»   » 'ಕೆಂಪೇಗೌಡ' ನಿರ್ಮಾಪಕ ಶಂಕರ್ ಗೌಡ ನಾಪತ್ತೆ!

'ಕೆಂಪೇಗೌಡ' ನಿರ್ಮಾಪಕ ಶಂಕರ್ ಗೌಡ ನಾಪತ್ತೆ!

Posted By: ಜೀವನರಸಿಕ
Subscribe to Filmibeat Kannada

ಇಂಡಷ್ಟ್ರಿಯಲ್ಲಿ ಹಿಂಗೇ ಒಬ್ಬ ಸಿನಿಮಾ ರಿಪೋರ್ಟರ್ 'ಗೋವಾ' ಸಿನಿಮಾದ ಚಿತ್ರೀಕರಣಕ್ಕೆ ಹೋಗಿದ್ರಂತೆ. ಅಲ್ಲಿ ಸಿಕ್ಕ ಶಂಕರೇಗೌಡ ಅನ್ನೋ ದಪ್ಪ ಮೀಸೆಯ ನಿರ್ಮಾಪಕನ ಒಂದು ಇಂಟರೆಷ್ಟಿಂಗ್ ಕಥೆ ಇದು. ಶೂಟಿಂಗ್ ಸೆಟ್ ನಲ್ಲಿ ನಿರ್ಮಾಪಕ ಶಂಕರೇಗೌಡ ರಾಜ್ಯದ ಪ್ರತಿಷ್ಠಿತ ಮಾಧ್ಯಮದ ವರದಿಗಾರರೊಬ್ಬರನ್ನ ಕರೆದು 'ನಾನ್ಯಾರು ಗೊತ್ತಾ ಅಂದ್ರಂತೆ.'

ಪಾಪ ಹೊಸ ವರದಿಗಾರ "ಸರ್ ನೀವು ಕೆಂಪೇಗೌಡ ಸಿನಿಮಾ ಪ್ರೊಡ್ಯೂಸರ್ ಅಂದ್ರಂತೆ", ಅದಕ್ಕಿಂತ ಹಿಂದೆ ಏನೇನ್ ಮಾಡಿದ್ದೀನಿ ಗೊತ್ತಿಲ್ವಾ ಅಂತ ದರ್ಪದಿಂದ ಕೇಳಿದ್ರಂತೆ. ಇಲ್ಲಾ ಸರ್ ಅಂತ ರಿಪೋರ್ಟರ್ ಸುಮ್ಮನಾಗಿದ್ದಾರೆ. ಇದ್ರಿಂದ ಕೋಪಗೊಂಡ ಶಂಕರೇಗೌಡ. [ಸುದೀಪ್ ಅನುಭವಿಸುತ್ತಿರುವ 'ನೋವು' ನಿಮಗ್ಗೊತ್ತಾ?]

"ನಿನ್ನನ್ಯಾರೋ ರಿಪೋರ್ಟರ್ ಅಂದಿದ್ದು, ಇರು ನಿಮ್ಮ ಹೆಡ್ ಗೆ ಫೋನ್ ಮಾಡ್ತೀನಿ ಅಂತ ಫೋನ್ ಎತ್ತಿಕೊಂಡಿದ್ದಾರೆ. ಅಷ್ಟರಲ್ಲೇ ಹೊಸಬ ಸರ್ ನಂಗೆ ಗೊತ್ತಿಲ್ಲ ತಿಳ್ಕೋತೀನಿ ಅಂತ ರಿಪೋರ್ಟರ್ ತರಗುಟ್ಟಿಹೋಗಿದ್ದಾನೆ. ನಾನು ಏನು ಅಂದ್ಕೊಂಡಿದ್ದಿಯಾ 'ಗೋವಾ' ಸಿನಿಮಾನಾ ಆಗಸ್ಟ್ ತಿಂಗಳಲ್ಲೇ ತೆರೆಗೆ ತರ್ತೀನಿ ಅಂತ ಮೀಸೆ ಮೇಲೆ ಕೈ ಇಟ್ಟಿದ್ದಾರೆ.

ಪಾಪ ಬಡಕಲು ರಿಪೋರ್ಟರ್ ಇವರ್ಯಾರೋ ಡಾ. ರಾಜ್ ಕುಮಾರ್ ಗೆ ಸಿನಿಮಾ ಪ್ರೊಡ್ಯೂಸ್ ಮಾಡಿದ, ರವಿಚಂದ್ರನ್ ಫ್ಯಾಮಿಲಿಯಂತಹಾ ವೀರಾಸ್ವಾಮಿಯವ್ರಂತಹಾ ವ್ಯಕ್ತಿ ಇರ್ಬೇಕು ಅಂತ ತಲೆ ಕೆಡಿಸಿಕೊಂಡು ಸುಮ್ಮನಾಗಿದ್ದಾರೆ.

ಶಂಕರೇಗೌಡರ ಎಡವಟ್ಟು ಪುರಾಣ

ಇದು ಶಂಕರೇಗೌಡ ಅನ್ನೋ ನಿರ್ಮಾಪಕರಿಗಿರೋ ದರ್ಪದ ಒಂದು ಸ್ಯಾಂಪಲ್ ಅಷ್ಟೇ ಅನ್ನೋ ಮಾತು ಗಾಂಧಿನಗರದ ಚಳ್ಳೆಪಿಳ್ಳೆಗಳಿಗೂ ಗೊತ್ತು. ಈ ತರಹ ದರ್ಪ ತೋರಿದ ನಿರ್ಮಾಪಕ ಶಂಕರೇಗೌಡರ ಎಡವಟ್ಟು ಪುರಾಣ ಒಂದೆರಡಲ್ಲವಂತೆ.

ಶಂಕರೇಗೌಡ ಈಗ ಇಂಡಷ್ಟ್ರಿಯಲ್ಲೇ ಕಾಣಿಸ್ತಿಲ್ಲ

ಕಷ್ಟದಲ್ಲಿದ್ದ ನಿರ್ಮಾಪಕರಿಗೆ ಎರಡೆರೆಡು ಸಿನಿಮಾ ಮಾಡಿಕೊಟ್ಟ ಸುದೀಪ್ ಗೆ ಗೆಳೆಯ. ಸುದೀಪು ಚಿನ್ನ ಸುದೀಪು ಅಂತ ಆಪು ಇಟ್ರಂತೆ ಶಂಕರೇಗೌಡ. ಹಾಗಾಗೀನೇ ಸುದೀಪ್ ಜೊತೆಗೆ ಅಂಟಿಕೊಂಡಿರ್ತಿದ್ದ ಶಂಕರೇಗೌಡ ಈಗ ಇಂಡಷ್ಟ್ರಿಯಲ್ಲೇ ಕಾಣಿಸ್ತಿಲ್ಲ. ರಾಜ್ ಕಪ್ ನಲ್ಲಿ ಸಿಸಿಎಲ್ ನಲ್ಲಿ ಸುದೀಪ್ ಗಿಂತ ಮಿಂಚ್ತಿದ್ದಿದ್ದು ಈ ಶಂಕರ್ ಗೌಡ.

ರೀಮೇಕ್ ಸಿನಿಮಾ ಹಣೆಪಟ್ಟಿ ಹೊತ್ತುಕೊಂಡ ಕಿಚ್ಚ

ಕೆಂಪೇಗೌಡದಂತಹ ರೀಮೇಕ್ ಸಿನಿಮಾ ಮಾಡಿಸಿಕೊಳ್ಳೋವಾಗ ಇದ್ದ ನಿಯತ್ತು, ಚಿತ್ರ ಗೆದ್ದ ಮೇಲೆ ಇರ್ಲಿಲ್ಲವಲ್ಲ ಅಂತ ಕಿಚ್ಚನಿಗೆ ತುಂಬಾನೇ ಬೇಸರವಾಗಿದ್ಯಂತೆ. ಕಷ್ಟದಲ್ಲಿರೋ ಗೆಳೆಯ ಅಂತ ಕಿಚ್ಚ ನಟನೆ ಜೊತೆ ನಿರ್ದೇಶನ ಎರಡನ್ನೂ ಮಾಡಿದ್ರೂ ಜೊತೆಗೆ ರೀಮೇಕ್ ಸಿನಿಮಾ ಮಾಡ್ತಾರೆ ಅನ್ನೋ ಹಣೆಪಟ್ಟಿಯನ್ನೂ ಹೊತ್ತುಕೊಂಡ್ರು.

ಗೆಳೆಯನ ನೋವು ಮರೆತ ನಿರ್ಮಾಪಕ

ಆದರೆ ಈಗ ನಿರ್ಮಾಪಕ ನಾಪತ್ತೆ. ಸಿನಿಮಾ ಮಾಡಿದ ತಪ್ಪಿಗೆ ನಿರ್ದೇಶಕರಿಗೆ ಕೋಟಿ ಕೋಟಿ ಹಣ ಮಾಡಿಕೊಟ್ಟ ಸೂಪರ್ ಹಿಟ್ ನಿರ್ದೇಶಕ, ನಟ ಕಿಚ್ಚ ನೋವಲ್ಲಿದ್ದಾರೆ.

ಇನ್ನು ಎರಡೆರೆಡು ಸಿನಿಮಾ ನಿರ್ದೇಶನ ಮಾಡಿಸಿಕೊಂಡ ಶಂಕರ್ ಗೌಡ ಕೈಯ್ಯಿಂದ ಕಿಚ್ಚ ಒಂದು ಬಿಡಿಗಾಸನ್ನೂ ತೆಗೆದುಕೊಳ್ಳಲಿಲ್ಲವಂತೆ.

ನಿದ್ದೆಯಲ್ಲೇ ಇರುತ್ತಿದ್ದ ನಿರ್ಮಾಪಕ

ಅದರಲ್ಲೂ 'ವರದನಾಯಕ' ಸಿನಿಮಾಗೆ ಸೂಪರ್ ಸ್ಟಾರ್ ಕಿಚ್ಚ 'ಈಗ'ದಂತಹ ಸಿನಿಮಾ ನಡುವೇನೂ ಟೈಂ ಮಾಡ್ಕೊಂಡು 45 ದಿನಗಳನ್ನ ಕೊಟ್ಟಿದ್ದಾರೆ. ಅಲ್ಲಿ ಸುದೀಪ್ ಸೆಟ್ ಗೆ ಬೆಳಿಗ್ಗೆ ಎದ್ದು ಬಂದ್ರೂ ನಿರ್ಮಾಪಕ, ನಿರ್ದೇಶಕರು ಇನ್ನೂ ನಿದ್ರೆಯಲ್ಲಿರ್ತಿದ್ರಂತೆ.

ಶಂಕರ್ ಗೌಡರ 'ಗೋವಾ' ಇನ್ನೂ ತೆರೆಗೆ ಬಂದಿಲ್ಲ

ಇಷ್ಟೆಲ್ಲಾ ಮಾಡೀನೂ ಶಂಕರ್ ಅನ್ನೋ ನಿರ್ಮಾಪಕ ಯಾಕೆ ಹೀಗೆ ಮಾಡಿದ್ರೂ ಗೊತ್ತಿಲ್ಲ. ಶಂಕರ್ ಗೌಡ ಬಡ ರಿಪೋರ್ಟರ್ ಗೆ ಒಂದು ತಿಂಗಳು ಅಂತ ಚಾಲೆಂಜ್ ಹಾಕಿ 1 ವರ್ಷ ನಾಲ್ಕು ತಿಂಗಳಾಗಿದೆ. 'ಗೋವಾ' ಇನ್ನೂ ತೆರೆಗೆ ಬಂದಿಲ್ಲ. ಶಂಕರ್ ಗೌಡ ಎಲ್ಲಿದ್ದಾರೋ ಗೊತ್ತಿಲ್ಲ ಅಂತ ಚಂದನವನದ ಚಿಟ್ಟೆಗಳು ಹೂವಿಂದ ಹೂವಿಗೆ ಹಾರ್ತಾ ಸುದ್ದಿ ಹರಡ್ತಿವೆ.

English summary
Where is Kannada movie producer Shankar Gowda? who has produced Kempe Gowda, Varadanayaka movies with Sudeep. His one more movie 'Goa' not yet released. Where the haughty producer is actually?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada