For Quick Alerts
  ALLOW NOTIFICATIONS  
  For Daily Alerts

  ಕೆರೀಬಿಯನ್ ದ್ವೀಪದಲ್ಲಿ ವಿದ್ಯಾ ಬಾಲನ್ ಮಧುಚಂದ್ರ!

  By Rajendra
  |

  ಬಾಲಿವುಡ್ 'ಡರ್ಟಿ ಗರ್ಲ್' ವಿದ್ಯಾ ಬಾಲನ್ ಗೆ ಇನ್ನೂ ಮದುವೇನೆ ಆಗಿಲ್ಲ ಆಗಲೇ ಮಧುಚಂದ್ರವೇ ಆಹಾ ಎಂದು ಹುಬ್ಬೇರಿಸಬೇಡಿ. ವಿದ್ಯಾಗೆ ಇನ್ನೂ ಮದುವೆಯಾಗದಿದ್ದರೂ ಮಧುಚಂದ್ರಕ್ಕೆ ಈಗಲೇ ಪ್ಲಾನ್ ಹಾಕಿಕೊಂಡಿದ್ದಾರಂತೆ.

  ಯೂಟಿವಿ ಮೋಷನ್ ಪಿಕ್ಚರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ್ ರಾಯ್ ಕಪೂರ್ ಅವರ ಕೈಹಿಡಿಯಲಿದ್ದಾರೆ ಎಂಬ ಸುದ್ದಿಗೆ ಈಗಾಗಲೆ ರೆಕ್ಕೆಪುಕ್ಕ ಮೂಡಿದೆ. 2012ರ ಡಿಸೆಂಬರ್ ನಲ್ಲಿ ಇವರಿಬ್ಬರೂ ಹಾರ ಬದಲಾಯಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

  ಈ ಸುದ್ದಿ ಇನ್ನೂ ಖಚಿತವಾಗಿಲ್ಲದಿದ್ದರೂ ಬಾಲಿವುಡ್ ನಲ್ಲಿ ಮಾತ್ರ ಚಾಪೆ ಕೆಳಗೆ ನೀರಿನಂತೆ ಹರಿದಾಡುತ್ತಿದೆ. ಇನ್ನು ಸಿದ್ಧಾರ್ಥ್ ಬಗ್ಗೆ ಹೇಳಬೇಕೆಂದರೆ ಇವರಿಗೆ ಈಗಾಗಲೆ ಎರಡು ಮದುವೆಯಾಗಿದೆ. ಮೊದಲ ಪತ್ನಿ ಈತನ ಬಹುಕಾಲದ ಗೆಳತಿ. ಎರಡನೆಯವರು ಟಿವಿ ನಿರ್ಮಾಪಕಿ. ಎರಡನೆ ಪತ್ನಿಗೆ ಇನ್ನೂ ವಿಚ್ಚೇದನ ನೀಡಿಲ್ಲ ಎನ್ನಲಾಗಿದೆ.

  ಇವರಿಬ್ಬರೂ ಇನ್ನೂ ತಮ್ಮ ಮದುವೆ ಬಗ್ಗೆ ತುಟಿ ಬಿಚ್ಚಿಲ್ಲದಿದ್ದರೂ ಇವರ ಹನಿಮೂನ್ ಮಾತ್ರ ಕೆರೀಬಿಯನ್ ದ್ವೀಪಗಳಲ್ಲಿ ನಡೆಯುತ್ತದೆ. ಕೆರೀಬಿಯನ್ ಸಮುದ್ರಲ್ಲಿ 7000ಕ್ಕೂ ಅಧಿಕ ದ್ವೀಪಗಳಿವೆ. ಅವುಗಳಲ್ಲಿ ಇವರ ಮಧುಚಂದ್ರಕ್ಕೆ ಸೂಕ್ತ ತಾಣ ಯಾವುದು ಎಂಬುದು ಮಾತ್ರ ಇನ್ನೂ ದೃಢಪಟ್ಟಿಲ್ಲ! (ಏಜೆನ್ಸೀಸ್)

  English summary
  The rumour has it that bollywood actress Vidya Balan and Siddharth Roy Kapur will head for a honeymoon in the Caribbean! The buzz that the wedding might happen by the end of December.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X