»   »  ಹಾಲಿವುಡ್ ಚಿತ್ರದಲ್ಲಿ ಹನುಮಂತನಾಗಿ ಅಮೀರ್

ಹಾಲಿವುಡ್ ಚಿತ್ರದಲ್ಲಿ ಹನುಮಂತನಾಗಿ ಅಮೀರ್

Posted By:
Subscribe to Filmibeat Kannada

ಹತ್ತಾರು ಭಾಷೆಗಳಲ್ಲಿ ಚಲನಚಿತ್ರ ರೂಪದಲ್ಲಿ ಹೊರಬಂದಿರುವ ಮಹಾಕಾವ್ಯ ರಾಮಾಯಣ ಇದೀಗ ಹಾಲಿವುಡ್ ಗೂ ಅಡಿಯಿಟ್ಟಿದೆ. ಹಾಲಿವುಡ್ 'ಹನುಮಾನ್' ಚಿತ್ರದಲ್ಲಿ ಅಮೀರ್ ಖಾನ್ ಹನುಮಂತನ ಪಾತ್ರ ಪೋಷಿಸಲಿದ್ದಾರೆ. 'ಮ್ಯಾಟ್ರಿಕ್ಸ್' ಖ್ಯಾತಿಯ ಕೀನು ರೀವ್ಸ್ ರಾಮನಾಗಿ ಅಭಿನಯಿಸಲಿದ್ದಾರೆ.

'ನಿಲ್ ಬೈ ಮೌತ್' ಖ್ಯಾತಿಯ ಗ್ಯಾರಿ ಓಲ್ಡ್ ಮನ್ ರಾವಣನಾಗಿ ಕಾಣಿಸಲಿದ್ದಾರೆ. ಹನುಮಂತನ ಪಾತ್ರವನ್ನು ಪೋಷಿಸುವಂತೆ ಈಗಾಗಲೇ ಅಮೀರ್ ಖಾನ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆದಿದೆ. ಸೀತೆಯ ಪಾತ್ರಕ್ಕಾಗಿ ಅನ್ವೇಷಣೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತ ಮುಖವನ್ನು ಹುಡುಕಲಾಗುತ್ತಿದೆ.

'ದ ಮಾಸ್ಕ್' ಖ್ಯಾತಿಯ ಚುಕ್ ರುಸ್ಸೆಲ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಉರು ಪಟೇಲ್ ಎಂಬುವವರು 'ಹನುಮಾನ್' ಚಿತ್ರವನ್ನು ಹಾಲಿವುಡ್ ನಲ್ಲಿ ನಿರ್ಮಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ 'ಹನುಮಾನ್' ಚಿತ್ರ ರಾಜಸ್ತಾನದಲ್ಲಿ ಸೆಟ್ಟೇರಲಿದೆ. ಚಿತ್ರದ ಉಳಿದ ಭಾಗವನ್ನು ಹಾಲಿವುಡ್ ಸ್ಟುಡಿಯೋಗಳಲ್ಲಿ ಚಿತ್ರೀಕರಿಸಲಾಗುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada