»   »  ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ

ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ

Posted By: Staff
Subscribe to Filmibeat Kannada
resul pookutty
ಒಟ್ಟಿನಲ್ಲಿ ನಮ್ಮ ಕನಸು ನೆರವೇರಿದೆ...ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗೆ ಒಂದಲ್ಲ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಸಂಗೀತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಧ್ವನಿಸಿದೆ.

ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಮೊದಲ ಭಾರತೀಯ ಸಂಗೀತ ನಿರ್ದೇಶಕನಾಗಿ ರೆಹಮಾನ್ ಇತಿಹಾಸ ಸೃಷ್ಟಿಸಿದ್ದಾರೆ.ಅತ್ಯುತ್ತ್ತಮ ಹಾಡು, ಅತ್ಯುತ್ತಮ ಸಂಗೀತ ವಿಭಾಗಗಳಲ್ಲಿ ರೆಹಮಾನ್ ಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಲಾಸ್ ಏಂಜಲ್ಸ್ ನ ಕೋಡಾಕ್ ಥಿಯೇಟರ್ ನಲ್ಲಿ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತು.

ಅತ್ಯುತ್ತಮ ಧ್ವನಿ ಮುದ್ರಣ ಪ್ರಶಸ್ತಿ ಪಡೆದ ರಸೆಲ್ ಪೂಕುಟ್ಟಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ''ಈ ಪ್ರಶಸ್ತಿಯನ್ನು ನಾನು ನನ್ನ ದೇಶಕ್ಕೆ ಅರ್ಪಿಸುತ್ತಿದ್ದೇನೆ. ಇದು ಬರೀ 'ಧ್ವನಿ 'ಪ್ರಶಸ್ತಿಯಲ್ಲ, ಇತಿಹಾಸದ ಒಂದು ಸಣ್ಣ ತುಣುಕನ್ನು ನನ್ನ ಕೈಗಿತ್ತಿದ್ದಾರೆ'' ಎಂದು ಭಾವುಕರಾಗಿ ಪುಕುಟ್ಟಿ ನುಡಿದರು.

ಪ್ರಶಸ್ತಿಯನ್ನು ಕೋಟ್ಯಾಂತರ ಭಾರತೀಯರಿಗೆ ಸಮರ್ಪಿಸುತ್ತಿರುವುದಾಗಿ ಕೇರಳ ಮೂಲದಪೂಕುಟ್ಟಿ ಪ್ರಕಟಿಸಿದರು. ಇಡೀ ಜಗತ್ತಿಗೆ 'ಓಂ'ಕಾರ ಶಾಂತಿ ಮಂತ್ರವನ್ನು ನೀಡಿದ, ಶ್ರೇಷ್ಠ ನಾಗರಿಕತೆಯ ದೇಶದಿಂದ ನಾನು ಬಂದಿದ್ದೇನೆ. ಆದಕಾರಣ ಈ ಪ್ರಶಸ್ತಿಯನ್ನು ನನ್ನ ದೇಶಕ್ಕೆ ಆರ್ಪಿಸುತ್ತಿರುವುದಾಗಿ ಅವರು ತಿಳಿಸಿದರು.

(ಏಜೆನ್ಸೀಸ್)
ಗ್ಯಾಲರಿ: ಮಂಗಳೂರು ಬೆಡಗಿ ಫ್ರೀಡಾ ಪಿಂಟೋ
ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ 8 ಆಸ್ಕರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada