»   » ಲೂಸ್ ಮಾದ ಯೋಗಿ-ರಾಗಿಣಿ ಪಬ್ ಒಳಗೆ ಏನ್ಮಾಡ್ತಿದ್ರು?

ಲೂಸ್ ಮಾದ ಯೋಗಿ-ರಾಗಿಣಿ ಪಬ್ ಒಳಗೆ ಏನ್ಮಾಡ್ತಿದ್ರು?

By: ಜೀವನರಸಿಕ
Subscribe to Filmibeat Kannada

ರಾಗಿಣಿ ಇತ್ತೀಚೆಗೆ ನಿದ್ರೆ ಬಿಟ್ಟಿದ್ದಾರೆ! ಇಷ್ಟು ಕೇಳಿದ ಮೇಲೆ 'ನಿದಿರೆ ಬರದಿರೆ ಏನಂತಿ ಲವ್ವೋ ಲವ್ವೋ ಲವ್ವೋ' ಎಂದು ಹಾಡು ಹಾಡಿಕೊಳ್ಳಲು ಶುರು ಮಾಡಿಕೊಳ್ಳಬೇಡಿ. ಎಲ್ಲ ನಾಯಕರ ಜೊತೆ ರಾಗಿಣಿ ಮಿಂಗಲ್ ಆಗುತ್ತಾರಾದರೂ ಸದ್ಯಕ್ಕೆ ಅವರಿನ್ನೂ ಸಿಂಗಲ್, ಅವರ ಪ್ರಕಾರ.

ಮೊದಲೇ ಗ್ಲಾಮರ್ ಡಾಲ್ ಅಂದಮೇಲೆ ಯಾರ್ಯಾರ ಕಾಟಾನೋ ಏನೋ? ಕೆಲವು ತಿಂಗಳ ಹಿಂದೆ ಪಕ್ಕದ್ಮನೆ ಪದ್ಮ ನಂಗೆ ಬೇಕು ಅಂತ ಅದ್ಯಾರೋ ಉಮೇಶ್ ಅನ್ನೋನು ಮೆಸೇಜ್ ಮಾಡಿ ರಾಗಿಣಿಗೆ ಕಿರಿಕ್ ಮಾಡಿದ್ದ. ಅದು ಮುಗಿದುಹೋದ ಕಥೆ ಈಗ ರಾಗಿಣಿಯ ಫುಲ್ ಥ್ರಿಲ್ಲಾಗಿದ್ದಾರೆ ಎಂಜಾಯ್ಮೆಂಟ್ ಮೂಡ್ನಲ್ಲಿದ್ದಾರೆ.

ಇತ್ತೀಚೆಗೆ ರಾಗಿಣಿ ದ್ವಿವೇದಿ 'ಬಸವಣ್ಣ' ಶೂಟಿಂಗ್ ಮುಗಿಸಿ ಸ್ವಲ್ಪ ಫ್ರೀಯಾಗಿದ್ರು. ತಮಿಳು, ತೆಲುಗು, ಬಾಲಿವುಡ್ ಸಿನಿಮಾಗಳು ಮುಗಿದುಹೋಗಿವೆ. ಸದ್ಯ ಕನ್ನಡ ಸಿನಿಮಾಗಳಲ್ಲೇ ಫುಲ್ ಬ್ಯುಸಿಯಾಗಿರೋ ಗ್ಲಾಮರ್ಡಾಲ್ ಇತ್ತೀಚೆಗೆ ಸಂಜೆ ವೇಳೆ ಲೂಸ್ ಮಾದ ಯೋಗಿ ಜೊತೆ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಿದ್ದಾರಂತೆ. [ವೆಟ್ ಅವತಾರದಲ್ಲಿ ರಾಗಿಣಿ]


ಅಂದಹಾಗೆ, ರಾಗಿಣಿ ಯೋಗಿಯನ್ನ ಭೇಟಿಯಾಗಿರೋದು ಗರುಡಮಾಲ್ ಬಳಿ ಇರೋ ನೋ ಲಿಮಿಟ್ಸ್ ಪಬ್ನಲ್ಲಿ. ರಾಗಿಣಿ ಯೋಗಿ ಪಬ್ನಲ್ಲಿ ಡಾನ್ಸ್ ಕೂಡ ಮಾಡಿದ್ದಾರಂತೆ. ಇಷ್ಟಕ್ಕೂ ಈ ಡಾನ್ಸ್ ಮಾಡಿರೋದು 'ಪರಪಂಚ' ಸಿನಿಮಾದ ಐಟಂ ಸಾಂಗ್ಗೆ ಅನ್ನೋ ಸುದ್ದಿ ಬಂದಿದೆ. ಇದೂ ಪ್ರಚಾರ ಗಿಟ್ಟಿಸಿಕೊಳ್ಳಲು ನಡೆಸಿದ ಗಿಮಿಕ್ ಅಲ್ಲ ತಾನೆ ಅಂತ ಚಿತ್ರಪ್ರೇಮಿಗಳು ಕೇಳುತ್ತಿದ್ದಾರೆ. ['ಪರಪಂಚ'ದಲ್ಲಿ ನಟ ದಿಗಂತ್ ಬೆತ್ತಲೆ ಓಟ]

ಈ ಹಿಂದೆ 'ಬಂಗಾರಿ' ಸಿನಿಮಾದಲ್ಲಿ ಜೋಡಿಯಾಗಿದ್ದ ಯೋಗಿ ರಾಗಿಣಿ ಈಗ ಐಟಂ ಸಾಂಗ್ನ ಮೂಲಕ ಜೋಡಿಯಾಗಿದ್ದಾರೆ. ರಾಗಿಣಿ ಮತ್ತು ಯೋಗಿ ನಡುವೆ ಏನೋ ನಡೆಯುತ್ತಿದೆ ಎಂದು ಸಾಕಷ್ಟು ಗುಲ್ಲು ಕೂಡ ಹಬ್ಬಿತ್ತು. ಆ ಸುದ್ದಿಯನ್ನು ಇಬ್ಬರೂ ಸಾರಾಸಗಟಾಗಿ ನಿರಾಕರಿಸಿದ್ದರು. ಅವರೇನಾದರೂ ಮಾಡಿಕೊಳ್ಳಲಿ, ನಮಗ್ಯಾಕೆ ಅವರ ವೈಯಕ್ತಿಕ ವಿಷಯ? ಸದ್ಯಕ್ಕೆ, ಎದುರು ನೋಡೋಣ ಭಟ್ರು ರಾಗಿಣಿ, ದಿಗಂತ್ ಯೋಗಿಯ ಪರಪಂಚ..

English summary
What Ragini Dwivedi and Loose Mada Yogesh did inside a bar and pub in Bangalore? Do you think something cooking between them? Don't jump to any kind of conclusion. Of course, they danced together but for Yogaraj Bhat's movie Parapancha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada