»   » ಇದೇ ವಾರ ಮದುವೆ ಆಗ್ತಾರಂತೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ!

ಇದೇ ವಾರ ಮದುವೆ ಆಗ್ತಾರಂತೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ!

Posted By:
Subscribe to Filmibeat Kannada

ಟೀಂ ಇಂಡಿಯಾ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮ ಪಕ್ಷಿಗಳು ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ಲವರ್ಸ್ ಆಗಿ ಇದ್ದ ಜೋಡಿ ಇದೀಗ ಮದುವೆ ಆಗಲಿದ್ದಾರಂತೆ.

ಸದ್ಯದ ಸುದ್ದಿ ಪ್ರಕಾರ ವಿರಾಟ್ - ಅನುಷ್ಕಾ ಜೋಡಿ ಇಟಲಿಯಲ್ಲಿ ಮದುವೆ ಆಗಲಿದ್ದಾರಂತೆ. ಇದೇ ವಾರ ಅಂದರೆ ಡಿಸೆಂಬರ್ 9 ರಿಂದ 12ರ ಒಳಗೆ ವಿವಾಹ ಕಾರ್ಯಕ್ರಮಗಳು ನಡೆಯಲಿದ್ದು, ವಿರಾಟ್ ನಾಳೆ ಭಾರತದಿಂದ ಇಟಲಿಗೆ ತೆರಳಲಿದ್ದಾರಂತೆ.

Virat Kohli and Anushka Sharma are all set to tie the knot this week

ವಿರಾಟ್ ಜೊತೆ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಸಹ ಇಟಲಿಗೆ ಹೋಗಲಿದ್ದಾರಂತೆ. ಇವರಿಬ್ಬರ ಮದುವೆ ಸಮಾರಂಭ ಇಟಲಿಯಲ್ಲಿ ನಡೆಯಲಿದೆ ಎಂದು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಸುದ್ದಿ ಈಗ ಎಲ್ಲ ಕಡೆ ಹರಿದಾಡಿದೆ. ಆದರೆ ಇದು ನಿಜವೋ ಅಥವಾ ಜಸ್ಟ್ ರೂಮರ್ ಅಷ್ಟೇನೋ ಎಂಬುದು ತಿಳಿಯಬೇಕಿದೆ. ಯಾಕಂದ್ರೆ ಈ ರೀತಿ ಈಗಾಗಲೇ ಅನೇಕ ಬಾರಿ ವಿರಾಟ್ - ಅನುಷ್ಕಾ ಮದುವೆಯ ಗಾಸಿಪ್ ಕೇಳಿ ಬಂದಿದೆ. ಸದ್ಯಕ್ಕೆ ವಿರಾಟ್ ಅಥವಾ ಅನುಷ್ಕಾ ಇಬ್ಬರು ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿಲ್ಲ.

English summary
According to latest Grapevine, Virat Kohli and Anushka Sharma are all set to tie the knot this week
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada