ಅಮ್ಮ ...ಹ್ಯಾರಿ ಪಾಟರ್ ತಮಿಳಿನಲ್ಲಿದೆ ಕನ್ನಡದಲ್ಲಿ ಏಕಿಲ್ಲ?

By Mahesh

Harry Potter 7 Release India
ಪ್ರತಿ ಸಾರಿ ಬೆರಗು ಹುಟ್ಟಿಸುವ ಮಕ್ಕಳ ನೆಚ್ಚಿನ ಚಿತ್ರ ಹ್ಯಾರಿ ಪಾಟರ್ ತನ್ನ ಸರಣಿಯ ಕೊನೆ ಚಿತ್ರದೊಂದಿಗೆ ತೆರೆಗೆ ಅಪ್ಪಳಿಸಲಿದೆ. ಇಂಗ್ಲೀಷ್ ಸೇರಿದಂತೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಜುಲೈ 15 ರಂದು ಭಾರತದಾದ್ಯಂತ ಈ ವಿಸ್ಮಯಕಾರಿ ಚಿತ್ರವನ್ನು ನೋಡಿ ಆನಂದಿಸಬಹುದು ಎಂದು ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಸಂಸ್ಥೆ ಹೇಳಿದೆ.

ಸುಮಾರು 600 ಪ್ರಿಂಟ್ ಗಳೊಂದಿಗೆ ಬರುತ್ತಿರುವ ಈ ಚಿತ್ರವನ್ನು ತಮಿಳು, ತೆಲುಗು ಬಲ್ಲ ಮಕ್ಕಳು ತಮ್ಮ ಭಾಷೆಯಲ್ಲೇ ನೋಡಿ ಆನಂದಿಸಬಹುದು. ಕನ್ನಡದ ಮಕ್ಕಳು ಇಂಗ್ಲೀಷ್ ಸಬ್ ಟೈಟಲ್ ಅಥವಾ ರಾಷ್ಟ್ರ ಭಾಷೆ ಎಂದು ಬೀಗುವ ಹಿಂದಿಯಲ್ಲಿ ಓದಿಕೊಂಡು ದೃಶ್ಯಗಳ ಅರ್ಥ ತಿಳಿಯಬಹುದು. ಹ್ಯಾರಿ ಪಾಟರ್ ನ ಕೊನೆ ಭಾಗದಲ್ಲೂ ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಥೀಮ್ ಮುಂದುವರೆಯುತ್ತದೆ. ಡೆಥ್ಲಿ ಹಾಲೋಸ್ ನ ಮುಂದುವರೆದ ಭಾಗ ಇದಾಗಿರುತ್ತದೆ.

ಡೇನಿಯಲ್ ರಾಡ್ ಕ್ಲಿಫ್, ರುಪರ್ಟ್ ಗ್ರಿಂಟ್ ಹಾಗೂ ಎಮ್ಮಾ ವಾಟ್ಸನ್ ಕ್ರಮವಾಗಿ ಹ್ಯಾರಿ ಪಾಟರ್, ರಾನ್ ವೆಸ್ಲೆ ಹಾಗೂ ಹರ್ಮೊನೆ ಗ್ರಾಂಜರ್ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಲಿದ್ದಾರೆ. ಡೇವಿಡ್ ಯೇಟ್ಸ್ ನಿರ್ದೇಶನ ಈ ಚಿತ್ರಕ್ಕಿದೆ.

ಜೆಕೆ ರೋಲಿಂಗ್ ಕಥೆಯನ್ನು ಸುಂದರವಾಗಿ ಸ್ಕ್ರಿಪ್ಟ್ ಮಾಡಿದ್ದಾರೆ ಸ್ಟೀವ್ ಕ್ಲೋವ್, ಲಿಯೊನೆಲ್ ವಿಗ್ರಾಮ್ ಗೆ ಈ ಚಿತ್ರ ನಿರ್ಮಾಣದಿಂದ ಭಾಗ್ಯದ ಬಾಗಿಲು ತೆರೆಯುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.

ಐಮ್ಯಾಕ್ಸ್ ನಲ್ಲಿ 3ಡಿ ರೂಪದಲ್ಲಿ ಕಾಣಿಸಲಿರುವ ಹ್ಯಾರಿ ಪಾಟರ್ ಉಳಿದೆಡೆ 2ಡಿ ರೂಪದಲ್ಲಿ ನಿಮ್ಮ ಮನ ತಣಿಸಲಿದ್ದಾನೆ. ಭಾಷೆ ಬರದಿರುವ ಹಾಗೂ ಡಬ್ಬಿಂಗ್ ದೇವರ ಕೃಪೆ ವಂಚಿತ ನಮ್ಮ ಕನ್ನಡದ ಕಂದಗಳು 3ಡಿ ಚಿತ್ರ ನೋಡಿ ಆನಂದಿಸಲಿ. ಕಲೆ ಭಾಷೆಗಳನ್ನು ಮೀರಿದ ಮಾಧ್ಯಮ ಎನ್ನುವ ನಮ್ಮ ಕನ್ನಡ ಚಿತ್ರರಂಗದ ದಿಗ್ಗಜರ ಮಾತಿಗೆ ಜಯವಿರಲಿ.

More from Filmibeat

English summary
Warner Bros Pictures India will release Harry Potter and the Deathly Hallows – Part 2 in 2D and 3D across India on July 15. Final adventure of Harry Potter series will be screened in English, Hindi, Tamil and Telugu with more than 600 prints.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X