»   »  ಟ್ಯಾಗೋರ್ ಗೀತೆಗಳಿಗೆ ಮರುಳಾಗಿದ್ದ ಜಾಕ್ಸನ್

ಟ್ಯಾಗೋರ್ ಗೀತೆಗಳಿಗೆ ಮರುಳಾಗಿದ್ದ ಜಾಕ್ಸನ್

Subscribe to Filmibeat Kannada

ಲಂಡನ್, ಜು. 1 : ಪಾಪ್ ಲೋಕದ ಅನರ್ಘ್ಯ ರತ್ನ ಮೈಕಲ್ ಜಾಕ್ಸನ್ ಅವರಿಗೆ ಭಾರತದ ಬಗ್ಗೆ ವಿಶೇಷ ಪ್ರೀತಿ ಇತ್ತು. ಸ್ಲಂಡಾಗ್ ಮಿಲೇನಿಯರ್ ಚಿತ್ರಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರೊಂದಿಗೆ ನೊಬೆಲ್ ಪುರಷ್ಕೃತ ಸಾಹಿತಿ ರವೀಂದ್ರನಾಥ್ ಟ್ಯಾಗೋರ್ ಅವರ ಗೀತೆಗೆ ರಾಗ ಸಂಯೋಜನೆ ಮಾಡುವ ಹಂಬಲ ಅವರಿಗಿತ್ತು ಎಂದು ತಿಳಿದುಬಂದಿದೆ.

ಮೈಕಲ್ ಜಾಕ್ಸನ್ ಅವರು ತಮ್ಮ ಕೊನೆ ದಿನಗಳಲ್ಲಿ ಪರಿಸರ ಕುರಿತ ಗೀತೆ ರಚಿಸುವ ಸಲುವಾಗಿ ರವೀಂದ್ರನಾಥ್ ಟ್ಯಾಗೋರ್ ಅವರ ಗೀತೆಗಳನ್ನು ಓದುತ್ತಿದ್ದರು. ಸ್ವರಚಿತವಾದ ಗೀತೆಯನ್ನಿಟ್ಟುಕೊಂಡು ಎಆರ್ ರೆಹಮಾನ್ ಅವರಿಂದ ಸಂಗೀತ ಸಂಯೋಜನೆ ಮಾಡಿಸುವ ಆಸೆಯನ್ನು ಜಾಕ್ಸನ್ ತಮ್ಮ ಆಪ್ತ ವಲಯದಲ್ಲಿ ವ್ಯಕ್ತಪಡಿಸಿದ್ದರು.

ಸ್ಲಂಡಾಗ್ ಮಿಲೇನಿಯರ್ ಚಿತ್ರದ ಜೈಹೋ ಹಾಡಿಗೆ ಅತೀವ ಸಂತಸ ವ್ಯಕ್ತಪಡಿಸಿದ್ದ ಜಾಕ್ಸನ್, ಮುಕ್ತ ಮನಸ್ಸಿನಿಂದ ಕೊಂಡಾಡಿದ್ದರು. ಜಗತ್ತಿಗೆ ಏಕತೆಯನ್ನು ಸಾರುವ 'ವಿ ಆರ್ ದಿ ವರ್ಲ್ಡ್' ಎಂಬ ಪದದಿಂದ ಆರಂಭವಾಗುವ ಒಂದು ಹಾಡನ್ನು ರಚಿಸುವ ಬಗ್ಗೆ ಮಾತನಾಡಿದ್ದರು. ಆದರೆ, ವಿಧಿ ಅವರನ್ನು ಬೇಗ ತನ್ನೆಡೆಗೆ ಕರೆದುಕೊಂಡುಬಿಟ್ಟಿತು ಎಂದು ಸಂಗೀತ ನಿರ್ದೇಶಕ ರೆಹಮಾನ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಜಾಕ್ಸನ್ 1996ರಂದು ಮುಂಬೈನಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದು ಅವರಾಡಿದ ಮಾತುಗಳು ಇನ್ನೂ ನನ್ನ ನೆನಪಿನಲ್ಲಿವೆ. ಭಾರತದ ಬಗ್ಗೆ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ಇಲ್ಲಿನ ಅಭಿಮಾನಿಗಳು, ಅವರು ತೋರಿಸುವ ನಿಷ್ಕಲ್ಮಶ ಪ್ರೀತಿಗೆ ಜಾಕ್ಸನ್ ಮಾರು ಹೋಗಿದ್ದರು ಎಂದು ರೆಹಮಾನ್ ಬರೆದುಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada