪೇಂದ್ರ ಜೊತೆ ಈ ಬಾರಿ ಡುಯೆಟ್ ಹಾಡಲಿರುವುದು ಬಹುಭಾಷ ನಟಿ ವೇದಿಕಾ. ಇತ್ತೀಚೆಗೆ ಶಿವರಾಜ್ ಕುಮಾರ್‌ ಜೊತೆ 'ಶಿವಲಿಂಗ' ಚಿತ್ರದಲ್ಲಿ ನಟಿಸಿದ್ದ ವೇದಿಕಾ ಈಗ ರಿಯಲ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

'ಕನ್ನೇಶ್ವರ'ದಲ್ಲಿ ಕೋಮಲ್

'ಕನ್ನೇಶ್ವರ' ಚಿತ್ರದ ಮುಖ್ಯ ಪಾತ್ರದಲ್ಲಿ ಕೋಮಲ್ ಅಭಿನಯಿಸಲಿದ್ದಾರಂತೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೋಮಲ್ ಕೇವಲ ನಾಯಕ ನಟ ನಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಉಪ್ಪಿಯ ಹೊಸ ಚಿತ್ರದಲ್ಲಿ ವಿಶೇಷ ಪಾತ್ರವನ್ನ ಮಾಡಿಲಿದ್ದಾರಂತೆ.

ಉಪೇಂದ್ರ ಶೈಲಿ ಸಿನಿಮಾ

ಉಪೇಂದ್ರ ಹಾಗೂ ನಾಗಣ್ಣ ಜುಗಲ್ ಬಂದಿಯಲ್ಲಿ ಬಂದಿದ್ದ ಮೂರು ಚಿತ್ರಗಳು ರೀಮೇಕ್ ಆಗಿದ್ದವು. ಆದರೆ, ಇದು ಪಕ್ಕಾ ಸ್ವಮೇಕ್ ಸಿನಿಮಾವಾಗಿದ್ದು, ಉಪೇಂದ್ರ ಅವರ ಶೈಲಿಗೆ ತಕ್ಕಂತಹ ಕಥೆ ಹೊಂದಿದೆಯಂತೆ.[ಪದೇ ಪದೇ ಕೇಳಬೇಕೆನ್ನುವ ಉಪೇಂದ್ರ ರವರ ಡೈಲಾಗ್ ಗಳಿವು]

ನಿರ್ಮಾಣ

ಕನ್ನೇಶ್ವರ' ಚಿತ್ರವನ್ನು 'ಎ' ಎಂಟರ್‌ಟೈನರ್ ಬ್ಯಾನರ್‌ನಡಿ ರಜ್ಜಿ ಜಗನ್ನಾಥ್‌, ಅಜೇಯ್ ಹಾಗೂ ಗುರುಪ್ರಸಾದ್‌ ನಿರ್ಮಿಸುತ್ತಿದ್ದಾರೆ.

ಶೂಟಿಂಗ್ ಸ್ಟಾರ್ಟ್

ಈಗಾಗಲೇ ಚಿತ್ರದ ಮುಹೂರ್ತ ಮುಗಿಸಿರುವ 'ಕನ್ನೇಶ್ವರ' ಚಿತ್ರತಂಡ, ಮೊದಲ ಹಂತದ ಚಿತ್ರೀಕರಣವನ್ನ ಬೆಂಗಳೂರು ಸುತ್ತಮುತ್ತ ಮಾಡಲು ನಿರ್ಧರಿಸಿದೆ. ಚಿತ್ರದಲ್ಲಿ ಉಪೇಂದ್ರ, ವೇದಿಕಾ ಜೊತೆ ರಾಜೇಶ್‌ ನಟರಂಗ, ರಮೇಶ್‌ ಭಟ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ರವಿಕುಮಾರ್ ಛಾಯಾಗ್ರಹಣ, ಶ್ರೀಧರ್‌ ಸಂಭ್ರಮ್ ಸಂಗೀತ, ಪಳನಿರಾಜ್ ಸಾಹಸ, ನಂಜುಂಡ ಅವರ ಸಂಭಾಷಣೆ ಚಿತ್ರಕ್ಕಿದೆ.

"ಕನ್ನೇಶ್ವರ'ನ ಜೊತೆ ಮತ್ತೆರಡು ಚಿತ್ರ

ಅಂದಹಾಗೆ, 'ಕನ್ನೇಶ್ವರ' ಅಲ್ಲದೇ, ಉಪೇಂದ್ರ ಅವರು ಇನ್ನೂ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮಂಜು ಮಾಂಡವ್ಯ ಹಾಗೂ ಶಶಾಂಕ್ ನಿರ್ದೇಶನದ ಚಿತ್ರಗಳಿಗೆ ಉಪೇಂದ್ರ ಕಾಲ್ ಶೀಟ್ ಕೊಟ್ಟಿದ್ದಾರೆ. ಈ ನಡುವೆ 'ಡಾ ಮೋದಿ' ಹಾಗೂ 'ಉಪ್ಪಿ ಮತ್ತೆ ಬಾ' ಚಿತ್ರಗಳು ಕೂಡಾ ಸಿದ್ದವಾಗುತ್ತಿದೆ.[ಉಪೇಂದ್ರಗೆ ಆಕ್ಷನ್ ಕಟ್ ಹೇಳಲಿದ್ದಾರೆ 'ಮುಂಗಾರು ಮಳೆ' ನಿರ್ದೇಶಕ]

English summary
Kannada Actor Upendra starrer 'Kanneshwara' shooting starts. The movie is directed by Naganna. Vedika is roped into play opposite Upendra. Actor Komal Kumar is also playing the lead

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada