»   » ಬಿಂದಾಸ್ ಬೆಡಗಿ ಹಂಸಿಕಾ ಮೋತ್ವಾನಿಗೆ ಕಂಕಣಭಾಗ್ಯ

ಬಿಂದಾಸ್ ಬೆಡಗಿ ಹಂಸಿಕಾ ಮೋತ್ವಾನಿಗೆ ಕಂಕಣಭಾಗ್ಯ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ "ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ..." ಎಂದು 'ಬಿಂದಾಸ್' ಚಿತ್ರದಲ್ಲಿ ಹೆಜ್ಜೆಹಾಕಿದ್ದ ಹಂಸಿಕಾ ಮೋತ್ವಾನಿಗೆ ಕಂಕಣಭಾಗ್ಯ ಕೂಡಿ ಬಂದಿದೆ. ಇಷ್ಟು ದಿನ ಹಂಸಿಕಾ ಮತ್ತು ತಮಿಳು ನಟ ಸಿಂಬು ನಡೆವೆ ಕುಚ್ ಕುಚ್ ಸುದ್ದಿ ಸರಿದಾಡುತ್ತಿತ್ತು. ಈಗ ಅದು ನಿಜವಾಗುತ್ತಿದೆ.

ಇಬ್ಬರೂ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಇಷ್ಟು ದಿನ ಇಬ್ಬರೂ ಕಣ್ಣಾಮುಚ್ಚಾಲೆ, ಜೂಜಾಟ ಎಲ್ಲಾ ಆಡಿದ್ದಾರೆ. ಆಗೆಲ್ಲಾ ಮಾಧ್ಯಮಗಳು ಇವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್ ಸುದ್ದಿಗಳನ್ನು ಬರೆದಿದ್ದವು. ಅಂತಹ ಸಮಯದಲ್ಲೆಲ್ಲಾ ಇಬ್ಬರೂ ನಿರಾಕರಿಸುತ್ತಿದ್ದರು.


ಈ ಹಂಸಿಕಾ ಹಾಗೂ ಸಿಂಬು ಇಬ್ಬರೂ ತಮ್ಮ ಮದುವೆ ಬಗ್ಗೆ ಟ್ವೀಟಿಸಿದ್ದಾರೆ. ತಮ್ಮ ಮದುವೆಗೆ ಇಬ್ಬರು ಮನೆಯವರೂ ಒಪ್ಪಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಹಂಸಿಕಾ ಮತ್ತು ಸಿಂಬು ಮದುವೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

'ವಾಲು' ಮತ್ತು 'ವೆಟ್ಟೈ ಮನಾನ್' ಎಂಬ ಚಿತ್ರಗಳಲ್ಲಿ ಹಂಸಿಕಾ ಮತ್ತು ಸಿಂಬು ಒಟ್ಟಾಗಿ ನಟಿಸುತ್ತಿದ್ದಾರೆ. ಆಗಲೇ ಇವರಿಬ್ಬರ ನಡುವೆ ಪ್ರೇಮ ಮೊಳಕೆಯೊಡೆದಿದೆ. ಅದು ಈಗ ಹೂವು ಹಣ್ಣು ಬಿಡುವ ಹಂತಕ್ಕೆ ಬಂದಿದೆ. ಇನ್ನೇನಿದ್ದರೂ ಎರಡೂ ಕಡೆಯ ಮನೆಯವರು ತಾಂಬೂಲ ಬದಲಾಯಿಸಿಕೊಳ್ಳುವುದು ಬಾಕಿ ಇದೆ. ಮದುವೆ ಯಾವಾಗ ಎಂಬ ಬಗ್ಗೆ ಇನ್ನೂ ಶುಭ ಮುಹೂರ್ತ ಫಿಕ್ಸ್ ಆಗಿಲ್ಲ.

English summary
According to the sources, Tamil actor Simbu and Hansika have officially revealed that they are in love with each other. Over the past few months, there have been several rumours about the two actors and several newspapers have been reporting that they might get married soon.
Please Wait while comments are loading...