»   » ಇಂಡಿಯಾ ಟ್ರಿಪ್ ಕ್ಯಾನ್ಸಲ್! ಏನ್ ಮಾಡೋನ?

ಇಂಡಿಯಾ ಟ್ರಿಪ್ ಕ್ಯಾನ್ಸಲ್! ಏನ್ ಮಾಡೋನ?

Subscribe to Filmibeat Kannada

ಈ ಸೆಲೆಬ್ರಿಟಿಗಳು ಯಾವ ಪರಿ ಸೆಕ್ರೆಟ್‌ಗಳನ್ನು ಕಾಯ್ದುಕೋತಾರಂದ್ರೆ ಮಾಧ್ಯಮದ ಹದ್ದಿನ ಕಣ್ಣಿಗೆ ಬಿದ್ದು ಗುಟ್ಟು ರಟ್ಟಾದದ್ದೇ ತಡ ಇದ್ದಲ್ಲಿಂದಲೇ ಮಾಯ. ಖಾಸಗಿಯಾಗಿ ವರ್ಷದ ಕೊನೆಯನ್ನು ಹಾಯಾಗಿ ಕಳೆಯೋಣವೆಂದರೆ ಪಾಪರಾಜ್ಜಿಗಳು ಬಿಡಬೇಕಲ್ಲ. ಮಾಧ್ಯಮದವರಿಗೋ ಸುದ್ದಿ ಬೇಕು. ಎಂಥವರನ್ನೂ ಬಿಡುವುದಿಲ್ಲ ಇನ್ನು ಮಾಡೋನಾಳನ್ನು ಬಿಡ್ತಾರೆಯೇ?

ಅಂತೂ ಇಂತೂ ಗುಟ್ಟು ಗುಟ್ಟಾಗಿ ವರ್ಷದ ಕೊನೆಯ ರಜಾ ಕಳೆಯೋಣವೆಂದು ಭಾರತಕ್ಕೆ ಬಂದಿದ್ದ ಅಂತಾರಾಷ್ಟ್ರೀಯ ಪಾಪ್ ತಾರೆ ಮಾಡೋನಾ, ಮಾಧ್ಯಮದವರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆಯೇ ವಿಪರೀತ ಬೇಜಾರು ಮಾಡಿಕೊಂಡು ಗಂಟುಮೂಟೆ ಕಟ್ಟಿದ್ದಾರೆ ಪಾಪ, ಏನ್ ಮಾಡೋಣ.

49ರ ಹರೆಯದ ಮಾಡೋನಾ ತನ್ನ ಗಂಡ ಗೈ ರಿಚೀ, ಮೂರು ಮಕ್ಕಳು ಲೋರ್ಡೆಸ್, ರೊಕ್ಕೊ ಮತ್ತು ಡೆವಿಡ್ ಬಂಡಾ ಹಾಗು ಕೆಲ ಗೆಳೆಯರೊಂದಿಗೆ ರಾಜಸ್ತಾನಕ್ಕೆ ಬಂದಿದ್ದಳು. ಮಾಡೋನಾಗೋ ಕುದುರೆಗಳೆಂದರೆ ವಿಪರೀತ ಹುಚ್ಚು. ಹಾಗೆಯೇ ಗಂಡ ಮಕ್ಕಳೊಂದಿಗೆ ಕುದುರೆಯ ಮೇಲೆ ಸುತ್ತಾಡಿಯೂ ಬಂದಳು. ಆದರೆ ಕುದುರೆಯ ಖರಪುಟ ಸದ್ದು ಸುಮ್ಮನಿರಲು ಸಾಧ್ಯವೇ? ಕೊನೆಗೂ ಮಾಧ್ಯಮದವರ ಕಣ್ಣಿಗೆ ಬಿದ್ದೇ ಬಿಟ್ಟಿದ್ದಾಳೆ. ಮುಂದಿನ ಯೋಜನೆಯ ಪ್ರಕಾರ ಜೈಸಲ್ಮೇರ್‌ಗೆ ಹೋಗಬೇಕಾಗಿತ್ತು. ಆದರೆ ಇದ್ದಕ್ಕಿದ್ದಂತೆ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ವಾಪಸಾಗುತ್ತಿದ್ದಾಳೆ. ಈ ಕಾರಣದಿಂದಲೇ ವಾಹನ ಮತ್ತು ಅದರ ಚಾಲಕರನ್ನೂ ಬದಲಾಯಿಸಿದ್ದಾಳೆ, ಏನ್ ಮಾಡೋಣ ಹೇಳಿ.

ಭಾರತದ ಕುದುರೆಗಳಿಗೆ, ಆತಿಥ್ಯಕ್ಕೆ ಮತ್ತು ಇಲ್ಲಿನ ಸಂಗೀತಕ್ಕೆ ಮಾರುಹೋಗಿರುವ 'ಮಟೀರಿಯಲ್ ಗರ್ಲ್' ಗಾಯಕಿ ಮುಂದೊಂದು ದಿನ ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತ ಮಿಲಾಕತ್ ಮಾಡಿದ ಫ್ಯೂಷನ್ ಟ್ರಾಕ್ ತರುವುದಾಗಿ ಹೇಳಿದ್ದರು. ಈಗ ನೋಡಿದರೆ ಕಣ್ಣಾಮುಚ್ಚಾಲೆ ಆಡುತ್ತಲೇ ಸಿಗ್ಹಾಕ್ಕೊಂಡುಬಿಟ್ಟಿದ್ದಾಳೆ. ಹೀಗಾಗಬಾರದಿತ್ತು ಪಾಪ. ಏನ್ ಮಾಡೋಣ, ಇದೆಲ್ಲಾ ಇದ್ದದ್ದೇ!

(ಏಜೆನ್ಸಿ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada