»   » ಮೈಕೇಲ್ ಜಾಕ್ಸನ್ ವಕೀಲ ನಿಗೂಢ ಸಾವು

ಮೈಕೇಲ್ ಜಾಕ್ಸನ್ ವಕೀಲ ನಿಗೂಢ ಸಾವು

Posted By:
Subscribe to Filmibeat Kannada

ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ಸಾವಿನ ಸುದ್ದಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಬಂದಿದೆ. ಇದೀಗ ಜಾಕ್ಸನ್ ಅವರ ವಕೀಲ ಪೀಟರ್ ಲೋಪೆಜ್(60) ಅವರು ನಿಗೂಢವಾಗಿ ಸಾವಪ್ಪಿರುವ ಸುದ್ದಿ ಬಂದಿದೆ. ತಮ್ಮ ಸ್ವಗೃಹದಲ್ಲಿ ಮೃತಪಟ್ಟಿರುವ ಪೀಟರ್ ಅವರ ತಲೆಗೆ ಬಂದೂಕಿನಿಂದ ಹೊಡೆದ ಗುರುತಾಗಿದೆ.

ಪೀಟರ್ ಅವರು ಜಾಕ್ಸನ್ ಅವರ ಎಲ್ಲಾ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಜಾಕ್ಸನ್ ಅವರ ಹಣಕಾಸು ವ್ಯವಹಾರಗಳನ್ನು ಪೀಟರ್ ಅವರಿಗೆ ಹಸ್ತಾಂತರಿಸಲಾಗಿತ್ತು. ಜಾಕ್ಸನ್ ಅವರಿಗೆ ಸಹಾಯ ಮಾಡಿದ್ದ ಪೀಟರ್ ದಿವಾಳಿತನದಿಂದ ಜಾಕ್ಸನ್ ರನ್ನು ಪಾರು ಮಾಡಿದ್ದ.

ಹಾಲಿವುಡ್ ತಾರೆ ಕ್ಯಾಥೆರಿನ್ ಬಾಚ್ ಅವರ ಪತಿ ಪೀಟರ್ ಲೋಪೆಜ್. ಜಾಕ್ಸನ್ ಸಾವಿನಂತೆಯೇ ಪೀಟರ್ ಸಾವು ಸಹ ನಿಗೂಢವಾಗಿದೆ. ಒಬ್ಬ ಉತ್ತಮ ತಂದೆ ಹಾಗೂ ಗಂಡ ಎನ್ನಿಸಿಕೊಂಡಿದ್ದ ಪೀಟರ್ ಅವರ ಸಾವಿಗೆ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ. ಪೀಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಅವರ ಅದು ಹತ್ಯೆಯೇ ಎಂಬುದು ಪೊಲೀಸರು ಪತ್ತೆಹಚ್ಚಬೇಕಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada