»   » ಕಮಲ್ ಚಿತ್ರ 'ಉತ್ತಮ ವಿಲನ್' ಬಿಡುಗಡೆ ಯಾವಾಗ?

ಕಮಲ್ ಚಿತ್ರ 'ಉತ್ತಮ ವಿಲನ್' ಬಿಡುಗಡೆ ಯಾವಾಗ?

Posted By:
Subscribe to Filmibeat Kannada

ಕಮಲ್ ಹಾಸನ್ ಅವರ ಕೋಟ್ಯಾಂತರ ಅಭಿಮಾನಿಗಳು ಕಾತುರ, ಕುತೂಹಲದಿಂದ ಎದುರುನೋಡುತ್ತಿರುವ ಚಿತ್ರ 'ಉತ್ತಮ ವಿಲನ್'. ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವರೆಲ್ಲಾ ಇದ್ದಾರೆ.

ಆದರೆ ಈ ಚಿತ್ರ ಬಿಡುಗಡೆಯಾವುದು ಇನ್ನೂ ತಡವಾಗಬಹುದು ಎನ್ನುತ್ತಿವೆ ಮೂಲಗಳು. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ ಏಪ್ರಿಲ್ 2ಕ್ಕೆ 'ಉತ್ತಮ ವಿಲನ್' ತೆರೆಗೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಏಪ್ರಿಲ್ 10ಕ್ಕೆ ಮುಂದೂಡಲಾಗಿದೆ. [ಮಲ್ 'ಉತ್ತಮ ವಿಲನ್' ಕನ್ನಡಕ್ಕೆ ರೀಮೇಕ್ ಆಗುತ್ತಾ?]

When should release Kamal Hassan's Uttama Villain?

ಆದರೆ ಏಪ್ರಿಲ್ 10ಕ್ಕೆ ಚಿತ್ರ ತೆರೆಕಾಣುವುದು ಅನುಮಾನ ಎನ್ನಲಾಗಿದೆ. ಸೆನ್ಸಾರ್ ಬಳಿಕ ಚಿತ್ರ ಯಾವಾಗ ಬಿಡುಗಡೆ ಎಂಬುದು ಗೊತ್ತಾಗಲಿದೆಯಂತೆ. ತಿರುಪತಿ ಬ್ರದರ್ಸ್ ನಿರ್ಮಿಸಿರುವ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ರಮೇಶ್ ಅರವಿಂದ್ ಅವರು ಆಕ್ಷನ್ ಕಟ್ ಹೇಳಿರುವುದು ಪ್ರೇಕ್ಷಕರ ಕುತೂಹಲಕ್ಕೆ ಇನ್ನೊಂದು ಕಾರಣ.

ಈ ಚಿತ್ರದ ತಾರಾಬಳಗದಲ್ಲಿ ಬಹಳಷ್ಟು ಖ್ಯಾತನಾಮರು ಇದ್ದಾರೆ. ಜಯರಾಮ್, ಊರ್ವಶಿ, ಪೂಜಾ ಕುಮಾರ್, ಆಂಡ್ರಿಯಾ, ದಿವಂಗತ ಕೆ ಬಾಲಚಂದರ್ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ರಮೇಶ್ ಅರವಿಂದ್ ನಿರ್ದೇಶನದ ಚೊಚ್ಚಲ ತಮಿಳು ಚಿತ್ರವಿದು. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ಗಿಬ್ರಾನ್ ಅವರ ಸಂಗೀತ ನಿರ್ದೇಶನ ಇರುವ ಚಿತ್ರದ ಆಡಿಯೋ ಈಗಾಗಲೆ ಬಿಡುಗಡೆಯಾಗಿದೆ. ಉತ್ತಮ ವಿಲನ್ ಚಿತ್ರದಲ್ಲಿ ಕಮಲ್ ಅವರು ಎರಡು ಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟನಾಗಿ ಅವರದು ಎರಡು ಭಿನ್ನ ಪಾತ್ರಗಳು. ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಕಮಲ್ ಅವರು ಕೇವಲ ನಟನೆಗಷ್ಟೇ ಸೀಮಿತವಾಗದೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಬರೆದಿರುವುದು. (ಏಜೆನ್ಸೀಸ್)

English summary
Kamal Hassan's 'Uttama Villain' movie release again postponed. The film directed by Ramesh Arvind would hit the screens on April 10, but the latest news is that the film will not release on April 10 and the team will decide the date of release after the censor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada