»   » ಪೂಜಾ ಜೊತೆ ಆನಂದ್ ನಿಶ್ಚಿತಾರ್ಥ ಮುರಿದಿದ್ದು ಯಾಕೆ?

ಪೂಜಾ ಜೊತೆ ಆನಂದ್ ನಿಶ್ಚಿತಾರ್ಥ ಮುರಿದಿದ್ದು ಯಾಕೆ?

Posted By:
Subscribe to Filmibeat Kannada

"ನನ್ನ ಕರಿಯ ಅಂತಾರೆ. ನನ್ನ ಬಣ್ಣ ಅವರಿಗೆ ಗೊತ್ತಿರಲಿಲ್ಲವಾ? ಇಡ್ಲಿ ಸಾಂಬಾರ್ ಚಟ್ನಿ ಗಂಧಿ ಪದಾರ್ಥಗಳಂತೆ. ಕನ್ನಡಿಗರು ತಿನ್ನುವ ಇಡ್ಲಿ ಸಾಂಬಾರ್ ಹೊಲಸು ಪದಾರ್ಥಗಳಾ? ಪೂಜಾ ಗಾಂಧಿ ಮದುವೆಯಾದ ಮೇಲೆ ಪೂಜಾ ಗೌಡ ಆಗಬಾರದಂತೆ. ಯಾಕೆ ಗೌಡ ಎಂಬ ಪಂಗಡಕ್ಕೆ ಮಹತ್ವವೇ ಇಲ್ಲವಾ?"

ತನ್ನ ಜಾತಿಯ ಬಗ್ಗೆ, ತನ್ನ ಬಣ್ಣದ ಬಗ್ಗೆ, ತಮ್ಮ ಅಂತಸ್ತಿನ ಬಗ್ಗೆ, ತಾವಿರುವ ಎರಡು ರೂಂಗಳ 'ಸಣ್ಣ' ಮನೆಯ ಬಗ್ಗೆ, ದಕ್ಷಿಣ ಭಾರತೀಯರ ಬಗ್ಗೆ ಅವಹೇಳನಕಾರಿಯಾಗಿ ಪೂಜಾ ಗಾಂಧಿ ಅವರ ತಾಯಿ ಜ್ಯೋತಿ ಗಾಂಧಿ ಮಾತನಾಡಿರುವ ಬಗ್ಗೆ ತೀರ ಘಾಸಿಗೊಂಡಿರುವ ಆನಂದ್ ಗೌಡ ಅವರು ಪೂಜಾ ಗಾಂಧಿ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ.

ಆಕ್ರೋಶಭರಿತರಾಗಿ, ಆವೇಶದಿಂದ, ನೋವಿನಿಂದ ಆನಂದ್ ಗೌಡ ಅವರು ನೋವು, ಅವಮಾನವನ್ನು ತೋಡಿಕೊಂಡಿದ್ದು ಯಾಕೆ? ಉದ್ಯಮಿ ಆನಂದ್ ಗೌಡ ಅವರು ಪಬ್ಲಿಕ್ ಟಿವಿಯ ಕೀರ್ತಿ ಶಂಕರಘಟ್ಟ ಜೊತೆ ನಡೆಸಿದ ಸಂದರ್ಶನದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರ ನೋವಿನ ಕಥೆಯನ್ನು ಅವರ ಮಾತಲ್ಲೇ ಕೇಳಿರಿ. [ಪೂಜಾ, ಆನಂದ್ ನಿಶ್ಚಿತಾರ್ಥದ ಗ್ಯಾಲರಿ]

ಪೂಜಾ ತಾಯಿ ಭಾರೀ ಆಸೆಬುರುಕ ಹೆಂಗಸು

"ಪೂಜಾ ತಾಯಿ ಜಗತ್ತಿನ ಅತ್ಯಂತ ಆಸೆಬುರುಕ ಹೆಂಗಸು. ಹಣ, ಒಡವೆ, ಆಸ್ತಿಯ ಬಗ್ಗೆ ಸಿಕ್ಕಾಪಟ್ಟೆ ಆಸೆಬುರುಕತನ. ನನಗೆ ತುಂಬಾ ಬೇಜಾರಾಗಿದೆ. ಯಾವುದೇ ಕಾರಣಕ್ಕೂ ಪೂಜಾ ಜೊತೆ ನಾನು ಮದುವೆಯಾಗುವುದಿಲ್ಲ. ಜಾತಿ ನಿಂದನೆ ಮಾಡಿದ್ದನ್ನು ನಾನು ಸಹಿಸುವುದಿಲ್ಲ. ನಾನು ಈ ಮದುವೆ ಮುರಿದುಕೊಂಡಿದ್ದೇನೆ."

ಕರಿಯನಂತೆ, ಇಡ್ಲಿ ಸಾಂಬಾರ್ ಗಂಧಿಯಂತೆ

"ಪೂಜಾ ಗಾಂಧಿ ಸಂಪೂರ್ಣವಾಗಿ ತನ್ನ ತಾಯಿಯ ಹಿಡಿತದಲ್ಲಿ ಇದ್ದಾರೆ. ಅವರು ಗಂಡಸರನ್ನು, ದಕ್ಷಿಣ ಭಾರತೀಯರನ್ನು, ದಕ್ಷಿಣ ಭಾರತ ಆಹಾರವನ್ನು, ನಮ್ಮ ಬಣ್ಣವನ್ನು, ನಮ್ಮ ಜಾತಿಯನ್ನು ಗೌರವಿಸುವುದನ್ನು ಕಲಿಯಬೇಕು. ನನ್ನನ್ನು ಕೋಕಾಕೋಲಾಗೂ ಹೋಲಿಸಿದ್ದಾರೆ. ನಾನು ಕರಿಯ ಅಂತೆ, ಇಡ್ಲಿ ಸಾಂಬಾರ್ ಗಂಧಿ ಪದಾರ್ಥಗಳಂತೆ!"

ಪೂಜಾ ನನ್ನ ಪರವಾಗಿ ನಿಲ್ಲಬೇಕಾಗಿತ್ತು

"ನನಗೆ ಪೂಜಾ ಅಪ್ಪ ಮತ್ತು ತಂಗಿ ರಾಧಿಕಾ ಗಾಂಧಿಯ ಬಗ್ಗೆ ಗೌರವವಿದೆ. ಅವರು ನಮ್ಮ ಸಂಬಂಧದಲ್ಲಿ ತಲೆ ತೂರಿಸಲು ಹೋಗುವುದಿಲ್ಲ. ಆದರೆ, ತಾಯಿ ಇದ್ದಾಳಲ್ಲ ಮಹಾ ಕೊಳಕು ಹೆಂಗಸು. ಪೂಜಾ ತಾಯಿ ಮಾತ್ರವಲ್ಲ ಪೂಜಾಳಲ್ಲೂ ತೊಂದರೆಯಿದೆ. ಮೂರು ವರ್ಷದಿಂದ ನನ್ನ ಜೊತೆ ಗೆಳೆತನ ಬೆಳೆಸಿದ್ದ ಪೂಜಾ ಈ ಸಂದರ್ಭದಲ್ಲಿ ನನ್ನ ಪರವಾಗಿ ನಿಲ್ಲಬೇಕಾಗಿತ್ತು."

ವಿಪರೀತ ಮಾನಸಿಕ ಹಿಂಸೆ ನೀಡಿದ್ದಾರೆ

"ನನ್ನ ಮನೆಯಲ್ಲಿ ಕೇವಲ ಎರಡು ರೂಂಗಳಿವೆಯಂತೆ. ನನ್ನ ಮನೆ ಚಿಕ್ಕದಾಗಿರುವುದು ಅವರಿಗೆ ಮೊದಲೇ ಗೊತ್ತಿತ್ತು. ಒಂದು ಮನೆಯ ಮೇಲೆ ಇನ್ನೊಂದು ಮನೆ ಕಟ್ಟಲು ಸಾಧ್ಯವೇ ಇಲ್ಲ. ಅಷ್ಟೊಂದು ಆಸೆಬುರುಕಳಾಗಿರುವ ಪೂಜಾ ತಾಯಿ ಹಣ ಕೇಳಿದ್ದರೆ ನಾನೇ ಕೊಡುತ್ತಿದ್ದೆ. ಆಕೆ ನನಗೆ ವಿಪರೀತವಾಗಿ ಮಾನಸಿಕ ಹಿಂಸೆ ನೀಡಿದ್ದಾರೆ."

ಯಾವುದೇ ಕಾರಣಕ್ಕೂ ಮದುವೆಯಾಗಲ್ಲ

"ಪೂಜಾಗೆ ಕೂಡ ರಾಜಕೀಯವಾಗಿ ಎಷ್ಟೊಂದು ಸಹಾಯ ಮಾಡಿದ್ದೇನೆ. ನಾನು ಸ್ವತಃ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರೂ, ಆಕೆ ಜೆಡಿಎಸ್ ಬಿಡ್ತೀನೆಂದಾಗ, ನಾನೇ ಸ್ವತಃ ಯಡಿಯರಪ್ಪ ಅವರಿಗೆ ಪೂಜಾಳನ್ನು ಪರಿಚಯ ಮಾಡಿಸಿ ಕರ್ನಾಟಕ ಜನತಾ ಪಕ್ಷಕ್ಕೆ ಸೇರಿಸಿದ್ದೇ ನಾನು. ಈಗ ಹೀಗೆ ಈಕೆ ಮಾಡುತ್ತಾಳಂತ ಕನಸಿನಲ್ಲಿಯೂ ನೆನೆಸಿರಲಿಲ್ಲ."

English summary
Why did businessman Anand Gowda break up with Kannada actress Pooja Gandhi? Anand shares his bitter experience with his could have been mother-in-law Jyothi Gandhi. Anand says Jyothi called him black and compared him to Cocacola and called Idli sambar dirty food.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada