For Quick Alerts
  ALLOW NOTIFICATIONS  
  For Daily Alerts

  ವೀಣಾ 'ಐಟಂ' ಹಾಡಿಗೆ ಕುಣಿವ ಕಾಲ್ಗಳು ಯಾರದು?

  |

  ಕನ್ನಡದ 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ನಟಿಸಿರುವ ಪಾಕಿಸ್ತಾನ ಮೂಲದ ನಟಿ ವೀಣಾ ಮಲಿಕ್ ಈ ಚಿತ್ರದ ಐಟಂ ಸಾಂಗ್ ಒಂದನ್ನು ಹಾಡಲಿದ್ದಾರೆ. ಬರುವ ತಿಂಗಳು ಆಗಸ್ಟ್ ನಲ್ಲಿ ಐಟಂ ಸಾಂಗ್ ಹಾಡಲು ಬೆಂಗಳೂರಿಗೆ ಬರುವುದಾಗಿ ಸ್ವತಃ ವೀಣಾ ಮಲಿಕ್, ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಹಾಡು ಚಿತ್ರದಲ್ಲಿ ಭಾರೀ ಜನಮನ್ನಣೆ ಪಡೆಯಲಿದೆ ಎಂಬ ಭವಿಷ್ಯವನ್ನೂ ವೀಣಾ ಹೇಳಿದ್ದಾರೆ.

  ಕನ್ನಡದ ಈ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ವೀಣಾ, ಇತ್ತೀಚಿಗಷ್ಷೇ ತಮ್ಮ ಹುಟ್ಟೂರು ಪಾಕಿಸ್ತಾನಕ್ಕೆ ಮರಳಿದ್ದಾರೆ. ಮತ್ತೆ ಆಗಸ್ಟ್ ನಲ್ಲಿ ಬರಲಿರುವ ವೀಣಾ, ಈ ಚಿತ್ರದಲ್ಲಿ ಹಾಡುವುದು ಮಾತ್ರವಷ್ಟೇ ಅಲ್ಲ, ಇನ್ನೊಂದು ಕನ್ನಡ ಚಿತ್ರಕ್ಕೆ ಸಹಿಯನ್ನೂ ಹಾಕಲಿದ್ದಾರೆ ಎಂಬುದು ಗಾಂಧಿನಗರದಿಂದ ಬಂದಿರುವ ವರ್ತಮಾನ. ಆದರೆ ಆ ಬಗ್ಗೆ ಅಧಿಕೃತ ಮಾಹಿತಿ ಬರಬೇಕಾಗಿದೆ.

  ಅಂದಹಾಗೆ, ವೀಣಾ ಈ ಚಿತ್ರಕ್ಕಾಗಿ ಐಟಂ ಸಾಂಗ್ ಹಾಡಲಿದ್ದಾರೆ ಅಷ್ಟೇ. ಬದಲು ಈ ಹಾಡಿಗೆ ಅವರು ಹೆಜ್ಜೆ ಹಾಕುತ್ತಿಲ್ಲ. ವೀಣಾ ಹಾಡಿದ ಮೇಲೆ ಕುಣಿಯದಿರುತ್ತಾರಾ ಎಂಬ ನಿಮ್ಮ ಎಣಿಕೆ ಈ ಬಾರಿ ತಪ್ಪಿದೆ. ಆದರೆ ನೀವೆಲ್ಲಾ ಕುಣಿಯುವಂತೆ ಆಕೆ ಹಾಡಿದರೆ ಸಾಲು ಎಂದು ನೀವು ನಂಬುವ ದೇವರಿಗೆ ಹರಕೆ ಹೊತ್ತುಕೊಳ್ಳಬಹುದು. ಏಕೆಂದರೆ ಕುಣಿಯಲು ಬೇರೆ ಒಬ್ಬರು ಬರಲಿದ್ದಾರೆ, ಕಾದು ನೋಡಿ...

  ಸಿಕ್ಕ ಸುದ್ದಿಯ ಪ್ರಕಾರ, ಈ ಐಟಂ ಹಾಡಿನಲ್ಲಿ ಸಟಿಸಲು ಪೂನಂ ಪಾಂಡೆಗೆ ಗಾಳ ಹಾಕಲಾಗಿತ್ತು. ಆದರೆ ಆಕೆ ಗಾಳಕ್ಕೆ ಸಿಕ್ಕಿಲ್ಲ. ಈಗ ಚಿತ್ರತಂಡದ ಚಿತ್ತ ಝರಿನ್ ಖಾನ್, ಅಮೀಶಾ ಪಟೇಲ್ ಅಥವಾ ಜಿಯಾ ಖಾನ್ ಅವರುಗಳತ್ತ ಹರಿದಿದೆ. ಅಂದುಕೊಂಡಂತೆ ನಡೆದರೆ ಅವರಲ್ಲೊಬ್ಬರು ಈ ಹಾಡಿಗೆ ಕುಣಿಯಬಹುದು, ಇಲ್ಲದಿದ್ದರೆ ಯಾರು ಕಾಲು ಕುಣಿಯುತ್ತೆ ಎಂಬುದನ್ನು ಕಾದು ನೋಡಬೇಕಷ್ಟೇ. (ಒನ್ ಇಂಡಿಯಾ ಕನ್ನಡ)

  English summary
  Pakistani actress Veena Malik, who is playing lead in Kannada movie The Dirty Picture Silk Sakkath Hot Maga (TDPSSHM), is now turning a singer with this movie.
 
  Friday, July 27, 2012, 16:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X