Don't Miss!
- News
"Nim bus" ಆ್ಯಪ್ ಹೆಸರು ಬದಲಾವಣೆಗೆ ಬಿಎಂಟಿಸಿ ನಿರ್ಧರಿಸಿದ್ದು ಏಕೆ?, ಇಲ್ಲಿದೆ ವಿವರ
- Finance
Forbes Real-Time Billionaires 2023: ಭಾರತೀಯ ಶ್ರೀಮಂತರ ಪೈಕಿ ಮುಖೇಶ್ ಅಂಬಾನಿಗೆ ಅಗ್ರ ಸ್ಥಾನ!
- Technology
ಕೇಂದ್ರ ಬಜೆಟ್ 2023: ಪ್ಯಾನ್ ಕಾರ್ಡ್ ಬಳಕೆದಾರರೇ ಇಲ್ಲಿ ಗಮನಿಸಿ!
- Automobiles
ಸ್ಕ್ರಾಪ್ ಆಗಲಿವೆ 15 ವರ್ಷಕ್ಕಿಂತ ಹಳೆಯ 1.19 ಲಕ್ಷ ವಾಹನಗಳು... ಮಾಲೀಕರಿಗೆ ನೋಟಿಸ್
- Sports
Ind Vs Aus Test: ಬೆಂಗಳೂರಿಗೆ ಬಂದ ಕಾಂಗರೂ ಪಡೆ: ಫೆಬ್ರವರಿ 2ರಿಂದ ಆಲೂರಿನಲ್ಲಿ ಅಭ್ಯಾಸ
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೋವಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ವಿಡಿಯೋ ವೈರಲ್: ಇಲ್ಲಿದೆ ಡಿಟೈಲ್ಸ್
ನಟ- ನಟಿಯರ ಅಫೇರ್‌ಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತದೆ. ಆದರೆ ತಮನ್ನಾ ವಿಚಾರದಲ್ಲಿ ಇಂತಹ ವದಂತಿಗಳಿಗೆ ಅವಕಾಶ ಇರಲಿಲ್ಲ. ಮದುವೆ ಬಗ್ಗೆ ಪ್ರಶ್ನೆ ಎದುರಾದಾಗ ಸದ್ಯಕ್ಕಿಲ್ಲ ಎನ್ನುತ್ತಿದ್ದರು. ಆದರೆ ಹೊಸ ವರ್ಷದ ಸಂಭ್ರಮದಲ್ಲಿ ಮಿಲ್ಕಿ ಬ್ಯೂಟಿ ಡೇಟಿಂಗ್ ಬಗ್ಗೆ ಗುಸುಗುಸು ಶುರುವಾಗಿದೆ.
ಹೊಸ ನಟಿಯರ ಆಗಮನದಿಂದ ತಮನ್ನಾ ಬಾಟಿಯಾ ಹವಾ ಕಮ್ಮಿ ಆಗಿದೆ. ಮೊದಲು ಸ್ಟಾರ್ ನಟರ ಜೊತೆ ನಟಿಸುತ್ತಿದ್ದ ಚೆಲುವೆ ಇತ್ತೀಚೆಗೆ ಸಣ್ಣ ಪುಟ್ಟ ಸಿನಿಮಾಗಳಲ್ಲೂ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್‌ನಲ್ಲೂ ತಮನ್ನಾ ಕ್ರೇಜ್ ಮೊದಲಿನಂತೆ ಇಲ್ಲ. ಸದ್ಯ ಮೂರ್ನಾಲ್ಕು ಸಿನಿಮಾಗಳು ಈ ಮುಂಬೈ ಚೆಲುವೆ ಕೈಯಲ್ಲಿವೆ. ಕೆಲ ದಿನಗಳ ಹಿಂದೆ ತಮನ್ನಾ ಮುಂಬೈ ಮೂಲದ ಉದ್ಯಮಿ ಕೈ ಹಿಡಿಯುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಮಿಲ್ಕಿ ಬ್ಯೂಟಿ ಅದೆಲ್ಲಾ ಸುಳ್ಳು ಎಂದಿದ್ದರು.
ರೊಮ್ಯಾಂಟಿಕ್
ಸೀನ್ಗಳಲ್ಲಿ
ನಟಿಸುವುದನ್ನು
ನಟರು
ಎಂಜಾಯ್
ಮಾಡ್ತಾರಾ?
ಸ್ಟಾರ್
ನಟರ
ನಿಜ
ಬಣ್ಣ
ಬಿಚ್ಚಿಟ್ಟ
ತಮನ್ನಾ!
ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆ ತಮನ್ನಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನುವುದು ನಂತರ ಗೊತ್ತಾಗಿತ್ತು. ಇದೀಗ ಬಾಲಿವುಡ್ ನಟನ ಜೊತೆ ಮುಂಬೈ ಬೆಡಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ಗೋವಾದಲ್ಲಿ ಹೊಸ ವರ್ಷಾಚರಣೆ
ತಮನ್ನಾ ಗೋವಾದಲ್ಲಿ ಹೊಸ ವರ್ಷ ಸ್ವಾಗತಿಸಿದ್ದಾರೆ. ಪಾರ್ಟಿಯಲ್ಲಿ ರೆಡ್ ಕಲರ್ ಡ್ರೆಸ್‌ನಲ್ಲಿ ಮಿಲ್ಕಿ ಬ್ಯೂಟಿ ಮಿಂಚಿದ್ದಾರೆ. ಎಲ್ಲರೂ ಪಾರ್ಟಿ ಮೂಡ್‌ನಲ್ಲಿ ಇದ್ದಾಗ ತಮನ್ನಾ ಒಬ್ಬ ವ್ಯಕ್ತಿ ಜೊತೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನನ್ನು ತಬ್ಬಿಕೊಂಡು ಮುದ್ದಾಡಿರುವ ಫೋಟೊಗಳು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆತ ಯಾರು ಎಂದು ನೆಟ್ಟಿಗರು ಹುಡುಕಾಟ ಶುರು ಮಾಡಿದ್ದಾರೆ.

ವಿಜಯ್ ವರ್ಮಾ ಜೊತೆ ಡೇಟಿಂಗ್?
ನಟಿ ತಮನ್ನಾ ಹೀಗೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿರುವುದು ಖಳ ನಟ ವಿಜಯ್ ವರ್ಮಾ ಜೊತೆ ಎನ್ನಲಾಗ್ತಿದೆ. ಇವರಿಬ್ಬರು ಪ್ರೇಮಪಾಶಕ್ಕೆ ಸಿಲುಕಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಸದ್ಯಕ್ಕೆ ಇಬ್ಬರೂ ಕದ್ದುಮುಚ್ಚಿ ಡೇಟಿಂಗ್ ಮುಂದುವರೆಸಿದ್ದಾರೆ ಎನ್ನಲಾಗ್ತಿದೆ. 'ಸೂಪರ್ 30', 'ಗಲ್ಲಿ ಬಾಯ್', 'ಭಾಗಿ- 3' ಸೇರಿದಂತೆ ಒಂದಷ್ಟು ಹಿಂದಿ ಸಿನಿಮಾಗಳಲ್ಲಿ ವಿಜಯ್ ವರ್ಮಾ ನಟಿಸಿದ್ದಾರೆ. ಒಂದು ತೆಲುಗು ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.

'ಲಸ್ಟ್ ಸ್ಟೋರಿಸ್-2'ನಲ್ಲಿ ನಟನೆ
4 ವರ್ಷಗಳ ಹಿಂದೆ 'ಲಸ್ಟ್ ಸ್ಟೋರಿಸ್' ಆಂಥಾಲಜಿ ಸಿನಿಮಾ ಹಿಟ್ ಆಗಿತ್ತು. ಇದರ ಮುಂದುವರೆದ ಭಾಗ ಶೂಟಿಂಗ್ ನಡೀತಿದೆ. ತಮನ್ನಾ ಹಾಗೂ ವಿಜಯ್ ವರ್ಮಾ ಈ ವೆಬ್ ಸೀರಿಸ್‌ನಲ್ಲಿ ನಟಿಸ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಮೊದಲಿಗೆ ಇಬ್ಬರ ಭೇಟಿ ಮಾಡಿದ್ದರಂತೆ. ಅದೇ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿ ಈಗ ಪ್ರೀತಿ ಆಗಿ ಬದಲಾಗಿದೆ ಎನ್ನಲಾಗ್ತಿದೆ.

3 ಸಿನಿಮಾಗಳಲ್ಲಿ ತಮನ್ನಾ
ಸದ್ಯಕ್ಕೆ ದೊಡ್ಡ ಪ್ರಾಜೆಕ್ಟ್‌ಗಳು ತಮನ್ನಾ ಕೈಯಲ್ಲಿ ಇಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಚೆಲುವೆ ನಟಿಸುತ್ತಿಲ್ಲ. 'ಭೋಳಾ ಶಂಕರ್' ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್‌ನ 'ಬೊಲೆ ಚುಡಿಯಾ', 'ಬಂದ್ರಾ' ಸಿನಿಮಾಗಳಲ್ಲೂ ಮಿಲ್ಕಿ ಬ್ಯೂಟಿ ನಟಿಸುತ್ತಿದ್ದಾರೆ.