For Quick Alerts
ALLOW NOTIFICATIONS  
For Daily Alerts

  ಇನಿಯನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕ ವೀಣಾ

  By Prasad
  |

  ಸಿನೆಮಾ ತಾರೆಯರು ಕೂದಲಿಗೆಲ್ಲ ಕಪ್ಪು ಬಳಿದುಕೊಂಡು, ಮುಖಕ್ಕೆಲ್ಲ ಮೇಕಪ್ ಮೆತ್ತಿಕೊಂಡು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಮ್ಮ ವಯಸ್ಸನ್ನು ಹಾಗೂಹೀಗೂ ಮುಚ್ಚಿಟ್ಟಕೊಳ್ಳಬಹುದು. ಆದರೆ, ಚುಪ್ಕೆ ಚುಪ್ಕೆಯಾಗಿ, ಗುಪ್ತ್ ಗುಪ್ತ್ ಆಗಿ, ಚೋರಿ ಚೋರಿಯಾಗಿ, ಕದ್ದುಮುಚ್ಚಿ ಇನಿಯನೊಂದಿಗೆ ಇಟ್ಟುಕೊಂಡಿರುವ ಲವ್ ಅಫೇರನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಒಂದು ರೀತಿ ಇದು ಬಸುರನ್ನು ಮುಚ್ಚಿಟ್ಟುಕೊಂಡಂತೆ.

  ಪ್ರೇಮದ ನಶೆ ಏರಿದಾಗ ಆ ಮುಖದಲ್ಲಿ ಏನೋ ಕಾಂತಿ ಚಿಮ್ಮುತ್ತಿರುತ್ತದೆ, ಕೆಂಪೇರಿರುವ ಬೆಲ್ಲದಂತಹ ಗಲ್ಲ ಎಲ್ಲ ಕಥೆಯನ್ನೂ ಹೇಳುತ್ತಿರುತ್ತದೆ. ಯಾವುದೇ ಕುಮ್ಮಕ್ಕು ಇಲ್ಲದೆ, ಯಾವುದೋ 'ಡರ್ಟಿ' ಜೋಕ್ಸ್ ಕೇಳದೆಯೂ ಮುಖದಲ್ಲಿ ನಗು ತಾನೇತಾನಾಗಿರುತ್ತದೆ.

  ಇನ್ನು ಆ ಚಿತ್ರಕ್ಕೂ ತನಗೂ ಸಂಬಂಧವೇ ಇಲ್ಲದಿದ್ದರೂ ಸ್ವತಃ ಇನಿಯನೇ ತನ್ನ ಗೆಳತಿಗಾಗಿ ದೂರದೂರಿನಿಂದ ಓಡೋಡಿ ಬಂದರೆ ಅನುಮಾನ ಬರದೆ ಇರುತ್ತದಾ? ಭಾಷಾ ಬಾಂಧ್ಯವ್ಯ ಇಲ್ಲದಿದ್ದರೂ ನಿರ್ದೇಶಕನೆಂಬ ಈ ಯಪ್ಪ ಮುಂಬೈನಿಂದ ಹೈದರಾಬಾದ್‌ವರೆಗೆ ಬರಬೇಕಾದರೆ... ಆಹಾ ಇಬ್ಬರ ನಡುವೆ ಏನೋ ಕುಚ್ಚಿಕುಚ್ಚಿ ಇರಲೇಬೇಕು ಎಂಬ ಗುಸುಗುಸು ಆರಂಭವಾಗುವುದು ಖಂಡಿತ.

  ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪ್ರಣಯ ಪಕ್ಷಿಗಳು ವೇದಿಕೆಯ ಮೇಲೆ ನಡೆದುಕೊಳ್ಳುತ್ತಿದ್ದು ನೋಡಿದರೆ, 'ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ, ಕಣ್ಣಂಚಿನ ಕೊನೆಯ ಭಾವದಲ್ಲಿ' ಎಂಬ ಹಾಡು ನೆನಪಿಗೆ ಬರದೆ ಇರದು. ಆ ಪ್ರೇಮಕಥಾನಕದ ರಾಜ ರಾಣಿಯರು ಸಿಕ್ಕಿಬಿದ್ದ ಕಥೆ ಇಲ್ಲಿದೆ ನೋಡಿ.

  ಕಥಾ ನಾಯಕಿ ವೀಣಾ, ನಾಯಕ ಹೇಮಂತ್

  ಬಾಲಿವುಡ್ ಬಿಂದಾಸ್ ಬೇಡಿ, ಸ್ಯಾಂಡಲ್‌ವುಡ್ 'ಡರ್ಟಿ' ಗರ್ಲ್, ಪಾಕಿಸ್ತಾನದಿಂದ ಆಮದು ಮಾಡಿಕೊಂಡ ನಟಿ ವೀಣಾ ಮಲಿಕ್ ವಿಷಯದಲ್ಲಿ ಆಗಿದ್ದುದೂ ಅದೇ. ಹೇಮಂತ್ ಮಧುಕರ್ ಎಂಬ ನಿರ್ದೇಶಕ ಹಠಾತ್ತಾಗಿ ವೇದಿಕೆ ಮೇಲೆ ಬಂದು ವೀಣಾ ಮಲಿಕ್‌ಳನ್ನು ಮಾತ್ರವಲ್ಲ ಅಲ್ಲಿ ನೆರೆದಿದ್ದ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.

  ಅಷ್ಟರಲ್ಲಿ ಎಂಟ್ರಿ ಆಯ್ತಲ್ಲ...

  ಅದು ತೆಲುಗು ಚಿತ್ರವೊಂದರ ಆಡಿಯೋ ಬಿಡುಗಡೆಯ ಕಾರ್ಯಕ್ರಮ. ವೇದಿಕೆಯ ಮೇಲೆ ಎಸ್ ಪಿ ಬಾಲಸುಬ್ರಮಣ್ಯಂ ಸೇರಿದಂತೆ ಚಿತ್ರದ ನಿರ್ಮಾಪಕ, ನಿರ್ದೇಶಕರೆಲ್ಲ ಕುಳಿತಿದ್ದರು. ಬೆಳ್ಳಿಯಿಂದಲೇ ಅಲಂಕರಿಸಿದ್ದಂತಹ ಸೀರೆ ತೊಟ್ಟಿದ್ದ, ತೋಳಿಲ್ಲದ ರವಿಕೆ ಧರಿಸಿದ್ದ, ಕೃತಕ ಹೂ ಮುಡಿದಿದ್ದ ವೀಣಾ ಮಲಿಕ್ ಕುರ್ಚಿಯನ್ನು ಕುಳಿತಿದ್ದರು. ಅಷ್ಟರಲ್ಲಿ ಎಂಟ್ರಿ ಆಯ್ತಲ್ಲ...

  ಮಲ್ಲಿಗೆಯಂತೆ ಅರಳಿದ ವೀಣಾ ಮಲಿಕ್

  ಇದೊಂದು ಪೂರ್ವನಿಯೋಜಿತ ತಂತ್ರವಾಗಿತ್ತೋ ಇಲ್ಲವೋ ಬಲ್ಲವರಾರು? ಆದರೆ, ಹೇಮಂತ್ ಉಪಸ್ಥಿತಿ ವೀಣಾಳ ಮುಖವನ್ನಂತೂ ಮಲ್ಲಿಗೆಯಂತೆ ಅರಳಿಸಿತ್ತು. ಎರಡೂ ಕಿವಿಯವರೆಗೆ ಹಿಗ್ಗಿದ ತುಟಿಗಳು ಅವರಿಬ್ಬರು ಗುಸುಗುಸು ಮಾತುಗಳು ಮುಗಿಯುವವರೆಗೆ ಮೊದಲಿನ ಸ್ಥಿತಿಗೆ ಮರಳಿರಲಿಲ್ಲ. ಪಿಸುಪಿಸು ಮಾತುಗಳ ನಡುವೆ ನಗು, ನಗುನಗುತಲೇ ಪ್ರೇಮದ ಸಲ್ಲಾಪ...

  ಪಬ್ಲಿಕ್ ಆಗಿ ಕಂಡಿದ್ದು ಇದೇ ಮೊದಲಂತೆ

  ಇವರಿಬ್ಬರ ನಡುವೆ ಏನೋ ನಡೀತಿದೆ ಎಂದು ಎಲ್ಲರಿಗೂ ಗುಮಾನಿಯಿತ್ತು. ಇತ್ತೀಚೆಗೆ ಚೋರಿಚೋರಿ ಚುಪ್ಕೆಚುಪ್ಕೆ ವಿದೇಶಕ್ಕೆ ಹಾರಿ ಮಜಾ ಮಾಡಿ ಬಂದಿತ್ತು ಗುಟ್ಟಾಗೇನೂ ಉಳಿದಿಲ್ಲ. ಆದರೆ, ಇಬ್ಬರು ಇಷ್ಟು ಆತ್ಮೀಯವಾಗಿದ್ದ ಸ್ಥಿತಿಯಲ್ಲಿ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇನ್ನು ಕಾಣಿಸಿಕೊಂಡ ಮೇಲೆ ಛಾಯಾಗ್ರಾಹಕರಿಗೆ ಇನ್ನೇನು ಕೆಲಸ? ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.

  ಮುಂದಿನ ಭವಿಷ್ಯಕ್ಕೆ ಈಗಿಂದಲೇ ಪ್ಲಾನಿಂಗ್?

  'ದಿ ಸಿಟಿ ದಟ್ ನೆವರ್ ಸ್ಲೀಪ್ಸ್' ಚಿತ್ರದಲ್ಲಿ ವೀಣಾ ಮಲಿಕ್ ಅತಿ ಹೆಚ್ಚು ಮುತ್ತುಗಳನ್ನು ನೀಡಿ ಗಿನ್ನೆಸ್ ದಾಖಲೆ ನಿರ್ಮಿಸಲಿದ್ದಾರಂತೆ. ಅದರ ರಿಹರ್ಸಲ್ ಮಾಡಲೆಂದೇ ವೀಣಾ ಅವರು ಹೇಮತ್ ಜೊತೆ ಫಾರಿನ್ನಿಗೆ ಹೋಗಿದ್ದರಾ ಎಂದು ಪಡ್ಡೆಗಳು ಮಾತನಾಡಿಕೊಳ್ಳುತ್ತಿವೆ. ಏನೇ ಆಗಲಿ ಈ ಬಂಧವನ್ನು ಇಲ್ಲಿಗೇ ಬಿಡದೆ, ಸಂಬಂಧ ಕುದುರಿಸಿ ಇಬ್ಬರು ಮದುವೆ ಮಾಡಿಕೊಂಡು ನೂರುಕಾಲ ಬಾಳಲಿ.

  ವೀಣಾಳ ಡರ್ಟಿ ಪಿಕ್ಚರ್ ಯಾವಾಗ ಬಿಡುಗಡೆ?

  ವೀಣಾ ಮಲಿಕ್ ನಟಿಸುತ್ತಿರುವ 'ಡರ್ಟಿ ಪಿಕ್ಚರ್ - ಸಿಲ್ಕ್ ಸಖತ್ ಹಾಟ್ ಮಗಾ' ಕನ್ನಡ ಚಿತ್ರ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ವಿದ್ಯಾ ಬಾಲನ್ ನಟಿಸಿದ್ದ 'ದಿ ಡರ್ಟಿ ಪಿಕ್ಚರ್' ಚಿತ್ರದ ನಕಲು ಎಂಬ ಕಾರಣಕ್ಕೆ ಕನ್ನಡ ಚಿತ್ರ ಈಗ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದೆ. ಈ ಪಾತ್ರಕ್ಕಾಗಿ ವೀಣಾ ಸಾಕಷ್ಟು ಮೈತುಂಬಿಕೊಂಡಿದ್ದರು. [ಕಪ್ಪು ಸೀರೆಯಲ್ಲಿ ಮಿಂಚಿದ ವೀಣಾ]

  English summary
  Bollywood Diva Veena Malik was on cloud nine when she was noticed with Bollywood director Hemant Madhukar, walking at the stage of Music launch of Telugu Movie in Hyderabad. What is going on between them? Will they accept their love affair?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more